ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಕೇಳಿ ಬಂದಿರುವ ಭಾರೀ ಶಬ್ಧದ ಹಿನ್ನಲೆ ಜನರು ಭೂಕಂಪ ಎಂದು ಭಯಭೀತರಾಗಿದ್ದಾರೆ. ಆದರೆ ಭೂಕಂಪನಾ ವೀಕ್ಷನಾಲಯಗಳಲ್ಲಿ ಇದರ ಬಗ್ಗೆ ಮಾಹಿತಿ ದಾಖಲಾಗಿಲ್ಲ ಎಂದು ಅಖಿಲ ಭಾರತದ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ನಿವೃತ್ತ ವಿಜ್ಞಾನಿ ಡಾ. ಪ್ರಕಾಶ್ ತಿಳಿಸಿದ್ದಾರೆ.
ಓದಿ: ಶಿವಮೊಗ್ಗದಲ್ಲಿ ಕಂಪಿಸಿದ ಭೂಮಿ: ಭಯಭೀತರಾಗಿ ಮನೆಯಿಂದ ಹೊರಬಂದ ಜನ!
ಈಟಿವಿ ಭಾರತ್ಗೆ ಮಾಹಿತಿ ನೀಡಿರುವ ಅವರು, ಭೂಕಂಪನ ಕೇಂದ್ರಗಳಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಕೆಎಸ್ಎನ್ಡಿಎಮ್ಸಿಯ ವಿಜ್ಞಾನಿ ಜಗದೀಶ್ ಅವರೂ ಪ್ರತಿಕ್ರಿಯಿಸಿದ್ದು, ಯಾವುದೇ ಮಾಹಿತಿ ದಾಖಲಾಗಿಲ್ಲ. ಅಲ್ಲದೆ ಭೂಮಿ ಆಳದಲ್ಲಿ ಶಬ್ಧ ಕೇಳಿಬಂದಿಲ್ಲ, ಹಾಗಾಗಿ ವಿಸ್ತಾರವಾದ ಜಾಗದಲ್ಲಿ ಈ ಶಬ್ದ ಕೇಳಿಬಂದಿದೆ ಎಂದು ತಿಳಿಸಿದ್ದಾರೆ. ವಾತಾವರಣದ ಗಾಳಿಯ ಒತ್ತಡ ಹಾಗೂ ತಾಪಮಾನ ಏರಿಳಿಕೆಯಿಂದ ಗಾಳಿ ವಿಸ್ತರಣೆ ಆಗಿ, ಸ್ಫೋಟ ಆಗಿರುವ ಶಬ್ಧ ಕೇಳಿ ಬಂದಿದೆ.ಅಥವಾ ಆಕಾಶಕಾಯ ಉಲ್ಕೆ ಭೂಮಿ ಬಳಿ ಬಂದಿದ್ದರೆ ಅದರ ಸ್ಪೋಟದ ಶಬ್ಧವೂ ಆಗಿರಬಹುದು ಎಂದರು. ಆದರೆ ಯಾವುದೇ ಬೆಳಕೂ ಕಂಡು ಬಂದಿಲ್ಲ ಎಂದರು.