ಬೆಂಗಳೂರು: ಹೊಟೇಲ್‌ನವರೊಂದಿಗೆ ಜೊತೆಗೂಡಿ ಖಾಸಗಿ ಆಸ್ಪತ್ರೆಗಳಿಂದ ಸ್ಟೆಪ್ ಡೌನ್ ಆಸ್ಪತ್ರೆಗಳ (ಕೋವಿಡ್ ನಿಗಾ ಘಟಕ) ಸ್ಥಾಪನೆ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಆಸ್ಪತ್ರೆಗಳು ಹೊಟೇಲ್ ಜೊತೆಗೂಡಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸುವ ಸಂಬಂಧ ಅಧಿಸೂಚನೆ ಹೊರಡಿಸಿದೆ. ಈ ಆಸ್ಪತ್ರೆಗಳು ಲಭ್ಯ ವಿರುವ ಒಟ್ಟು ಬೆಡ್‌ಗಳ ಸಂಖ್ಯೆಗಳ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ಸ್ಟೆಪ್ ಡೌನ್ ಆಸ್ಪತ್ರೆಗಳು ಪ್ರಮುಖ ಕೋವಿಡ್ ಆಸ್ಪತ್ರೆಗಳಿಂದ 500 ಮೀಟರ್ ಅಂತರದೊಳಗಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಕೊರೊನಾ ರಣಕೇಕೆ : ಒಂದೇ ದಿನದಲ್ಲಿ 25 ಸಾವಿರ ಗಡಿ ದಾಟಿದ ಕೋವಿಡ್ ಕೇಸ್!
ಈ ಆಸ್ಪತ್ರೆಗಳು ನಿತ್ಯ ಆರೋಗ್ಯಧಿಕಾರಿಗಳಿಗೆ ಕೊರೊನಾ ಸೋಂಕಿತರ ದಾಖಲು, ಡಿಸ್ಚಾರ್ಜ್ ಮಾಡಿದ ಸಂಖ್ಯೆ ಹಾಗೂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು. ಇದೇ ವೇಳೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ಸ್ಟೆಪ್ ಡೌನ್ ಆಸ್ಪತ್ರೆಗಳಿಗೆ ಗರಿಷ್ಠ ದರ ಮಿತಿಯನ್ನು ನಿಗದಿಗೊಳಿಸಲಾಗಿದೆ.
ಸಾಧಾರಣ ಸ್ಟೆಪ್ ಡೌನ್ ಕೇಂದ್ರಕ್ಕೆ ಗರಿಷ್ಠ 8,000 ರೂ.ದರ ನಿಗದಿಗೊಳಿಸಲಾಗಿದೆ. ಇನ್ನು ತ್ರಿ ಸ್ಟಾರ್ ಸ್ಟೆಪ್ ಡೌನ್ ಆಸ್ಪತ್ರೆಗಳಿಗೆ 10,000 ರೂ. ಗರಿಷ್ಠ ಮಿತಿಯನ್ನು ವಿಧಿಸಲಾಗಿದೆ. 5 ಸ್ಟಾರ್ ಸ್ಟೆಪ್ ಡೌನ್ ಕೇಂದ್ರಗಳಲ್ಲಿ ದಿನಕ್ಕೆ 12,000 ರೂ. ಗರಿಷ್ಠ ದರ ನಿಗದಿ ಮಾಡಲಾಗಿದೆ.