ಬೆಂಗಳೂರು: ಟಾಫ್ರಿಕ್ ಜಾಂ ಸೇರಿದಂತೆ ಸಂಚಾರ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಸಲಹೆ-ಸೂಚನೆ ನೀಡುವಂತೆ ಇತ್ತೀಚೆಗೆ ಮನವಿ ಮಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಇದೀಗ ನಗರದ ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ರಚನಾತ್ಮಕ ಸಲಹೆ ನೀಡುವಂತೆ ನಗರ ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
40 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಮುಖ 40 ಜಂಕ್ಷನ್ ಗಳನ್ನು ಪಟ್ಟಿ ಮಾಡಿ, ಇಲ್ಲಿ ಎದುರಿಸುತ್ತಿರುವ ಸಮಸ್ಯೆಗಳೇನು ? ಸುಗಮ ಸಂಚಾರಕ್ಕೆ ಯಾವ ರೀತಿ ಕ್ರಮ ಕೈಗೊಂಡರೆ ಸೂಕ್ತ ಎಂಬುದರ ಬಗ್ಗೆ ಸಾರ್ವಜನಿರು ತಮ್ಮದೇ ಆದ ಐಡಿಯಾಗಳನ್ನು ನೀಡಬಹುದಾಗಿದೆ. ಈಮೇಲ್, ಮೇಸೆಜ್ ಸೇರಿದಂತೆ ಬೆಂಗಳೂರು ನಗರ ಪೊಲೀಸ್ ಫೇಸ್ಬುಕ್ ಪೇಜ್ ಹಾಗೂ ಟ್ವಿಟರ್ನಲ್ಲಿ ನಿಮ್ಮ ಉಪಯುಕ್ತ ಸಲಹೆ- ಸೂಚನೆ ನೀಡಿ ಎಂದು ಆಯುಕ್ತರು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
-
Junctions where we need intervention. Please give action able and doable suggestions.Kindly write, email, WhatsApp, sms or Tweet, we sincerely await your feedback.. pic.twitter.com/9HuXy7ci9b
— Bhaskar Rao IPS (@deepolice12) October 4, 2019 " class="align-text-top noRightClick twitterSection" data="
">Junctions where we need intervention. Please give action able and doable suggestions.Kindly write, email, WhatsApp, sms or Tweet, we sincerely await your feedback.. pic.twitter.com/9HuXy7ci9b
— Bhaskar Rao IPS (@deepolice12) October 4, 2019Junctions where we need intervention. Please give action able and doable suggestions.Kindly write, email, WhatsApp, sms or Tweet, we sincerely await your feedback.. pic.twitter.com/9HuXy7ci9b
— Bhaskar Rao IPS (@deepolice12) October 4, 2019
ಸಿಲ್ಕ್ ಬೋರ್ಡ್, ಚಾಲುಕ್ಯ ವೃತ್ತ, ಕಾರ್ಪೊರೇಷನ್ ಸರ್ಕಲ್, ಟಿ.ಸಿ.ಪಾಳ್ಯ ಸಿಗ್ನಲ್, ಶಿವಾನಂದ್ ವೃತ್ತ ಹಾಗೂ ಕೆ.ಆರ್.ಮಾರ್ಕೆಟ್ ಸೇರಿದಂತೆ ನಗರದ 40 ಜಂಕ್ಷನ್ಗಳು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇನ್ನು ಬಿಗುವಿನ ಸಮಯದಲ್ಲಿ ವಾಹನ ಸವಾರರ ಗೋಳು ಹೇಳತೀರದು. ಜಂಕ್ಷನ್ಗಳಲ್ಲಿ ಸವಾರರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಅಲ್ಲಿ ಕೈಗೊಳ್ಳಬೇಕಾದ ರಚನಾತ್ಮಕ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಆಯುಕ್ತರು ಹೇಳಿದ್ದಾರೆ.