ಬೆಂಗಳೂರು: ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದ ತಹಶೀಲ್ದಾರ್ ಗ್ರೇಡ್-1 ಹಾಗೂ ತಹಶೀಲ್ದಾರ್ ಗೇಡ್-2 ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಈ ಕೆಳಕಂಡ ತಹಶೀಲ್ದಾರ್ ಗೇಡ್-2 ವೃಂದದ (ವೇತನ ಶ್ರೇಣಿ: 43100-83900 ರೂ.) ಅಧಿಕಾರಿಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ರ ನಿಯಮ 42 ರನ್ವಯ ತಹಶೀಲ್ದಾರ್ ಗ್ರೇಡ್-1 (ವೇತನ ಶ್ರೇಣಿ 52650-92100 ರೂ. ) .ಹುದ್ದೆಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ, ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲೇ ಮುಂದುವರೆಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
ಉಳಿಕೆ ಮೂಲ ವೃಂದದ ಅಧಿಕಾರಿಗಳು 108 ಹಾಗೂ ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದ 33 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.