ಬೆಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ನವೆಂಬರ್ 24ರಂದು ಸಂಜೆ 4:30ಕ್ಕೆ ನವ ಬೆಂಗಳೂರು ಎಂಬ ಖಾಸಗಿ ಸಂಸ್ಥೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಪೋಸ್ಟರ್ಗಳು ಮತ್ತು ಇನ್ವಿಟೇಷನ್ನಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಬಳಸದೇ ಇರುವುದು ಸಾಕಷ್ಟು ಸಂಘಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದಿನ ವಾರ ನಿಗದಿಯಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿಯ ಬಿ ಎಲ್ ಸಂತೋಷ್ ಅವರು ಮುಖ್ಯ ಭಾಷಣಕಾರರಾಗಿದ್ದರು. ಒಂದು ದೇಶ ಒಂದು ಸಂವಿಧಾನ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಕಾರ್ಯಕ್ರಮಕ್ಕೂ ಮುನ್ನವೇ ಪೋಸ್ಟರ್ಗಳು ಮತ್ತು ಇನ್ವಿಟೇಷನ್ನಿಂದ ದಲಿತ ಪರ ಸಂಘಟನೆಗಳ ಕೆಂಗಣ್ಣಿಗೆ ಕಾರ್ಯಕ್ರಮದ ಆಯೋಜಕರು ಗುರಿಯಾಗಿದ್ದಾರೆ.
ಈಗಾಗಲೇ ಕಾರ್ಯಕ್ರಮದ ಆಯೋಜಕರಾದ ಅನಿಲ್ ಶೆಟ್ಟಿ ಎಂಬುವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಾಗೇಶ್ ಎಂಬುವರು ದೂರು ನೀಡಿದ್ದು,ಇದನ್ನ ಸರಿಪಡಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸೋದಾಗಿ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚೆರಿಕೆ ನೀಡಿದ್ದಾರೆ.