ಬೆಂಗಳೂರು: ಒಮಿಕ್ರಾನ್ ರೂಪಾಂತರಿಯಿಂದ ಮೂರನೇ ಅಲೆ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರೂಪಾಂತರಿ ಒಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸೂಚಿಸಿತ್ತು. ಈ ಸಂಬಂಧ ಇನ್ನೂ ಹೆಚ್ಚಿನ ನಿಗಾವಣೆ ಮತ್ತು ಸಮರ್ಥ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ಉನ್ನತ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಈ ಸಂಬಂಧ 7 ಮಂದಿ ಐಎಎಸ್ ಅಧಿಕಾರಿಗಳ ತಂಡ ರಚಿಸಿ, ಅವರನ್ನು ವಿವಿಧ ವಿಭಾಗಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
ನೋಡಲ್ ಅಧಿಕಾರಿಗಳ ತಂಡ:
ಮುನೀಶ್ ಮೌದ್ಗಿಲ್ - ರಾಜ್ಯ ವಾರ್ ರೂಂ & ಲಿಕ್ವಿಡ್ ಆಕ್ಸಿಜನ್ ಪೂರೈಕೆ ವಿಭಾಗದ ನೋಡಲ್ ಅಧಿಕಾರಿ
ಪಂಕಜ್ ಕುಮಾರ್ ಪಾಂಡೆ - ಹೋಮ್ ಐಸೋಲೇಷನ್ ನಿರೀಕ್ಷಣಾ ನೋಡಲ್ ಅಧಿಕಾರಿ
ಎಂ.ಶಿಖಾ - ವಿದೇಶದಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ನೋಡಲ್ ಅಧಿಕಾರಿ
ಪ್ರತಾಪ್ ರೆಡ್ಡಿ ಮತ್ತು ಗುಂಜನ್ ಕೃಷ್ಣ - ಆಕ್ಸಿಜನ್ ಸರಬರಾಜು
ಶಿಲ್ಪಾನಾಗ್ - ನೋಡಲ್ ಅಧಿಕಾರಿಗಳ ನಿರೀಕ್ಷಕರು, ರಾಜ್ಯ ನಿರೀಕ್ಷಕರ ಘಟಕ
ಕುಮಾರ್ ಪುಷ್ಕರ್ - ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡಲ್ ಅಧಿಕಾರಿ
ಎಂ.ಟಿ ರೇಜು - ಮೆಡಿಸಿನ್ ನೋಡಲ್ ಅಧಿಕಾರಿ
(ಇದನ್ನೂ ಓದಿ: ಸಾಕಿದ ಶ್ವಾನಕ್ಕೆ ಸೀಮಂತ ಮಾಡಿದ ಸಬ್ ಇನ್ಸ್‌ಪೆಕ್ಟರ್ - ವಿಡಿಯೋ ವೈರಲ್)