ಬೆಂಗಳೂರು: ಕರ್ತವ್ಯನಿರತ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು,ನಾಳೆ ಸಂಪೂರ್ಣವಾಗಿ ಹೋರ ರೋಗಿಗಳ ವಿಭಾಗಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಾಚಲಪತಿ ಹೇಳಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನರು ಯಾಕೆ ಸುಮ್ಮನಿರುತ್ತಾರೆ? ಈ ರೀತಿ ಹಲ್ಲೆಯಾದಾಗ ವೈದ್ಯರ ಬೆಂಬಲಕ್ಕೆ ಬರಬೇಕು. ಜನರ ಬೆಂಬಲವಿದ್ದರೆ ಈ ರೀತಿಯ ಹಲ್ಲೆ ನಡೆಯೋದಿಲ್ಲ. ಪ್ರತಿಭಟನಾನಿರತ ವೈದ್ಯರಿಗೆ ನಮ್ಮ ಬೆಂಬಲವಿದೆ. ಆರೋಗ್ಯ ಅಂದ್ರೆ ಏನು ಅಂತ ಜನರಿಗೆ ತೋರಿಸಬೇಕು. ಜನ ಈ ಡಾಕ್ಟರ್ ಇಲ್ಲ ಅಂದ್ರೆ, ಆ ಡಾಕ್ಟರ್ ಅಂತ ಹೋಗ್ತಾರೆ. ಅವರಿಗೆ ವೈದ್ಯರ ಮಹತ್ವದ ಅರಿವು ಮಾಡಿಸಬೇಕಿದೆ. ಹಾಗಾಗಿ ನಾಳೆ 24 ಗಂಟೆ ಒಪಿಡಿ ಸೇವೆಯನ್ನು ನಾವು ಬಂದ್ ಮಾಡ್ತೀವಿ ಡಾ. ವೆಂಕಟಾಚಲಪತಿ ಆಕ್ರೋಶಭರಿತ ಧ್ವನಿಯಲ್ಲಿ ಹೇಳಿದ್ರು.
ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಅಶ್ವತ್ ನಾರಾಯಣ ಅವರು ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಷ್ಟಾದರೂ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.