ETV Bharat / city

ವಿಪಕ್ಷಗಳನ್ನು ದುರ್ಬಲಗೊಳಿಸಲು 'ಒನ್ ನೇಷನ್ ಒನ್ ಎಲೆಕ್ಷನ್' ಬಳಕೆ: ಕೃಷ್ಣ ಬೈರೇಗೌಡ - ವಿಪಕ್ಷಗಳು ದುರ್ಬಲ ಮಾಡಲು ಒನ್ ನೇಷನ್ ಒನ್ ಎಲೆಕ್ಷನ್ ಬಳಕೆ ಆಗಲಿದೆ: ಕೃಷ್ಣ ಬೈರೇಗೌಡ

ವಿಪಕ್ಷಗಳನ್ನು ದುರ್ಬಲ‌ಗೊಳಿಸಲು ಒನ್ ನೇಷನ್ ಒನ್ ಎಲೆಕ್ಷನ್ ಬಳಕೆ ಆಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಸಂಬಂಧ ಅವರು ಮಾತನಾಡಿದರು.

one-nation-one-election-will-be-used-to-make-the-opposition-weak-krishna-biregauda
ವಿಪಕ್ಷಗಳು ದುರ್ಬಲ ಮಾಡಲು ಒನ್ ನೇಷನ್ ಒನ್ ಎಲೆಕ್ಷನ್ ಬಳಕೆ ಆಗಲಿದೆ: ಕೃಷ್ಣ ಬೈರೇಗೌಡ
author img

By

Published : Mar 29, 2022, 9:51 PM IST

ಬೆಂಗಳೂರು: ವಿಪಕ್ಷಗಳನ್ನು ದುರ್ಬಲ‌ಗೊಳಿಸಲು ಒನ್ ನೇಷನ್ ಒನ್ ಎಲೆಕ್ಷನ್ ಬಳಕೆ ಆಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಚಿಂತನೆ ಪ್ರಜಾಪ್ರಭುತ್ವಕ್ಕೆ ಪೂರಕವಾಗಿಲ್ಲ. ಉತ್ತರಾಖಂಡ್, ಅರುಣಾಚಲ ಪ್ರದೇಶಗಳಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲೆಡೆ ಪ್ರಾದೇಶಿಕ ಪಕ್ಷಗಳನ್ನು ನಿರ್ಮೂಲನೆ ಮಾಡಿ ಕೇಂದ್ರದ ಆಡಳಿತ ತರುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ರೆ ಮುಂದೇನು?. ಅಥವಾ ಎರಡು ಪಕ್ಷಗಳ ನಡುವೆ ಒಮ್ಮತ ಬರದಿದ್ರೆ ಮುಂದೇನು?. ಮತ್ತೆ ಚುನಾವಣೆ ಮಾಡುವ ಹಾಗಿಲ್ಲ, ರಾಷ್ಟ್ರಪತಿ ರೂಲ್ ಹಾಕೋದಾ ಐದು ವರ್ಷ?. ಮತ್ತೆ ಎಲೆಕ್ಷನ್ ಮಾಡೋದಾ?. ಮತ್ತೆ ಎಲೆಕ್ಷನ್ ಮಾಡಿದ್ರೆ ಒನ್ ನೇಷನ್ ಒನ್ ಎಲೆಕ್ಷನ್ ಉಳಿಯಲ್ಲ. ಅಲ್ಲಿಗೆ ಒನ್ ಸ್ಟೇಟ್ ಟೂ ಎಲೆಕ್ಷನ್ ಆಗುವುದಾಗಿ ಹೇಳಿದ್ದಾರೆ. ಐದು ವರ್ಷ ಅವಧಿ ಇದ್ದಾಗ ಮಧ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡಾಗ ಏನಾಗುತ್ತೆ?. ಆಗ ಮತ್ತೊಂದು ಸರ್ಕಾರ ಬರೋವರೆಗೂ ರಾಜ್ಯಪಾಲರ ಆಡಳಿತ ನಡೆಯೋದಾ?. ಆಗ ಒನ್ ನೇಷನ್ ಒನ್ ಎಲೆಕ್ಷನ್ ಆಶಯ ಉಳಿಯಲ್ಲ ಎಂದು ಹೇಳಿದರು.

ಹೀಗಾದಾಗ ಪರ್ಯಾಯ ಮಾರ್ಗ ಇಲ್ಲ. ಒನ್ ನೇಷನ್ ಒನ್ ಎಲೆಕ್ಷನ್ ವಾಪಸ್ ತಗೊಳ್ಳಿ. ಇಂಥ ಸಂದರ್ಭಗಳಲ್ಲಿ ಇದು ಬರೇ ಸ್ಲೋಗನ್ ಆಗುತ್ತಷ್ಟೇ. ಈ ಮೂಲಕ ಡೆಲ್ಲಿ ರೂಲ್ ಮಾಡ್ತೀರಾ?. ಆಗ ರಾಜ್ಯಗಳಿಗೆ ಸ್ವಾಯತ್ತತೆ ಉಳಿಯುತ್ತಾ? ಎಂದು ಪ್ರಶ್ನಿಸಿದರು.

ಪ್ರಾದೇಶಿಕ ಪಕ್ಷಗಳ ಪರ ಬ್ಯಾಟಿಂಗ್: ಪ್ರಾದೇಶಿಕ‌ ಪಕ್ಷಗಳ ಪರ ಬ್ಯಾಟಿಂಗ್ ಮಾಡಿದ ಕೃಷ್ಣಬೈರೇಗೌಡ, ದೇಶಾದ್ಯಂತ ಒಂದೇ ಚುನಾವಣೆ ಆದರೆ ಬೇರೆ ಬೇರೆ ಸಮಸ್ಯೆಗಳು ಬರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಚುನಾವಣೆ ನಡೆಯುವುದಾದರೆ ಪ್ರಾದೇಶಿಕ ಪಕ್ಷಗಳ ಪಾಡೇನಾಗ್ಬೇಕು?. ನಾನು ಪ್ರಾದೇಶಿಕ ಪಕ್ಷದವನಲ್ಲ. ಆದರೆ ಪ್ರಾದೇಶಿಕ ಪಕ್ಷಗಳು ಉಳಿದಿರಬೇಕು. ಅದೇ ಪ್ರಜಾಪ್ರಭುತ್ವದ ಸಂಕೇತ. ಪ್ರಾದೇಶಿಕ ಪಕ್ಷಗಳ ನಿರ್ಮೂಲನ ಪ್ರಜಾಪ್ರಭುತ್ವಕ್ಕೆ ಮಾರಕ. ವೈವಿಧ್ಯತೆ, ಸ್ಥಳೀಯ ದನಿಗಳು ಇರಲೇಬೇಕು. ಜೆಡಿಎಸ್, ಆಪ್ ಪಕ್ಷ, ಟಿಎಂಸಿ ಪಕ್ಷಗಳು ಇರಲೇಬೇಕು. ಪ್ರಾದೇಶಿಕ ಪಕ್ಷಗಳೂ ಅಸ್ತಿತ್ವ ಕಾಪಾಡಿಕೊಳ್ಳಬೇಕು. ನಾವು ಪ್ರಾದೇಶಿಕ ಪಕ್ಷ ಇರಬಾರದೆಂಬ ನಿಲುವು ನಂಬಲ್ಲ ಎಂದರು.

ಕೆಲ ದೇಶಗಳಲ್ಲಿ ವ್ಯವಸ್ಥಿತ ಪ್ರಜಾಪ್ರಭುತ್ವ ಆಗುತ್ತಿದೆ. ನಮ್ಮ ದೇಶವೂ ಆ ದಾರಿಯಲ್ಲಿ ಸಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ನಿಮ್ಮ ಕೊನೆಯ ಮಾತು ನಾನು ಒಪ್ಪಲ್ಲ. 1970-75 ರ ಸಮಯದಲ್ಲಿ ಆ ಪರಿಸ್ಥಿತಿ, ಆತಂಕ ಇತ್ತು. ತುರ್ತುಪರಿಸ್ಥಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಭೈರೇಗೌಡ, ಅದಕ್ಕೆ ನಾವು ಕ್ಷಮೆ ಕೇಳಿದ್ದೇವೆ. ಆಗ ತುರ್ತು ಪರಿಸ್ಥಿತಿ ಇತ್ತು, ಈಗ ಅಘೋಷಿತ ತುರ್ತುಪರಿಸ್ಥಿತಿ ಇದೆ ಹೇಳಿದರು.‌ ಈ ವೇಳೆ ಉಭಯ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ: ಕಂಬಳ ಕ್ರೀಡೆ ಉತ್ತೇಜನಕ್ಕೆ ಶೀಘ್ರ ಕ್ರಮ: ಸಚಿವ ನಾರಾಯಣಗೌಡ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.