ETV Bharat / city

ಬೆಂಗಳೂರು : ಧ್ವನಿವರ್ಧಕ ವಿಚಾರವಾಗಿ ಮಸೀದಿಗಳಿಗೇ ಅತಿ ಹೆಚ್ಚು ನೋಟಿಸ್

ಬೆಂಗಳೂರಿನ ಒಟ್ಟು 7 ವಿಭಾಗದ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿಗಳು, ದೇವಸ್ಥಾನಗಳು, ಚರ್ಚ್‌ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನು ಹೈಕೋರ್ಟ್ ಕೇಳಿತ್ತು. ದೇವಸ್ಥಾನ ಹಾಗೂ ಚರ್ಚ್​​ಗಳಿಗೆ ಹೋಲಿಸಿದರೆ ಮಸೀದಿಗಳಲ್ಲೆ ಹೆಚ್ಚು ಶಬ್ದ ಮಾಲಿನ್ಯ ನಿಯಮ ಮೀರಿರುವುದು ಕಂಡು ಬಂದಿದೆ..

noise pollution violations in bengaluru
ಧ್ವನಿವರ್ಧಕ ವಿಚಾರವಾಗಿ ಮಸೀದಿಗಳಿಗೇ ಅತಿ ಹೆಚ್ಚು ನೋಟಿಸ್
author img

By

Published : Apr 5, 2022, 2:34 PM IST

ಬೆಂಗಳೂರು : ರಾಜ್ಯದಲ್ಲಿ ಸದ್ಯ ಮಸೀದಿಗಳ ಮೇಲೆ ಅಳವಡಿಸಿರುವ ಧ್ವನಿವರ್ಧಕ ತೆರವಿಗೆ ಹಿಂದೂ ಸಂಘಟನೆಗಳ ಆಗ್ರಹ ಜೋರಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಮಸೀದಿಗಳೇ ಹೆಚ್ಚು ನಿಯಮ ಉಲ್ಲಂಘಿಸಿರುವುದು ಕಂಡು ಬಂದಿರುವುದು ಪೊಲೀಸ್‌ ಇಲಾಖೆ ಹೈಕೋರ್ಟ್‌ಗೆ ನೀಡಿರುವ ದಾಖಲೆಗಳಿಂದ ತಿಳಿದು ಬಂದಿದೆ.

ಲಭ್ಯ ದಾಖಲೆಯ ಪ್ರಕಾರ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆ‌ಯ ನಿಯಮವನ್ನು ಮೀರಿರುವುದಕ್ಕೆ 2021ರಿಂದ 2022ರ ಫೆಬ್ರವರಿಯವರೆಗೆ ಒಟ್ಟು 301 ನೋಟಿಸ್​ಗಳನ್ನು ಪೊಲೀಸರು ನೀಡಿದ್ದಾರೆ. ಇದರಲ್ಲಿ 125 ನೋಟಿಸ್​ಗಳನ್ನು ಮಸೀದಿಗಳಿಗೆ ಜಾರಿ ಮಾಡಲಾಗಿದೆ. ಉಳಿದಂತೆ ದೇವಸ್ಥಾನಗಳಿಗೆ 83 ಹಾಗೂ ಚರ್ಚ್​ಗಳಿ​ಗೆ 22 ನೋಟಿಸ್​ಗಳನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ಧ್ವನಿವರ್ಧಕಗಳ ಬಳಕೆ‌ಯ ನಿಯಮ ಉಲ್ಲಂಘನೆ ಸಂಬಂಧ ಪೊಲೀಸರು ಜಾರಿ ಮಾಡಿದ ನೋಟಿಸ್​​ಗಳ ವಿವರ

ವಿಶ್ವ ಹಿಂದೂ ಪರಿಷತ್‌ನ ಗಿರೀಶ್ ಭಾರದ್ವಾಜ್ ಎನ್ನುವರು ಈ ಹಿಂದೆ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳನ್ನ ನಿಷೇಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ವೇಳೆ ಹೈಕೋರ್ಟ್ ಕೇಳಿದ ಮಾಹಿತಿಯನ್ನು ಪೊಲೀಸ್ ಇಲಾಖೆ ಒದಗಿಸಿತ್ತು.

ಬೆಂಗಳೂರಿನ ಒಟ್ಟು 7 ವಿಭಾಗದ ಪೊಲೀಸರು ಬಾರ್ ಅಂಡ್ ರೆಸ್ಟೊರೆಂಟ್, ಪಬ್, ಕ್ಲಬ್, ಕೈಗಾರಿಕೆಗಳು, ಮಸೀದಿಗಳು, ದೇವಸ್ಥಾನಗಳು, ಚರ್ಚ್‌ಗಳಿಗೆ ಎಷ್ಟು ನೋಟಿಸ್ ನೀಡಿದ್ದಾರೆ ಎಂಬುದನ್ನು ಹೈಕೋರ್ಟ್ ಕೇಳಿತ್ತು. ದೇವಸ್ಥಾನ ಹಾಗೂ ಚರ್ಚ್​​ಗಳಿಗೆ ಹೋಲಿಸಿದರೆ ಮಸೀದಿಗಳಲ್ಲೆ ಹೆಚ್ಚು ಶಬ್ದ ಮಾಲಿನ್ಯ ನಿಯಮ ಮೀರಿರುವುದು ಕಂಡು ಬಂದಿದೆ.

ಅಲ್ಲದೇ, ಪಬ್, ಬಾರ್ ಅಂಡ್ ರೆಸ್ಟೋರೆಂಡ್​ಗಳು ಸೇರಿದಂತೆ ಕೈಗಾರಿಕಾ ವಲಯಗಳು ಕೂಡ ಶಬ್ದ ಮಾಲಿನ್ಯದ ನಿಯಮ ಮೀರಿವೆ. ಈ ಸಂಬಂಧ ಪಬ್, ಬಾರ್ ಅಂಡ್ ರೆಸ್ಟೋರೆಂಟ್​ಗಳಿಗೆ 59 ಹಾಗೂ ಕೈಗಾರಿಕೆಗಳಿಗೆ 12 ನೋಟಿಸ್‌ಗಳನ್ನು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.