ETV Bharat / city

ಸ್ಥಳೀಯ ಸಂಸ್ಥೆ ಕಚೇರಿಗಳಿಗೆ ಸಾರ್ವಜನಿಕರ ಓಡಾಟ ವಿರಳ: ಆನ್​ಲೈನ್​ ಮೂಲಕ ದೂರು ಸಲ್ಲಿಸಿದ್ರೂ ಇಲ್ಲ ಪರಿಹಾರ - ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ

ಸಾಮಾಜಿಕ ಜಾಲತಾಣಗಳು, ಆನ್​ಲೈನ್​ ಮೂಲಕ ಸಿಟಿ ಜನ ಹೆಚ್ಚಾಗಿ ದೂರುಗಳನ್ನು ಸಲ್ಲಿಕೆ ಮಾಡಿದ್ರೂ, ಪರಿಹಾರ ನೀಡುವಲ್ಲಿ ಸ್ಥಳೀಯ ಸಂಸ್ಥೆಗಳು ವಿಳಂಬ ಮಾಡುತ್ತಿವೆ. ಇನ್ನು ನಗರದ ಬಡ, ಮಧ್ಯಮ ವರ್ಗದ ಜನ ಆನ್​ಲೈನ್​ ಸೇವೆ ಪಡೆಯಲು ಸಾಧ್ಯವಾಗದೇ ಕೋವಿಡ್ ಸಂಕಷ್ಟದ ಜೊತೆ ಇತರ ಸೌಲಭ್ಯಗಳ ಕೊರತೆಯಿಂದಲೂ ಬೇಸತ್ತು ಹೋಗಿದ್ದಾರೆ.

ಸಮಸ್ಯೆಯ ಸುಳಿಯಲ್ಲಿ ಬೆಂಗಳೂರು ಜನತೆ
ಸಮಸ್ಯೆಯ ಸುಳಿಯಲ್ಲಿ ಬೆಂಗಳೂರು ಜನತೆ
author img

By

Published : Aug 27, 2020, 2:06 PM IST

ಬೆಂಗಳೂರು: ಅಧಿಕಾರಿಗಳ ಬಳಿ ಜನರು ಯಾವುದೇ ರೀತಿಯ ಸಮಸ್ಯೆ ಹೇಳಿಕೊಂಡರೂ, ನಾವು ಕೋವಿಡ್​ ನಿಯಂತ್ರಿಸುವ ಕೆಲಸದಲ್ಲಿ ಬ್ಯುಸಿ ಇದ್ದೀವಿ ಎಂಬ ಸಬೂಬು ಬರುತ್ತಿದೆ. ಇದು ಸಿಲಿಕಾನ್​ ಸಿಟಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ.

ಮಳೆಗಾಲ ಆರಂಭವಾಗಿದೆ. ಅಗೆದಿಟ್ಟ ರಸ್ತೆಗಳು, ಚರಂಡಿಗಳು ಕಾಮಗಾರಿ ಪೂರ್ಣಗೊಳ್ಳದೆ ಹಾಗೇ ಉಳಿದಿವೆ. ಹಣಕಾಸಿನ ಸಮಸ್ಯೆ, ಕಾರ್ಮಿಕರ ಕೊರತೆ, ಅಧಿಕಾರಿಗಳಿಗೆ ಕೆಲಸದ ಒತ್ತಡ ಎಂದು ನಾನಾ ಕಾರಣ ನೀಡಿ ಮೂಲಸೌಕರ್ಯ ಒದಗಿಸುವಲ್ಲಿ ಬಿಬಿಎಂಪಿ ಎಡವುತ್ತಿದೆ.

ಇತ್ತೀಚೆಗಷ್ಟೇ ವಿವೇಕ ನಗರ ವಾರ್ಡ್ 113ರ ಬಡಾವಣೆಯೊಂದರಲ್ಲಿ ಮನೆಗಳ ಮುಂದೆಯೇ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಮಣ್ಣು ಅಗೆಯಲಾಗಿತ್ತು. ಆಗಸ್ಟ್ ತಿಂಗಳ 3 ತಾರೀಕಿನಿಂದಲೇ ರಸ್ತೆ ಅಗೆದು ಹಾಕಿದ್ದು, ಮನೆಗಳಿಂದ ಜನ ಹೊರಗೆ ಬರಲು ಅಸಾಧ್ಯವಾದಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ. ಈ ಬಗ್ಗೆ ಟ್ವಿಟರ್, ಫೇಸ್​ಬುಕ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಎಮರ್ಜೆನ್ಸಿ ಸಂದರ್ಭದಲ್ಲಿ ಆ್ಯಂಬುಲೆನ್ಸ್​​ ಓಡಾಟಕ್ಕೂ ಸಾಧ್ಯವಾಗುತ್ತಿಲ್ಲ ಎಂದು ವಕೀಲ ವಿನಯ್ ವೇಣುಗೋಪಾಲ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇನ್ನು ಸಮಸ್ಯೆಗಳನ್ನು ಹೇಳಲು ಹೋಗುವ ಜನರಿಗೆ ಬಿಬಿಎಂಪಿ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ವಿಚಾರ ನಿರಾಸೆ ಮೂಡಿಸುತ್ತಿದೆ. ಇನ್ನು ಸಹಾಯ 2.0 ಆ್ಯಪ್​ ಮೂಲಕ ಜನರು ತಮ್ಮ ಕುಂದು ಕೊರತೆಗಳನ್ನು, ದೂರುಗಳನ್ನು ದಾಖಲಿಸಬಹುದು ಎಂದು ಹೇಳಲಾಗಿತ್ತು. ಆದರೆ, ಸಾಕಷ್ಟು ಜನ ಇದಕ್ಕೆ ದೂರು ನೀಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಮಸ್ಯೆಯ ಸುಳಿಯಲ್ಲಿ ಬೆಂಗಳೂರು ಜನತೆ

ಬೀಳುವ ಸ್ಥಿತಿಯಲ್ಲಿರುವ ಮರ, ಅರ್ಧಂಬರ್ಧ ಕಾಮಗಾರಿಯಾದ ರಸ್ತೆಗಳು, ಬಾಯ್ದೆರದ ಮ್ಯಾನ್ ಹೋಲ್​ಗಳು, ರಸ್ತೆಗುಂಡಿ, ಕಸದ ಸಮಸ್ಯೆ ಹೀಗೆ ಸಾವಿರಾರು ದೂರು ದಾಖಲಿಸಿದ್ರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಆದ್ರೆ ಪಾಲಿಕೆ ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ, ಫೆಬ್ರವರಿ 8ರಿಂದ ಆಗಸ್ಟ್ 21ರವರೆಗೆ, ಸಹಾಯ 2.0 ಆ್ಯಪ್​ನಲ್ಲಿ ಒಟ್ಟು 50,586 ದೂರುಗಳು ದಾಖಲಾಗಿದ್ದು, 45,627 ಸಮಸ್ಯೆಗಳು ಬಗೆಹರಿದಿವೆ. 4191 ಪೆಂಡಿಂಗ್ ಇದ್ದು, 2,608 ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಇದರಲ್ಲಿ 768 ದೀರ್ಘ ಸಮಯ ತೆಗೆದುಕೊಳ್ಳುವ ಸಮಸ್ಯೆಗಳಾಗಿವೆ ಎಂದು ಹೇಳಿವೆ.

ಇನ್ನು ಈ ಬಗ್ಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ಕೋವಿಡ್ ಕೆಲಸದ ಒತ್ತಡದಿಂದಾಗಿ ಬೇರೆಲ್ಲ ಕೆಲಸಗಳು ಸ್ವಲ್ಪ ನಿಧಾನವಾಗಿದೆ. ಆದರೂ ಘನತ್ಯಾಜ್ಯಕ್ಕೆ ಸಂಬಂಧಿಸಿದಂತೆ ಆನ್​ಲೈನ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಬರುವ ದೂರು ಸ್ವೀಕರಿಸಿ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಇನ್ನು ಬಿಬಿಎಂಪಿ ನಾಗರಿಕ ಸಹಾಯ ಕೇಂದ್ರಕ್ಕೆ ಬರುವ ಜನರ ಸಂಖ್ಯೆಯೂ ವಿರಳವಾಗಿದೆ. ಖಾತೆ ನೋಂದಣಿ, ಆಸ್ತಿ ತೆರಿಗೆ ಪಾವತಿ ಗೊಂದಲ ಬಗೆಹರಿಸಲು ಕೆಲವರು ಭೇಟಿ ನೀಡುತ್ತಿದ್ದಾರೆ. ಆದರೆ, ಅನಿವಾರ್ಯ ಇದ್ದರೆ ಮಾತ್ರ ಕಚೇರಿಗೆ ಬನ್ನಿ ಎಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲೇ ನೋಟೀಸ್ ಹಾಕಲಾಗಿದ್ದು, ವಲಯವಾರು ಕಂಟ್ರೋಲ್ ರೂಂಗಳ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದೆ.

ಜಲಮಂಡಳಿಯಿಂದ ವಾಟ್ಸ್​ಆ್ಯಪ್ ಸಹಾಯವಾಣಿ ಮೂಲಕ ದೂರು ಸ್ವೀಕಾರ
ಇನ್ನು ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡುವ, ಮ್ಯಾನ್ ಹೋಲ್, ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡುವ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಜನರ ಕುಂದುಕೊರತೆ ಆಲಿಸಲು ವೆಬ್​ಸೈಟ್​ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ 080- 22238888 ನಂಬರ್ ಹಾಗೂ ವಾಟ್ಸ್​ಆ್ಯಪ್ ನಂಬರ್ 8762228888 ಸಂಖ್ಯೆಯನ್ನು ನೀಡಿದೆ. ಕಾಲಕಾಲಕ್ಕೆ ನೀರಿನ ಅದಾಲತ್​ಗಳನ್ನು ನಡೆಸಿ ಜನರ ಸಮಸ್ಯೆ ಆಲಿಸಲಾಗುತ್ತಿದೆ. ಈ ಬಾರಿ ಬೇಸಿಗೆ ಕಾಲದಲ್ಲಿ ಕೋವಿಡ್ ಲಾಕ್​ಡೌನ್ ಇದ್ದ ಹಿನ್ನೆಲೆಯಲ್ಲಿ ಹೆಚ್ಚು ನೀರಿಗೆ ಬೇಡಿಕೆ ಇರಲಿಲ್ಲ. ಪ್ರತಿವರ್ಷ ಬೇಸಿಗೆಗೆ ನೀರಿನ ಹಾಹಾಕಾರ ಉಂಟಾಗುತ್ತಿತ್ತು. ಆದರೆ, ಬಿಲ್ ಸಮಸ್ಯೆ ಉಂಟಾದ ಹಿನ್ನೆಲೆ ಆನ್​ಲೈನ್ ಪಾವತಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.

ಇನ್ನು ಅಧಿಕಾರಿಗಳು, ನೌಕರರಿಗೆ ಕೊರೊನಾ ದೃಢಪಟ್ಟ ಕಾರಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಸೈಟ್ ಹರಾಜಿಗೂ ಆನ್​ಲೈನ್ ಪ್ರಕ್ರಿಯೆಯನ್ನು ಅಳವಡಿಸಲಾಗಿತ್ತು. ರೈತರಿಗೆ ಮಾತ್ರ ದೂರುಗಳನ್ನು ಸಲ್ಲಿಸಲು ಪ್ರವೇಶ ನೀಡಲಾಗಿತ್ತು. ಉಳಿದಂತೆ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.