ಬೆಂಗಳೂರು: ಮಾಲೀಕರು ಮನೆಯಲ್ಲಿ ಇರಬೇಕಾದರೆ ತೆಂಗಿನ ಮರ ಏರಿ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೊಹಮ್ಮದ್ ಸಾಧಿಕ್ ಮೂಲತಃ ಮಂಗಳೂರಿನ ಕಂಕನಾಡಿ ನಿವಾಸಿಯಾಗಿದ್ದು, 18 ಲಕ್ಷ ಮೌಲ್ಯದ 331 ಗ್ರಾಂ ಚಿನ್ನಾಭರಣ, 2.600 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.
ಮೇ 27ರ ರಾತ್ರಿ ಗಂಡ-ಹೆಂಡತಿ ಹಾಗೂ ಪುಟ್ಟ ಮಗು ಮೂವರು ಬೇರೆ ಬೇರೆ ರೂಮ್ನಲ್ಲಿ ಮಲಗಿದ್ದರು. ಮಧ್ಯರಾತ್ರಿ ಬಂದ ಕಳ್ಳ ಮನೆ ಮಂದಿ ಎಲ್ಲಾ ಮಲಗಿರುವಾಗಲೇ ಮೊಬೈಲ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಾಲ್ಕನಿ ತೆರೆದಿದ್ದರಿಂದ ಮನೆಯೊಳಗೆ ಸುಲಭವಾಗಿ ಹೊಕ್ಕಿದ್ದಾನೆ.
ಮೊಹಮ್ಮದ್ ಸಾಧಿಕ್ ಬೆಂಗಳೂರಿನ ಸಿಟಿ ಮಾರ್ಕೆಟ್ನ ಹೋಟೆಲೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಈತ ಈ ಹಿಂದೆ ಕೂಡ ಬೆಂಗಳೂರಿನ ಹಲವೆಡೆ ಕಳ್ಳತನ ಮಾಡಿ ಜೈಲು ಸೇರಿ ಬಂದಿದ್ದ. ಮತ್ತೆ ಹಳೆ ಚಾಳಿ ಮುಂದುವರೆಸಿ ಬಸವನಗುಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ಪ್ರಕರಣ: ಕಿಂಗ್ ಪಿನ್ ಪಾಟೀಲ್ ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ