ETV Bharat / city

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮರೆತು ಬಿಟ್ಟು ಹೋದ 32,169 ವಸ್ತುಗಳು - passengers left many items in Bengaluru airport

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 32,169 ವಸ್ತುಗಳನ್ನ ಬಿಟ್ಟು ಹೋಗಿದ್ದಾರೆ. ನಾವು ಇಲ್ಲಿ ಸೂಚಿಸಿದ ವೆಬ್​ಸೈಟ್​ ಲಿಂಕ್​ನಲ್ಲಿ ವಸ್ತುಗಳ ಮಾಹಿತಿ ಮತ್ತು ದಿನಾಂಕವನ್ನ ನಮೂದಿಸಿ ನೀವು ನಿಮ್ಮ ವಸ್ತುಗಳನ್ನು ಪಡೆದುಕೊಳ್ಳಬಹುದು.

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Dec 14, 2021, 5:07 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಮರೆವು ಮತ್ತು ಗಡಿಬಿಡಿಯಲ್ಲಿ ಈ ವರ್ಷದಲ್ಲಿ ಆಹಾರ ಪದಾರ್ಥಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ 32,169 ವಸ್ತುಗಳನ್ನ ಬಿಟ್ಟು ಹೋಗಿದ್ದಾರೆ.

ಈ ವರ್ಷದ ಏಪ್ರಿಲ್ 1 ರಿಂದ ನವೆಂಬರ್ 30ರ ವರೆಗೆ 9,962 ವಸ್ತುಗಳನ್ನ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದು, ನಂತರ ಪತ್ತೆಯಾದ ವಸ್ತುಗಳನ್ನ ಏರ್​ಪೋರ್ಟ್​ನಲ್ಲಿ ಇಡಲಾಗಿದೆ.

ಪ್ರಮುಖವಾಗಿ ವೈಯಕ್ತಿಕ ಗ್ಯಾಡ್ಜೆಟ್​​ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನ ಪ್ರಯಾಣಿಕರು ಮರೆತು ಬಿಟ್ಟು ಹೋಗಿದ್ದಾರೆ. ಮರೆತು ಹೋಗಿರುವ ವಸ್ತುಗಳಲ್ಲಿ ಶೇಕಡಾ 30ರಷ್ಟು ಎಲೆಕ್ಟ್ರಾನಿಕ್ ವಸ್ತುಗಳಾಗಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಪ್ರಯಾಣಿಕರು ಮರೆತು ಬಿಟ್ಟು ಹೋದ ವಸ್ತುಗಳು ಪ್ರೀ-ಎಂಬಾರ್ಕೇಶನ್ ಸೆಕ್ಯೂರಿಟಿ ಚೆಕ್ ( PSEC) ಪ್ರದೇಶದಲ್ಲಿ ಸಿಕ್ಕಿವೆ. 1,089 ಚಿನ್ನಾಭರಣ, 2083 ಪ್ರಕರಣಗಳು ನಗದು ಹಣ ಬಿಟ್ಟು ಹೋಗಿರುವುದಾಗಿದೆ. 2019 - 20 ಸಾಲಿನಲ್ಲಿ ಒಟ್ಟು 42,339 ವಸ್ತುಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿತ್ತು ಎಂದು ಬಿಐಎಎಲ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮೂಲೆ ಸೇರಿದ್ದ ವೋಲ್ವೋ ಬಸ್‌ಗಳು ಮತ್ತೆ ರೋಡ್​ಗೆ.. ಶೇ.30 ರಿಂದ 50ರಷ್ಟು ದರ ಕಡಿತ ಸಾಧ್ಯತೆ..

ಬಿಐಎಎಲ್ ನಿಯಮದ ಪ್ರಕಾರ ಬಿಟ್ಟು ಹೋದ ವಸ್ತುಗಳನ್ನ ಒಂದು ತಿಂಗಳ ಕಾಲ ಹಾಗೆಯೇ ಇಟ್ಟಿರಲಾಗುವುದು, ಈ ಅವಧಿಯಲ್ಲಿ ಪ್ರಯಾಣಿಕರು ತಮ್ಮ ವಸ್ತುಗಳನ್ನ ಪಡೆಯದಿದ್ದಲ್ಲಿ ವಿಲೇವಾರಿ ಮಾಡಲಾಗುವುದು. ಬ್ಯಾಂಕ್ ಕಾರ್ಡ್, ಚೆಕ್ ಪುಸ್ತಕಗಳು, ಪಾಸ್ ಬುಕ್ ಗಳನ್ನು 48 ಗಂಟೆಗಳ ಒಳಗಾಗಿ ಕಳೆದುಕೊಂಡವರಿಗೆ ತಲುಪಿಸಲಾಗುತ್ತದೆ. ಆಹಾರ ಪದಾರ್ಥಗಳನ್ನು 23 ಗಂಟೆಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತದೆ.

ಪತ್ತೆಯಾದ ವಸ್ತುಗಳ ಬಗ್ಗೆ ಮಾಹಿತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಈ ವೆಬ್​ಸೈಟ್​ನಲ್ಲಿ https://www.bengaluruairport.com/travellers/passenger-services/lost-found.html ಅಪ್ಲೋಡ್ ಮಾಡಲಾಗುತ್ತದೆ. ಬಿಟ್ಟು ಹೋದ ವಸ್ತುಗಳ ಮಾಹಿತಿ ಮತ್ತು ದಿನಾಂಕವನ್ನ ನೀವು ಇಲ್ಲಿ ನಮೂದಿಸುವ ಮೂಲಕ ಕಳೆದು ಹೋದ ವಸ್ತುಗಳನ್ನ ಪಡೆಯಬಹುದು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.