ETV Bharat / city

ದೇಶದಲ್ಲೇ ಮೊದಲು: 'ಕೃತಕ ಹೃದಯ ಉಪಕರಣ' ತೆರವು ಶಸ್ತ್ರಚಿಕಿತ್ಸೆ ಯಶಸ್ವಿ - ಬೆಂಗಳೂರು ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಭಾರತದಲ್ಲೇ ಇದೇ ಮೊದಲ ಬಾರಿಗೆ ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯವನ್ನು ಸಂಪೂರ್ಣವಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂತಹ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪೋರ್ಟಿಸ್ ಆಸ್ಪತ್ರೆ ವೈದ್ಯರು

author img

By

Published : Oct 6, 2021, 5:34 PM IST

ಬೆಂಗಳೂರು: ಹೃದಯ ವೈಫಲ್ಯ ಹೊಂದಿದವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಯಶಸ್ವಿಯಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು ನಗರದ ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ನಡೆಸಿದ್ದು, ಇದು ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್ ಹೇಳಿಕೆ ನೀಡಿದ್ದು, ಭಾರತದಲ್ಲೇ ಇದೇ ಮೊದಲ ಬಾರಿಗೆ ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯ ಸಂಪೂರ್ಣವಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂತಹ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ವಿವರ:

ಇರಾಕ್ ದೇಶದ 56 ವರ್ಷ ವಯಸ್ಸಿನ ಪುರುಷ ರೋಗಿ ಸಂಪೂರ್ಣ ಹೃದಯ ವೈಫಲ್ಯದ ಸಮಸ್ಯೆ ಅನುಭವಿಸುತ್ತಿದ್ದರು. ಅವರಿಗೆ ಹೃದಯ ಕಸಿ ಅನಿವಾರ್ಯವಾಗಿತ್ತು. ಆದರೆ, ಹೃದಯ ದಾನ ಮಾಡುವವರ ಕೊರತೆಯಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆಯಲ್ಲೇ ಮುಂದುವರೆದಿದ್ದರು.

ಪರಿಸ್ಥಿತಿ ಕೈ ಮೀರಿದ ಬಳಿಕ ಅವರಿಗೆ ಕೃತಕ ಹೃದಯ ಅಳವಡಿಕೆ ಮಾಡಲು ನಿರ್ಧರಿಸಿ ಲೆಫ್ಟ್ ವೆಂಟ್ರಿಕುಲರ್ ಅಸಿಸ್ಟ್ ಡಿವೈಸ್ (ಎಲ್‌ವಿಎಡಿ) ರಕ್ತ ಪಂಪ್ ಮಾಡುವ ಡಿವೈಸ್‌ ಅನ್ನು ಅಳವಡಿಸಲಾಯಿತು.

ಸಾಮಾನ್ಯವಾಗಿ ಕೃತಕ ಹೃದಯ ಅಳವಡಿಸಿದ ಬಳಿಕ ಅದು ಹಾಗೇ ಮುಂದುವರೆಯಬೇಕಾಗುತ್ತದೆ. ಇದರ ಸಹಾಯವಿಲ್ಲದೇ ಹೃದಯ ಪಂಪ್ ಆಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ರೋಗಿಯು ಕೃತಕ ಹೃದಯದ ಮೂಲಕ ಕಾಲ ಕ್ರಮೇಣ ಇವರ ಮೂಲ ಹೃದಯ ಗುಣವಾಗುತ್ತಾ ಬಂದಿತ್ತು. ಎಲ್‌ವಿಎಡಿ ಸಹಾಯವಿಲ್ಲದೇ ಅವರ ಮೂಲ ಹೃದಯ ಪಂಪ್ ಆಗುತ್ತಿತ್ತು.

ಹೀಗಾಗಿ ಕೃತಕ ಹೃದಯವನ್ನು ಸಂಕೀರ್ಣ ಚಿಕಿತ್ಸೆ ಮೂಲಕ ತೆಗೆದು ಹಾಕುವುದು ವೈದ್ಯಕೀಯ ಕ್ಷೇತ್ರಕ್ಕೇ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ತಂಡ, ಹೊಸ ಪ್ರಯೋಗದೊಂದಿಗೆ 12 ಗಂಟೆಗಳ ಶಸ್ತ್ರಚಿಕಿತ್ಸೆಯ ತರುವಾಯ ಯಶಸ್ವಿಯಾಗಿ ಕೃತಕ ಹೃದಯವನ್ನು ಎದೆ ಭಾಗದಿಂದ ಬೇರ್ಪಡಿಸಿ ಯಶಸ್ವಿಯಾಗಿ ದೇಹದಿಂದ ತೆರವು ಮಾಡಲಾಗಿದೆ.

ಈ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ನಮ್ಮ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡಕ್ಕೆ ಸಂದ ಜಯವಾಗಿದೆ ಎಂದು ವಿವರಿಸಿದ್ದಾರೆ.

ಅಷ್ಟಕ್ಕೂ LVAD ಎಂದರೇನು?

ಎಲ್​​​​​ವಿಎಡಿ ಎಂಬುದೊಂದು ಹೃದಯದ ಸಮಸ್ಯೆ ಇರುವವರಿಗೆ ರಕ್ತ ಪಂಪ್​ ಮಾಡುವ ಯಂತ್ರವಾಗಿದೆ. ಇದು ನಿಮ್ಮ ಹೃದಯದ ಕೆಳಗಿನ ಎಡ ಕೋಣೆಗೆ ( ಹೃದಯದ ಎಡ ಗೋಡೆ(ಕುಹರ)​) ಮಹಾಪಧಮನಿಯ ಮತ್ತು ದೇಹದ ಉಳಿದ ಭಾಗಕ್ಕೆ ರಕ್ತವನ್ನು ಪಂಪ್ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಇದನ್ನು ಎಡ ಗೋಡೆ ಸಹಾಯ ಸಾಧನ ಎಂದು ಕರೆಯಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.