ಬೆಂಗಳೂರು: ಮುಖ್ಯಮಂತ್ರಿಗಳ ನೂತನ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಎಂ.ಪಿ.ರೇಣುಕಾಚಾರ್ಯ ಮತ್ತು ಜೀವರಾಜ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.
ಇಂದು ಬೆಳಗ್ಗೆ ಅಧಿಕೃತವಾಗಿ ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್-1ಕ್ಕೆ ಎಂ.ಪಿ ರೇಣುಕಾಚಾರ್ಯ ಮತ್ತು ಜೀವರಾಜ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವಕಾಶ ಕಲ್ಪಿಸಿದ್ದಕ್ಕಾಗಿ ಸಿಎಂಗೆ ಧನ್ಯವಾದ ತಿಳಿಸಿದರು.
![ಸಿಎಂಗೆ ಅಭಿನಂದನೆ ಸಲ್ಲಿಸಿದ ನೂತನ ರಾಜಕೀಯ ಕಾರ್ಯದರ್ಶಿಗಳು](https://etvbharatimages.akamaized.net/etvbharat/prod-images/kn-bng-04-renukacharya-jeevraj-cm-meet-script-7208080_30092021155349_3009f_1632997429_412.jpg)
ನೂತನ ಸಂಪುಟ ರಚನೆಯಾದರೂ ಅವಕಾಶ ಸಿಗದೆ ಕಾದು ಕುಳಿತಿದ್ದ ಉಭಯ ನಾಯಕರಿಗೆ ಮತ್ತೆ ಹಿಂದಿನ ಹುದ್ದೆಯನ್ನೇ ನೀಡುವ ಮೂಲಕ ಬಿಎಸ್ವೈ ಅವಧಿಯ ನೇಮಕಾತಿಗೆ ಬೊಮ್ಮಾಯಿ ಮಾನ್ಯತೆ ನೀಡಿದ್ದಾರೆ.