ETV Bharat / city

2021ರಲ್ಲಿ ಬೆಂಗಳೂರಿನಲ್ಲಿ ‌ಕಡಿಮೆ ಅಪರಾಧ ಪ್ರಕರಣಗಳು ದಾಖಲು : ಕಮಲ್‌ ಪಂತ್ - kamal pant on police department

ತ್ವರಿತಗತಿಯಲ್ಲಿ ಸೈಬರ್ ಕ್ರೈಂ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಸಿಐಆರ್ ಅಡಿಯಲ್ಲಿ 7,800 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 1,407 ಪ್ರಕರಣಗಳನ್ನು ಭೇದಿಸಲಾಗಿದೆ. 600 ಪ್ರಕರಣಗಳು ತನಿಖಾ ಹಂತದಲ್ಲಿವೆ. 990 ಕೇಸ್​ಗಳನ್ನು ವರ್ಗಾವಣೆ ಮಾಡಲಾಗಿದೆ.‌ ಸೈಬರ್ ಖದೀಮರ ಪಾಲಾಗುತ್ತಿದ್ದ 60 ಕೋಟಿ ರೂಪಾಯಿ‌ ಹಣ ಜಪ್ತಿ ಮಾಡಿಕೊಳ್ಳಲಾಗಿದೆ..

kamal pant press meet on rowdyism in Bengaluru
ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್
author img

By

Published : Jan 7, 2022, 2:53 PM IST

ಬೆಂಗಳೂರು :‌‌ ಕಳೆದ ಎರಡು ವರ್ಷಗಳಿಗೆ ಹೋಲಿಸಿಕೊಂಡರೆ 2021ರಲ್ಲಿ ನಗರದಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿವೆ. ಈಗಾಗಲೇ ಹೆಚ್ಚಿನ ಪ್ರಕರಣಗಳ ತನಿಖೆ ನಡೆದಿವೆ. ಬಾಕಿ ಉಳಿದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದರು‌.

ಅಪರಾಧ ಪ್ರಕರಣಗಳ ಕುರಿತಂತೆ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಮಾತನಾಡಿರುವುದು..

ನಗರದಲ್ಲಿ ಕಳೆದ ವರ್ಷ ನಡೆದ ಅಪರಾಧ ಪ್ರಕರಣಗಳ ಪರಾಮರ್ಶೆ ನಡೆಸಿ ಮಾತನಾಡಿದರು. 2021ರಲ್ಲಿ ಕಹಿ‌ ಘಟನೆಗಳು ಸಂಭವಿಸಿವೆ. ಮುಖ್ಯವಾಗಿ ನಟ ಪುನೀತ್ ರಾಜ್​ಕುಮಾರ್ ನಿಧನದ ವೇಳೆ ಪೊಲೀಸರ ಬಂದೋಬಸ್ತ್ ಕಾರ್ಯ ಶಾಘ್ಲನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು‌.

ಪೊಲೀಸ್​ ಇಲಾಖೆ ಕಾರ್ಯಾಚರಣೆ : ಕಳೆದ ವರ್ಷ‌ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ‌ಕೊಲೆ, ಸರಗಳ್ಳತನ, ರಾಬರಿ, ಅತ್ಯಾಚಾರ ಸೇರಿದಂತೆ ಕ್ರೈಂ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಸೈಬರ್ ಕ್ರೈಂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗಿದೆ‌‌. ಡ್ರಗ್ಸ್ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ‌. ರೌಡಿಸಂ ಮಟ್ಟ ಹಾಕಲಾಗಿದೆ ಎಂದರು.

ಕೊಲೆ ಪ್ರಕರಣಗಳ ಇಳಿಕೆ : 2020ಕ್ಕೆ ಹೋಲಿಸಿದರೆ 2021ರಲ್ಲಿ ಕೊಲೆ ಪ್ರಕರಣಗಳು ಕಡಿಮೆಯಾಗಿವೆ. ಎರಡು ಕೊಲೆ‌ ಪ್ರಕರಣ ಹೊರತುಪಡಿಸಿ ಉಳಿದ ಎಲ್ಲಾ ಹತ್ಯೆ ಪ್ರಕರಣಗಳನ್ನು ಭೇದಿಸಲಾಗಿದೆ‌. 156 ಕೊಲೆ ಪ್ರಕರಣಗಳಲ್ಲಿ 12 ಮಂದಿ ರೌಡಿಗಳು ಕೊಲೆಯಾಗಿರುವುದು ಕಂಡು ಬಂದಿದೆ. 152 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, 145 ಪ್ರಕರಣ ಭೇದಿಸಲಾಗಿದೆ. ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಕೊಂಚ ಹಿನ್ನೆಡೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ರಾಬರಿ ಪ್ರಕರಣಗಳು ಸಹ ಕಡಿಮೆಯಾಗಿವೆ.

ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ : 2021ರಲ್ಲಿ ನಾಪತ್ತೆ ಪ್ರಕರಗಳು ಕೊಂಚ ಮಟ್ಟಿಗೆ ಕಡಿಮೆಯಾಗಿವೆ.‌ ದಾಖಲಾದ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ನಾಪತ್ತೆಯಾಗಿದ್ದಾರೆ. 145 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.‌ ಮನೆಯವರಿಂದಲೇ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ಪ್ರದೇಶವಾಗಿದೆ.‌ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಸೈಬರ್ ಕ್ರೈಂ : ತ್ವರಿತಗತಿಯಲ್ಲಿ ಸೈಬರ್ ಕ್ರೈಂ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಸಿಐಆರ್ ಅಡಿಯಲ್ಲಿ 7,800 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 1,407 ಪ್ರಕರಣಗಳನ್ನು ಭೇದಿಸಲಾಗಿದೆ. 600 ಪ್ರಕರಣಗಳು ತನಿಖಾ ಹಂತದಲ್ಲಿವೆ. 990 ಕೇಸ್​ಗಳನ್ನು ವರ್ಗಾವಣೆ ಮಾಡಲಾಗಿದೆ.‌ ಸೈಬರ್ ಖದೀಮರ ಪಾಲಾಗುತ್ತಿದ್ದ 60 ಕೋಟಿ ರೂಪಾಯಿ‌ ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

ನಗರದಲ್ಲಿ ರೌಡಿ ಗುಂಪುಗಳಿಲ್ಲ : ನಗರದಲ್ಲಿ ಯಾವುದೇ ರೌಡಿ ಗುಂಪುಗಳಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲಾಗಿದೆ. ರೌಡಿಗಳನ್ನು ಸದೆಬಡಿಯಲು ಪ್ರತಿ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.‌ ತಲೆಮರೆಸಿಕೊಂಡಿರುವ ರೌಡಿಗಳ ಪತ್ತೆ ಕಾರ್ಯ, ನೋಟಿಸ್ ನೀಡುವುದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸ ಮಾಡಿದ್ದೇವೆ.

2021ರಲ್ಲಿ 28 ಗೂಂಡಾ ಕೇಸ್ ಹಾಕಲಾಗಿದೆ. ಜೈಲಿನಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆ ನಡೆಸುತ್ತಿದ್ದ 40 ರೌಡಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಅಪಘಾತ : ವ್ಯಕ್ತಿ ಸ್ಥಳದಲ್ಲೇ ಸಾವು!

2021ರಲ್ಲಿ 3,700 ಮಾದಕ ದ್ರವ್ಯ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ. ಈ ಪೈಕಿ ಸಿಂಥೆಟಿಕ್ ಡ್ರಗ್ಸ್‌ಗಳಾದ ಕೊಕೈನ್, ಹೆರಾಯಿನ್, ಹ್ಯಾಶ್ ಆಯಿಲ್ ಹೆಚ್ಚು ಪತ್ತೆಯಾಗಿದೆ‌. ಕೊಳಗೇರಿ ಪ್ರದೇಶಗಳಲ್ಲಿ ಗಾಂಜಾ ಮತ್ತಿತರೆ ಡ್ರಗ್ಸ್ ಸರಬರಾಜು ಹೆಚ್ಚಾಗಿದ್ದರೆ, ಶಾಲಾ-ಕಾಲೇಜು ಸೇರಿದಂತೆ‌ ಪ್ರತಿಷ್ಠಿತ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿವೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ‌ ಡ್ರಗ್ಸ್ ಬಳಕೆ‌ ಮಾಡುವುದು ಹೆಚ್ಚಾಗಿ ಕಂಡು ಬಂದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.