ETV Bharat / city

ನವೆಂಬರ್​​​ 16ಕ್ಕೆ ‘ಪುನೀತ್​ ನಮನ’ ಕಾರ್ಯಕ್ರಮ…

author img

By

Published : Nov 4, 2021, 8:41 AM IST

Updated : Nov 4, 2021, 8:52 AM IST

ಪ್ಯಾಲೇಸ್​ ಗ್ರೌಂಡ್​ನ ಒಳಾಂಗಣ ವೇದಿಕೆಯಲ್ಲಿ ನವೆಂಬರ್​​​ 16ಕ್ಕೆ ‘ಪುನೀತ್​ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.

puneeth namana program on november  16th
‘ಪುನೀತ್​ ನಮನ’ ಕಾರ್ಯಕ್ರಮ

ಬೆಂಗಳೂರು: ಚಂದನವನದ ಯುವರತ್ನ ಮರೆಯಾಗಿರುವ ನೋವು ಅದು ಮರೆಯಲಾಗದ ನೋವು. ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಲು ಕರ್ನಾಟಕ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. 'ಪುನೀತ್ ನಮನ' ಎನ್ನುವ ಕಾರ್ಯಕ್ರಮ ಪ್ಯಾಲೇಸ್​ ಗ್ರೌಂಡ್​ನಲ್ಲಿ ನಡೆಯಲಿದೆ.

ದಿವಂಗತ ನಟ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ, ನವೆಂಬರ್​​​ 16ಕ್ಕೆ ‘ಪುನೀತ್​ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮ ಪ್ಯಾಲೇಸ್​​ ಗ್ರೌಂಡ್​ನ ಒಳಾಂಗಣ ವೇದಿಕೆಯಲ್ಲಿ ನಡೆಯಲಿದೆ ಎಂದು ವಾಣಿಜ್ಯ ಮಂಡಳಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಟ್ಟವನ್ನೇರಿ ದೇವಿರಮ್ಮನ ದರ್ಶನ ಪಡೆದ ಸಹಸ್ರಾರು ಭಕ್ತರು

ಬೃಹತ್​​ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ವಾಣಿಜ್ಯ ಮಂಡಳಿ ಆಹ್ವಾನ ಪತ್ರಿಕೆ ನೀಡಲು ತಯಾರಿ ನಡೆಸಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.​ವೈ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸೇರಿ ಹಲವರಿಗೆ ಆಮಂತ್ರಣ ನೀಡಲಿದೆ. ದಕ್ಷಿಣ ಭಾರತದ ಕಲಾವಿದರು, ತಂತ್ರಜ್ಞರಿಗೂ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಆಂಧ್ರ ಹಾಗೂ ತಮಿಳುನಾಡಿನ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕಲಾವಿದರು ಭಾಗಿಯಾಗಲಿದ್ದಾರೆ.

Last Updated : Nov 4, 2021, 8:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.