ಬೆಂಗಳೂರು: ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ PESO ಅಧಿಕಾರಿಯನ್ನ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
PESO(ಪೆಟ್ರೋಲಿಯಂ ಅಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್) ಡೆಪ್ಯುಟಿ ಚೀಫ್ ಕಂಟ್ರೋಲರ್, ಎಸ್.ಎಂ.ಮನ್ನನ್ ಮತ್ತು ಸಾಂಘ್ವಿ ಸಿಲಿಂಡರ್ಸ್ ಸಿಬ್ಬಂದಿ ರಿಶಬ್ ದೇಸಾಯಿ ಬಂಧಿತ ಆರೋಪಿಗಳು.
ಮನ್ನನ್ 50 ಸಾವಿರ ರೂ. ಲಂಚವನ್ನು ರಿಶಬ್ ದೇಸಾಯಿಯಿಂದ ಕಂಪನಿ ಲೈಸನ್ಸ್ ವಿಚಾರವಾಗಿ ಸ್ವೀಕರಿಸುತ್ತಿದ್ದ. 50 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ವಿಚಾರ ಸಿಬಿಐ ಅಧಿಕಾರಿಗಳು ಬಾತ್ಮೀದಾರರಿಂದ ತಿಳಿದು ದಾಳಿ ನಡೆಸಿದ್ದಾರೆ. ಅಲ್ಲದೆ ಮನ್ನನ್ಗೆ ಸೇರಿದ್ದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 16 ಲಕ್ಷ ರೂ. ನಗದು ಜೊತೆಗೆ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಇಬ್ಬರೂ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.