ಬೆಂಗಳೂರು: ಕೊರೊನಾ ಸೋಂಕಿನಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ಭಾರತಿನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿಡಿಯೋ ಮೂಲಕ ಜನರಿಗೆ ತಿಳಿಸಿದ್ದು, ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ರಾಜ್ ಗೋಪಲ್ ಎಂಬುವರು ಠಾಣೆಯಲ್ಲಿಯೇ ಕಷಾಯ ಸಿದ್ಧಪಡಿಸಿ ಸಿಬ್ಬಂದಿಗೆ ಕೊಡುತ್ತಿದ್ದು, ಸದ್ಯ ಈ ಕಷಾಯವನ್ನ ಎಲ್ಲರೂ ಬಳಸಿ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಚೆಕ್ಕೆ, ಧನ್ಯ, ಲವಂಗ, ಜಿರಿಗೆ, ಅರಸಿನ, ಅಮೃತಬಳ್ಳಿ, ಶುಂಠಿ, ಲಿಂಬೆಹಣ್ಣು, ಪುದಿನಾ, ಕಾಳುಮೆಣಸು, ಬೆಲ್ಲ ಹಾಗು ತುಳಸಿ ಪುಡಿ ಮಾಡಿಕೊಂಡು ಎಲ್ಲಾ ಪದಾರ್ಥ ಹಾಕಿ ಕುದಿಸಿ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಕುಡಿಯಿರಿ ಎಂದಿದ್ದಾರೆ.
ಹಾಗೆಯೇ ಭಾರತಿನಗರ ಠಾಣೆಯ 75 ಜನ ಸಿಬ್ಬಂದಿ ಪ್ರತಿದಿನ ಈ ಕಷಾಯ ಕುಡಿಯುತ್ತಿದ್ದು, ಇಲ್ಲಿಯವರೆ ಯಾರೊಬ್ಬರಿಗೂ ಕೊರೊನಾ ಬಂದಿಲ್ಲ ಎಂದಿದ್ದಾರೆ. ಸದ್ಯ ಇವರ ವಿಡಿಯೋ ನೋಡಿ ಹಿರಿಯ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.