ಬೆಂಗಳೂರು: ಸರ್ಕಾರ ಓಬವ್ವ ಜಯಂತಿ (Onake Obavva Jayanti) ಆಚರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
ನವೆಂಬರ್ 11 ರಂದು (ನಾಳೆ) ಸರ್ಕಾರ ಓಬವ್ವ ಜಯಂತಿ (Onake Obavva Jayanti) ಆಚರಣೆ ಮಾಡಲು ಉದ್ದೇಶಿಸಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ (Karnataka Council Election) ಘೋಷಣೆ ಆಗಿರುವುದರಿಂದ ಚುನಾವಣಾ ನೀತಿ ಸಂಹಿತೆ (Code of Conduct) ಜಾರಿಯಾಗಿದೆ.
![Onake Obavva Jayanti](https://etvbharatimages.akamaized.net/etvbharat/prod-images/kn-bng-03-obavva-jayanti-7202707_10112021190737_1011f_1636551457_1032.jpg)
ಹೀಗಾಗಿ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಆಚರಣೆಗೆ ಉದ್ದೇಶಿಸಲಾಗಿದ್ದ ಒನಕೆ ಓಬವ್ವ ಜಯಂತಿಯನ್ನು ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Department of Kannada and Culture) ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ನ.11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಿಸಲು ಸರ್ಕಾರದ ಆದೇಶ