ETV Bharat / city

Corona ವೈರಸ್ ನಡುವೆ‌ ಇತರ ಸಾಂಕ್ರಾಮಿಕ ರೋಗದ ಹಾವಳಿ ಹೇಗಿದೆ ಗೊತ್ತಾ? - ಡೆಂಗ್ಯು- ಚಿಕನ್ ಗುನ್ಯಾ

ಕೋವಿಡ್ ಮಧ್ಯೆ ಮರೆಯಾಗಿದ್ದ ಡೆಂಘೀ, ಚಿಕೂನ್ ಗುನ್ಯಾದಂತಹ ಕಾಯಿಲೆಗಳು ಪುನಃ ಸದ್ದು ಮಾಡಲು ಶುರು ಮಾಡಿವೆ. ಹೀಗಾಗಿ ಜನರು ಕೊರೊನಾ ಸಂದರ್ಭದಲ್ಲಿ ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆಯಿಂದ ಮುಂಜಾಗ್ರತೆ ವಹಿಸಬೇಕಿದೆ.‌

other pandemics are spreading along corona

author img

By

Published : Aug 4, 2021, 7:24 PM IST

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕಿನ ನಡುವೆಯೂ ಇತರ ಸಾಂಕ್ರಾಮಿಕ ರೋಗಗಳ ಭೀತಿ ಗುಮ್ಮನಂತೆ ಕಾಡುತ್ತಿದೆ.‌ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿಯಾದರೆ, ಇನ್ನೂ ಹಲವೆಡೆ ಆಗೊಮ್ಮೆ ಈಗೊಮ್ಮೆ ಮಳೆ, ವಾತಾವರಣ ವೈಪರೀತ್ಯದಿಂದ ಕಾಯಿಲೆಗಳು ಹೆಚ್ಚಾಗ್ತಿದೆ. ಈಗಾಗಲೇ ಕೋವಿಡ್ ಮೂರನೇ ಅಲೆ ಎದುರಿಸಲು ಮಾನಸಿಕವಾಗಿ ಸಿದ್ದವಾಗಿರುವ ಜನರು ಇತರ ಸಾಂಕ್ರಾಮಿಕ ಕಾಯಿಲೆಗಳನ್ನ ಎದುರಿಸಬೇಕಾಗಿದೆ.

ಕೋವಿಡ್ ಮಧ್ಯೆ ಮರೆಯಾಗಿದ್ದ ಡೆಂಘೀ, ಚಿಕೂನ್​​ ಗುನ್ಯಾದಂತಹ ಕಾಯಿಲೆಗಳು ಪುನಃ ಸದ್ದು ಮಾಡಲು ಶುರು ಮಾಡಿವೆ. ಸಾಮಾನ್ಯವಾಗಿ ಪ್ರತಿವರ್ಷ ರಾಜ್ಯದಲ್ಲಿ 10 ಸಾವಿರಕ್ಕೂ ಜನರಿಗೆ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿತ್ತು.‌ ಆದರೆ, ಇದೀಗ ಕಳೆದ ಎರಡು ವರ್ಷದಿಂದ ಅದರ ಪ್ರಮಾಣ ಕಡಿಮೆ ಆಗಿದೆ‌. ಇದಕ್ಕೆ ಪ್ರಮುಖ ಕಾರಣ ಜನರು ಕೊರೊನಾ ಹೆಸರಲ್ಲಿ ಸ್ವಚ್ಛತೆ ಪಾಠ ಕಲಿತಿರುವುದು ಹಾಗೂ ಹೊರಗೆ ಓಡಾಟ ಕಡಿಮೆ ಮಾಡಿರುವುದು ಆಗಿದೆ.

ಇತರ ಸಾಂಕ್ರಾಮಿಕ ರೋಗದ ಹಾವಳಿ

ಮುಂಗಾರು ಆರಂಭವಾಗಿರುವ ಕಾರಣ ಮಳೆ ನೀರು ಅಥವಾ ಸಂಗ್ರಹಿಸಿದ ನೀರು ವಾರಗಟ್ಟಲೆ ಮನೆಯಲ್ಲಿ ಶೇಖರಣೆ, ಗಿಡಗಳ ಕುಂಡ, ಬೀಸಾಕಿದ ಟೈರ್, ಹಳೆಯದಾಗಿರುವ ಎಣ್ಣೆಯ ಡ್ರಮ್, ತೊಟ್ಟಿಯಲ್ಲಿ ನಿಂತಿರುವ ಜಾಗದಲ್ಲಿ ಡೆಂಘೀ ಹರಡುವ ಸೊಳ್ಳೆ ಉತ್ಪತ್ತಿ ಹೆಚ್ಚಾಗಲಿದೆ. ಹೀಗಾಗಿ ಜನರು ಕೊರೊನಾ ಸಂದರ್ಭದಲ್ಲಿ ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆಯಿಂದ ಮುಂಜಾಗ್ರತೆ ವಹಿಸಬೇಕಿದೆ.‌

BNG_
ಇತರ ಸಾಂಕ್ರಾಮಿಕ ರೋಗದ ಹಾವಳಿ

ಡೆಂಘೀ- ಚಿಕೂನ್​ ಗುನ್ಯಾ ಯಾವ ಭಾಗದಲ್ಲಿ ಹೆಚ್ಚಿದೆ?

2021ರ ಜನವರಿಯಿಂದ ಆಗಸ್ಟ್ 2ರ ತನಕ ರಾಜ್ಯದಲ್ಲಿ 17,833 ಜನರಿಗೆ ಡೆಂಘೀ ಇರುವ ಶಂಕೆ ವ್ಯಕ್ತವಾಗಿತ್ತು‌.‌ ಇದರಲ್ಲಿ 11,012 ಮಂದಿಯನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದು, 1,495 ಮಂದಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆದರೆ ಸಮಾಧಾನಕರ ಸಂಗತಿ ಅಂದರೆ ಡೆಂಘೀಯಿಂದ ಸಾವು ಸಂಭವಿಸಿಲ್ಲ.

ಇನ್ನು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ತನಕ 16,358 ಡೆಂಘೀ ಪ್ರಕರಣಗಳು ಇರುವ ಶಂಕೆ ವ್ಯಕ್ತವಾಗಿದ್ದು, ಇದರಲ್ಲಿ 1044 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 256 ಜನರಿಗೆ ಡೆಂಘೀ ದೃಢಪಟ್ಟಿದೆ. ಆಗಸ್ಟ್ 2ರಂದು 267 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 64 ಮಂದಿಗೆ ಜ್ವರ ದೃಢಪಟ್ಟಿದೆ. ಅತೀ ಹೆಚ್ಚು ಕಲಬುರಗಿ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಜನರಿಗೆ ಜ್ವರ ಕಾಣಿಸಿಕೊಂಡಿದೆ.

ಚಿಕೂನ್ ಗುನ್ಯಾದಲ್ಲಿ ಶಿವಮೊಗ್ಗ, ಕೋಲಾರ ಜಿಲ್ಲೆಯೇ ಮುಂದು:

‌ರಾಜ್ಯದಲ್ಲಿ ಜನವರಿಯಿಂದ ಆಗಸ್ಟ್ 2ರ ತನಕ 8,663 ಜನರಿಗೆ ಚಿಕೂನ್ ಗೂನ್ಯಾ ಇರುವ ಶಂಕೆ ವ್ಯಕ್ತವಾಗಿತ್ತು‌.‌ ಇದರಲ್ಲಿ 4,985 ಮಂದಿಯ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದು, 594 ಮಂದಿಗೆ ಚಿಕೂನ್ ಗುನ್ಯಾ ಜ್ವರ ಇರುವುದು ದೃಢಪಟ್ಟಿದೆ. ಆದರೆ, ಸಮಾಧಾನಕರ ಸಂಗತಿ ಅಂದರೆ ಚಿಕೂನ್ ಗುನ್ಯಾದಿಂದ ಯಾವುದೇ ಸಾವು ಸಂಭವಿಸಿಲ್ಲ.

ಇನ್ನು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ತನಕ 656 ಚಿಕೂನ್ ಗುನ್ಯಾ ಇರುವ ಶಂಕೆ ವ್ಯಕ್ತವಾಗಿದ್ದು, ಇದರಲ್ಲಿ 33 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 18 ಜನರಿಗೆ ಚಿಕೂನ್ ಗುನ್ಯಾ ದೃಢಪಟ್ಟಿದೆ. ಆಗಸ್ಟ್ 2ರಂದು 184 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 36 ಮಂದಿಗೆ ಜ್ವರ ದೃಢಪಟ್ಟಿದೆ. ಒಟ್ಟಾರೆ 7 ತಿಂಗಳಲ್ಲಿ ಶಿವಮೊಗ್ಗ, ಕೋಲಾರ, ವಿಜಯಪುರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಈ ಕುರಿತು ಮಾತಾನಾಡಿರುವ ಆರೋಗ್ಯ ಇಲಾಖೆಯ ನಿರ್ದೇಶಕರಾಗಿರುವ ಡಾ. ಅಪ್ಪಾ ಸಾಹೇಬ್ ಎಂ ನರಟ್ಟಿ, ಈಗಾಗಲೇ ಇಲಾಖೆ ವತಿಯಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇಯನ್ನ ಮಾಡುತ್ತಿದ್ದು, ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಮೊದಲಿಗೆ ಹೋಲಿಕೆ ಮಾಡಿದರೆ ಈಗ ಪರಿಸ್ಥಿತಿ ಸುಧಾರಿಸಿದ್ದು, ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ ಅಂತ ತಿಳಿಸಿದರು.

ಒಂದು ಕಾಲದಲ್ಲಿ ಎಲ್ಲರಿಗೂ ಬೆಂಬಿಡದ ಭೂತದಂತಿದ್ದ ಈ ಸಾಂಕ್ರಾಮಿಕ ರೋಗಗಳು ಇದೀಗ ತಮ್ಮ ಪ್ರಭಾವವನ್ನ ಕಡಿಮೆ ಮಾಡಿದೆ‌‌. ಆದರೆ, ಜನರು ನಿರ್ಲಕ್ಷ್ಯ ವಹಿಸಿದರೆ ಮುಂದಿನ ಇವುಗಳು ಕೊರೊನಾದಷ್ಟೇ ಬಾಧಿಸಲಿದೆ. ಆದಷ್ಟು ಸ್ವಚ್ಚತೆಯ ಕಡೆ ಹೆಚ್ಚು ಗಮನ ಕೊಟ್ಟು ಮುಂಜಾಗ್ರತೆ ವಹಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.