ಬೆಂಗಳೂರು : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ತಿಂಗಳು ಮೇ 31ರಂದು ಪಿ.ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿಗೊಂಡಿದ್ದರು. ಇದೀಗ ಸರ್ಕಾರ ಅವರನ್ನು ಕೆಇಆರ್ಸಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.
ಆಯೋಗದ ಅಧ್ಯಕ್ಷರಾಗಿ ಪಿ.ರವಿಕುಮಾರ್ 5 ವರ್ಷ ಅಥವಾ 65 ವಯೋಮಿತಿವರೆಗೆ, ಯಾವುದು ಮೊದಲೋ ಅಲ್ಲಿ ತನಕ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ : ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕನ್ನಡಿಗ, ಲೆ.ಜನರಲ್ ಬಿ.ಎಸ್.ರಾಜು ನೇಮಕ: ತವರಿನಲ್ಲಿ ಸಂತಸ