ETV Bharat / city

ಕೋಟಿ ಬೆಲೆಬಾಳುವ ಕಾರುಗಳಿದ್ರೂ ಪುನೀತ್​ ರಾಜಕುಮಾರ್​ಗೆ ಸೈಕಲ್​ ಅಂದ್ರೆ ಪಂಚಪ್ರಾಣ! - ಪುನೀತ್​ ಸೈಕ್ಲಿಂಗ್​

ಪುನೀತ್​ ರಾಜ್​ಕುಮಾರ್ ತಮ್ಮ ಬಳಿ 10 ಸೈಕಲ್​ಗಳನ್ನು ಇಟ್ಟುಕೊಂಡಿದ್ದರು. ಅವುಗಳಲ್ಲಿ ಹಳದಿ ಬಣ್ಣ, ಗ್ರೇ ವಿತ್ ರೆಡ್, ಆರೆಂಜ್ ಸೈಕಲ್ ಅಪ್ಪು ಅವರಿಗೆ ಅಚ್ಚುಮೆಚ್ಚಿನ ಸೈಕಲ್​ಗಳಾಗಿದ್ದವು. ಲಾಕ್​ಡೌನ್ ಸಮಯದಲ್ಲಿ ಅಪ್ಪು ಆರೆಂಜ್ ಕಲರ್ ಸೈಕಲ್​ನಲ್ಲೇ ಬೆಂಗಳೂರಲ್ಲಿ ರೌಂಡ್ ಹಾಕಿ ಖುಷಿ ಪಟ್ಟಿದ್ದರು.

puneeth rajkumar cylcle lover
ಸ್ನೇಹಿತರೊಂದಿಗೆ ಸೈಕ್ಲಿಂಗ್​ನಲ್ಲಿ ತೊಡಗಿದ್ದ ಪುನೀತ್​.
author img

By

Published : Nov 4, 2021, 1:10 PM IST

Updated : Nov 4, 2021, 1:20 PM IST

ದೊಡ್ಮನೆ ಹುಡ್ಗ, ಯುವರತ್ನ ಪುನೀತ್​ ರಾಜಕುಮಾರ ಇನ್ನು ಕರುನಾಡಿನ ಪಾಲಿಗೆ ನೆನಪು ಮಾತ್ರ. ಅಪ್ಪು ಅವರು ಬದುಕಿದ್ದ ವೇಳೆ ಕಳೆದ ಸುಂದರ ಕ್ಷಣಗಳು, ಅವರನ್ನು ಪ್ರೀತಿಸುವ ಹೃದಯಗಳು, ವಸ್ತುಗಳನ್ನು ಕಾಡ್ತಿವೆ.

ಪುನೀತ್ ರಾಜ್‍ಕುಮಾರ್ ಬಳಿ ಲಕ್ಷ ಬೆಲೆ ಬಾಳುವ ಸೈಕಲ್​ನಿಂದ ಹಿಡಿದು, ಕೋಟಿ ಕೋಟಿ ಬೆಲೆಯ ಕಾರುಗಳಿದ್ದವು. ಫಿಟ್ನೆಸ್​ ಫ್ರೀಕ್​ನ ಅಪ್ಪುಗೆ ಕಾರುಗಳಿಗಿಂತಲೂ ಸೈಕಲ್​ ಅಂದ್ರೇನೆ ಹೆಚ್ಚು ಇಷ್ಟ ಪಡುತ್ತಿದ್ದರು.

ಪುನೀತ್​ ರಾಜಕುಮಾರ್​ಗೆ ಸೈಕಲ್​ ಅಂದ್ರೆ ಪಂಚಪ್ರಾಣ!

ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡ್ತಾ ಇದ್ದ ಪವರ್ ಸ್ಟಾರ್, ಜಿಮ್​ನಲ್ಲಿ ಕಷ್ಟಕರವಾದ ವರ್ಕ್ ಔಟ್​ಗಳನ್ನು ಹೇಗೆ ಮಾಡ್ತಿದ್ರೋ ಹಾಗೇ ಸೈಕ್ಲಿಂಗನ್ನೂ ಪ್ರೀತಿಸುತ್ತಿದ್ದರು. ಸೈಕಲ್ ಕ್ರೇಜ್ ಹೊಂದಿದ್ದ ಪುನೀತ್​ ಮಾರುಕಟ್ಟೆಗೆ ಯಾವುದೇ ಸೈಕಲ್ ಬಂದ್ರು ಅದನ್ನು ಖರೀದಿಸಿ, ತುಳಿದು ಸಂಭ್ರಮಿಸುತ್ತಿದ್ದರು. ಇದಕ್ಕೆ ಜೀವಂತ ಉದಾಹರಣೆ ಅಂದ್ರೆ ಲಾಕ್​ಡೌನ್​ ವೇಳೆ ಸೈಕಲ್ ತುಳಿದುಕೊಂಡೇ ಇಡೀ ಬೆಂಗಳೂರನ್ನು ಸುತ್ತಾಡಿದ್ದರು ಅನ್ನೋದು.

ಆದ್ರೆ ಈಗ, ಅಪ್ಪು ಅವರ ಗ್ಯಾರೇಜ್​ನಲ್ಲಿರೋ ಸೈಕಲ್​ಗಳು ತಮ್ಮ ಮಾಲೀಕನಿಲ್ಲದೆ ಸೈಲೆಂಟ್ ಆಗಿಬಿಟ್ಟಿವೆ. ಪ್ರತಿದಿನ ಒಂದು ಬಾರಿಯಾದರೂ ಅಪ್ಪು ತಮ್ಮ ಬಳಿಯಿರುವ ಯಾವುದಾದರೂ ಒಂದು ಸೈಕಲ್ ಹತ್ತಿ ಸೈಕ್ಲಿಂಗ್ ಹೋಗ್ತಿದ್ರು. 2 ವರ್ಷದ ಹಿಂದೆ ಸ್ನೇಹಿತರ ಜೊತೆಗೂಡಿ, ಪುನೀತ್ ರಾಜ್‍ಕುಮಾರ್, ನಂದಿ ಬೆಟ್ಟಕ್ಕೆ ಸೈಕ್ಲಿಂಗ್ ಹೋದ ದಿನಗಳನ್ನ ಮರೆಯೋದಿಕ್ಕೆ ಆಗೋಲ್ಲ‌.

ಇದರ ಜೊತೆಗೆ ಪುನೀತ್ ರಾಜ್‍ಕುಮಾರ್, ಬಳಿ ಇರುವ ಸೈಕಲ್ ಅನ್ನು ಯಾರಾದ್ರೂ ಕೇಳಿದ್ರೆ ಕೊಟ್ಟು ಕಳುಹಿಸ್ತಿದ್ರಂತೆ. ಅದ್ರೆ ಈಗ ಅಪ್ಪು ಅವರ ಬಳಿ ಇರುವ ಸೈಕಲ್​ಗಳನ್ನು ತುಳಿಯೋಕೆ ಯಾರು ಇಲ್ಲವಾಗಿದೆ. ಜೊತೆಗೆ ಅವುಗಳ ಬಗ್ಗೆ ತಿಳಿದುಕೊಳ್ಳೋಕೆ ಅಪ್ಪು ಅವರೇ ಇಲ್ಲದ ಕಾರಣ, ಪವರ್​ಸ್ಟಾರ್ ಗ್ಯಾರೇಜ್​ನಲ್ಲಿರೋ ಸೈಕಲ್​ಗಳು ಮಾಲೀಕನನ್ನ ಮಿಸ್ ಮಾಡ್ಕೊಳ್ತಿವೆ.

ಸದ್ಯ ಸದಾಶಿವನಗರದಲ್ಲಿರುವ ಪುನೀತ್​ ರಾಜ್​ಕುಮಾರ್ ಅವರ ಮನೆಯಲ್ಲಿ 10 ಸೈಕಲ್​ಗಳಿವೆ. ಅವುಗಳಲ್ಲಿ ಹಳದಿ ಬಣ್ಣ, ಗ್ರೇ ವಿತ್ ರೆಡ್, ಆರೆಂಜ್ ಸೈಕಲ್ ಅಪ್ಪು ಅವರಿಗೆ ಅಚ್ಚುಮೆಚ್ಚಿನ ಸೈಕಲ್​ಗಳಾಗಿದ್ದವು. ಲಾಕ್​ಡೌನ್ ಸಮಯದಲ್ಲಿ ಅಪ್ಪು ಆರೆಂಜ್ ಕಲರ್ ಸೈಕಲ್​ನಲ್ಲೇ ಬೆಂಗಳೂರಲ್ಲಿ ರೌಂಡ್ ಹಾಕಿ ಖುಷಿ ಪಟ್ಟಿದ್ದರು. ಆದರೆ ಈಗ ಯುವರತ್ನನ ಕಣ್ಮರೆ ಸೈಕಲ್​ಗಳಿಗೂ ದಿಗಿಲು ಬಡಿಸಿರಬೇಕು.

Last Updated : Nov 4, 2021, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.