ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಬಿಡುಗಡೆ ಆದ್ಮಲೇ ಒಂದಲ್ಲ ಒಂದು, ರೆಕಾರ್ಡ್ಗಳನ್ನು ಮಾಡೋದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿದೆ. ಹೌದು ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯ ನಟರು, ಕನ್ನಡ ಚಿತ್ರಗಳ ಅದ್ದೂರಿ ಮೇಕಿಂಗ್ ಹಾಗೂ ಕ್ವಾಲಿಟಿ ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುತ್ತಿದ್ದಾರೆ.
ಅದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಕಾರಣ. ಆದರೆ, ಎರಡು ಸಿನಿಮಾಗಳು ಒಂದೊಂದು ರೀತಿಯಲ್ಲಿ ತನ್ನದೇ ರೆಕಾರ್ಡ್ಗಳನ್ನು ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿವೆ. ಅಷ್ಟೆ ಅಲ್ಲ ಕನ್ನಡ ಸಿನಿಮಾಗಳ ತಾಕತ್ ಏನು ಎಂಬುದನ್ನು ತೋರಿಸಿ ಕೊಟ್ಟಿವೆ.
ಅದರಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಂಚೂಣಿಯಲ್ಲಿದೆ. ಯಶ್ ಈ ಚಿತ್ರದಲ್ಲಿ ತಾಯಿ ಕಂಡ ಆಸೆಯಂತೆ ಬದುಕಿದ, ರಾಕಿ ಬಾಯ್ ಆಗಿ ಅಬ್ಬರಿಸುವ ಮೂಲಕ ವಿಶ್ವಾದ್ಯಂತ 1000ಕ್ಕೂ ಹೆಚ್ಚು ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುವ ಮೂಲಕ ದಾಖಲೆ ಬರೆದಿದೆ. ಆದರೆ, ಪವರ್ ಸ್ಟಾರ್ ನಟನೆಯ ಜೇಮ್ಸ್ ಚಿತ್ರ, ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಆಗುವ ಮೂಲಕ ಕೆಜಿಎಫ್ ಚಾಪ್ಟರ್ 2, ಸಿನಿಮಾವನ್ನು ಹಿಂದಿಕ್ಕುವ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಹೌದು ಸಿನಿಮಾ ಪ್ರದರ್ಶಕರ ಲೆಕ್ಕಾಚಾರದ ಪ್ರಕಾರ, ಈ ಹಿಂದೆ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ, 75 ಲಕ್ಷ ಟಿಕೆಟ್ ಮಾರಾಟ ಆಗಿತ್ತು. ಈ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಶ್ ಮುರಿಯುತ್ತಾರೆ ಅಂತಾ ಹೇಳಲಾಗಿತ್ತು, ಆದರೆ ಅದು ಆಗಿಲ್ಲ. ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬರೀ 75 ಲಕ್ಷ ಟಿಕೆಟ್ ಮಾತ್ರ ಮಾರಾಟ ಆಗಿದೆ.
ಆದರೆ, ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ನಟನೆಯ, ಕೊನೆಯ ಜೇಮ್ಸ್ ಚಿತ್ರ, ಕರ್ನಾಟಕದಲ್ಲಿ ಬರೋಬ್ಬರಿ ಒಂದು ಕೋಟಿಗೆ ಹೆಚ್ಚು ಟಿಕೆಟ್ ಮಾರಾಟ ಆಗುವ ಮೂಲಕ ದಾಖಲೆ ಬರೆದಿದೆ. ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಇತಿಹಾಸದಲ್ಲಿ ಒಂದು ಕೋಟಿಗೂ ಹೆಚ್ಚು ಟಿಕೆಟ್ ಮಾರಾಟ ಆದ ಮೊಟ್ಟ ಮೊದಲ ಸಿನಿಮಾ ಜೇಮ್ಸ್ ಆಗಿದೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಚಿತ್ರವಾದ, ಜೇಮ್ಸ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆ ಆಗಿ, ನಾಲ್ಕು ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರವಾಗಿತ್ತು. ಇದು ಪುನೀತ್ ರಾಜ್‍ಕುಮಾರ್ ಸಿನಿಮಾ ಕೆರಿಯರ್ನಲ್ಲಿ ದಾಖಲೆ ಬರೆದಿರೋದು ಹೆಮ್ಮೆಯ ವಿಷ್ಯ.
ಇದನ್ನೂ ಓದಿ: ಪ್ರಿಯಾಂಕಾ ನನ್ನನ್ನೇ ಓವರ್ ಟೇಕ್ ಮಾಡುತ್ತಿದ್ದಾರೆ: ಉಪೇಂದ್ರ