ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಆರೋಪಿಗಳ ವಿಚಾರಣೆಯ ವೇಳೆ ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಅಕ್ರಮದಲ್ಲಿ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾದ ಪ್ರಮುಖ ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಹಾಗೂ ಅಸ್ಟಿಸೆಂಟ್ ಇಂಜಿನಿಯರ್ ಹುದ್ದೆಗಳೂ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದನ್ನು ವಿಚಾರಣೆ ವೇಳೆ ಸಿಐಡಿ ಪೊಲೀಸರು ಕಂಡುಕೊಂಡಿದ್ದರು. ಅಕ್ರಮ ಬಗ್ಗೆ ಈ ಹಿಂದೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಗರ ಪೊಲೀಸರು ಕೇಸ್ ರಿ ಓಪನ್ ಮಾಡಿದ್ದು, ಪ್ರಮುಖ ಆರೋಪಿಯನ್ನು ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಮತ್ತೋರ್ವ ಆರೋಪಿ ಅಕ್ರಮ ಎಸಗಿರುವುದು ಬಯಲಿಗೆ ಬಂದಿದ್ದು, ಸಿಐಡಿ ವಶದಲ್ಲಿದ್ದಾನೆ.
ಇದನ್ನೂ ಓದಿ: PSI ನೇಮಕಾತಿ ಹಗರಣ: ಡ್ಯಾಂಗೆ ಮೊಬೈಲ್ ಎಸೆದ ಕಿಂಗ್ಪಿನ್.. ಹುಡುಕಾಟಕ್ಕೆ ನೀರಿಗಿಳಿದ ಸಿಐಡಿ!
ಮಂಡ್ಯಕ್ಕೆ ವ್ಯಾಪಿಸಿದ ಪಿಎಸ್ಐ ಹಗರಣ: ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷರೊಬ್ಬರನ್ನು ಸಿಐಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಮಾಜಿ ಮಂತ್ರಿ ಪರಮಾಪ್ತ ವಲಯದಲ್ಲಿ ಒಬ್ಬರಾಗಿರುವ ಈ ವ್ಯಕ್ತಿ ಹಗರಣದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ಗೆ ಮುಜುಗರ ತಂದಿದೆ. 40 ಲಕ್ಷ ರೂ. ಡೀಲ್ ಕುದುರಿಸಿದ್ದ ಆರೋಪವೂ ಇವರ ಮೇಲಿದೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ: ತಿಹಾರ್, ಪರಪ್ಪನ ಆಗ್ರಹಾರ ಜೈಲಿಗಾದ್ರೂ ಹಾಕಲಿ ನಾನು ಹೆದರಲ್ಲ: ಡಿ.ಕೆ.ಶಿವಕುಮಾರ್