ಬೆಂಗಳೂರು: ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಿದ್ದರೂ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಜನರಿಂದ ತುಂಬಿ ತುಳುಕುತ್ತಿದೆ.
ವೀಕೆಂಡ್ನಲ್ಲೂ ರಾಜಧಾನಿಗೆ ಸಾವಿರಾರು ಜನರು ಎಂಟ್ರಿಯಾಗುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಮರೆತಂತೆ ಗುಂಪು ಗುಂಪಾಗಿ ಜನರು ನಿಂತಿದ್ದಾರೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬೆಳಗಿನಿಂದ ಸಾವಿರಾರು ಪ್ರಯಾಣಿಕರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ವೀಕೆಂಡ್ ಕರ್ಫ್ಯೂ ಕಾರಣ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣದಲ್ಲಿ ಟೆಸ್ಟಿಂಗ್ ಕ್ಯಾಂಪ್ ಹೆಚ್ಚಿಸಲಾಗಿದೆ. ಆವರಣದಲ್ಲಿ 15ಕ್ಕೂ ಹೆಚ್ಚು ಕಡೆ ಟೆಸ್ಟಿಂಗ್ ನಡೆಯುತ್ತಿದೆ.
ಬೆಳಗಿನಿಂದ ಟೆಸ್ಟಿಂಗ್ ಕ್ಯಾಂಪ್ ಹೆಚ್ಚು ಮಾಡಿದರೂ ಜನರು ಕಳ್ಳಾಟ ನಡೆಸುತ್ತಿದ್ದಾರೆ. ಬೇರೆ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದು, ಟೆಸ್ಟಿಂಗ್ ಮಾಡಿಸಿಕೊಳ್ಳುತ್ತಿರುವವರು ಬೆರಳೆಣಿಕೆಯಷ್ಟು ಜನರು ಮಾತ್ರ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಿಕರನ್ನು ಟೆಸ್ಟಿಂಗ್ಗೆ ಕರೆಯಲು ಆರೋಗ್ಯ ಸಿಬ್ಬಂದಿ ಪರದಾಟ ಕೂಡ ಕಂಡುಬರುತ್ತಿದ್ದು, ಹೊರ ರಾಜ್ಯದ ಪ್ರಯಾಣಿಕರು ಟೆಸ್ಟಿಂಗ್ಗೆ ನಿರಾಕರಿಸುತ್ತಿದ್ದಾರೆ.