ಆನೇಕಲ್: ಬೆಂಗಳೂರು-ಬನ್ನೇರುಘಟ್ಟ ಪ್ರಿಸ್ಟೇಜ್ ಟೈಲ್ಸ್ ಶೋ ರೂಂ ಮಾಲೀಕನನ್ನ ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಬ್ರಾಹಿಂ ಹಮೀಜ್ (29) ಅಪಹರಣಕ್ಕೊಳಗಾದವರು.
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲವರದನಹಳ್ಳಿ ಬಳಿಯ ಎಸ್ಕೆ ಗಾರ್ಡನ್ ಬಡಾವಣೆಯ ಮನೆಗೆ ತೆರಳುವ ಸಂದರ್ಭದಲ್ಲಿ ಮೂರ್ನಾಲ್ಕು ಜನ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ. ಜು.12ರ ಮದ್ಯ ರಾತ್ರಿ ಮನೆಗೆ ಬರುವ ವೇಳೆ ಕಾರಿನಿಂದ ಇಳಿಯುತ್ತಿದ್ದಂತೆ ಹೊಂಚು ಹಾಕಿದ್ದ ಪರಿಚಿತರೇ ಆಗಿದ್ದ ಆರೋಪಿಗಳು ತಾವು ತಂದಿದ್ದ ಕಾರೊಳಗೆ ಇಬ್ರಾಹಿಂ ಹಮೀಜ್ ನನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ಅನಂತರ ಮಂಗಳೂರಿನಿಂದ ಅವರ ಮನೆಗೆ ದೂರವಾಣಿ ಮೂಲಕ ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ರೋಷಗೊಂಡ ಹಮೀಜ್ ತಂದೆ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಆನೇಕಲ್ ಉಪವಿಭಾಗ ಪೊಲೀಸರು ಅಪಹರಣಕಾರರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ವರಿಸಲು ಆಧಾರ್ ಕಾರ್ಡ್ ತಿದ್ದಿದ ಮದುಮಗ: ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳಿಂದ ಸಿಕ್ಕಿಬಿದ್ದ