ETV Bharat / city

ಲಾಕ್​ಡೌನ್​ನಿಂದ ಕಡಿಮೆಯಾದ ಅಪಘಾತಗಳು

ಮದ್ಯ ಸೇವಿಸಿ ಚಲಾಯಿಸುವುದು ಕಾನೂನು ಪ್ರಕಾರ ತಪ್ಪು, ವಾಹನದ ಗುಣಮಟ್ಟ ತಿಳಿಯದೇ ಅದರ ವೇಗ ಅರಿಯದೆ ಅತೀ ವೇಗವಾಗಿ ವಾಹನ ಚಲಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ.

Negligent driving
ಅಪಘಾತ
author img

By

Published : Oct 10, 2020, 7:33 PM IST

ಬೆಂಗಳೂರು: ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಸಮಯಕ್ಕಿಂತಲೂ ವೇಗವಾಗಿ ಚಲಿಸುತ್ತಿರುವ ಆಧುನಿಕ ಯುಗದಲ್ಲಿ ಎಲ್ಲರ ಜೀವನವು ಗಡಿಬಿಡಿಯಿಂದಲೇ ಕೂಡಿದೆ. ಅದರಲ್ಲೂ ವಾಹನ ಚಾಲನೆಯಲ್ಲಿ ಒಂದು ಕೈ ಮೇಲೆ ಎನ್ನುವಂತೆ ಅವಸರ ಹೆಚ್ಚಿದೆ. ಈ ಅವಸರ ಮತ್ತು ನಿರ್ಲಕ್ಷ್ಯವೇ ಇಂದು ಅನೇಕ ಅಪಘಾತಗಳಿಗೆ ಕಾರಣವಾಗಿದೆ.

ವಾಹನ ಚಾಲಕರಲ್ಲಿ ಸಂಚಾರಿ‌ ನಿಯಮವನ್ನು ಜಾಗೃತಿಗೊಳಿಸಲು, ಅಪಘಾತ ಪ್ರಮಾಣವನ್ನು‌ ಕಡಿಮೆ ಮಾಡಲು ಪೊಲೀಸ್ ಇಲಾಖೆ ದಂಡವನ್ನು ಹಾಕುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಕಡಿಮೆ ಮಾಡಲು ಹೈವೇ ಪಾಟ್ರೋಲ್ ಗಸ್ತು ವಾಹನ ಸಂಚರಿಸುತ್ತವೆ. ಇಷ್ಟಾದರೂ ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ನಿತ್ಯ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಆದರೆ, ಮಾನವನ ವೇಗಕ್ಕೆ ಲಗಾಮು ಹಾಕಿದ ಕೊರೊನಾದಿಂದ ಲಾಕ್​ಡೌನ್ ಘೋಷಣೆಯಾಯ್ತು. ಇದರಿಂದಾಗಿ ರಸ್ತೆ ಅಪಘಾತಗಳು ಕೊಂಚ ಮಟ್ಟಿಗೆ ಕಡಿಮೆಯಾಗಿವೆ. ಉದಾಹರಣೆಗೆ 2019 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1,542 ಅಪಘಾತ ಪ್ರಕರಣಗಳು ನಡೆದಿವೆ. ಇದರಲ್ಲಿ‌ 328 ಪ್ರಕರಣಗಳು ಮಾರಣಾಂತಿಕ ಪ್ರಕರಣಗಳಾಗಿವೆ. 1,214 ಮಾರಣಾಂತಿಕವಲ್ಲದ ಪ್ರಕರಣಗಳು ದಾಖಲಾಗಿವೆ. 328 ಮಾರಣಾಂತಿಕ ಪ್ರಕರಣದಲ್ಲಿ 365 ಜನ ಸಾವನ್ನಪ್ಪಿದ್ದಾರೆ. 1,214 ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ 2,114 ಜನ ಗಾಯಾಳುಗಳಾಗಿದ್ದಾರೆ. ಆದರೆ, 2020 ರ ಆಗಸ್ಟ್ ಅಂತ್ಯಕ್ಕೆ 806 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 163 ಮಾರಣಾಂತಿಕ ಅಪಘಾತ ಪ್ರಕರಣಗಳಾಗಿವೆ. ಅದರಲ್ಲಿ‌ 177 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ 643 ಮಾರಣಾಂತಿಕ ಅಪಘಾತಗಳು ನಡೆದಿದ್ದು, ಇದರಲ್ಲಿ1,473 ಜನ ಗಾಯಗೊಂಡಿದ್ದಾರೆ.

ಜೀವಕ್ಕೆ ಅಪಾಯವೊಡ್ಡುತ್ತಿದೆ ವೇಗ ವಾಹನ ಚಾಲನೆ

ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷ 9 ತಿಂಗಳಲ್ಲಿ 155 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 2018ರಲ್ಲಿ 11 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದರೆ, ಮಾರಣಾಂತಿಕವಲ್ಲದ 44 ಅಪಘಾತಗಳು ನಡೆದು, ಒಟ್ಟು 55 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 11 ಜನ ಮೃತಪಟ್ಟರೆ, 74 ಜನ ಗಾಯಗೊಂಡಿದ್ದಾರೆ.

2019ರಲ್ಲಿ 16 ಮಾರಣಾಂತಿಕ ಅಪಘಾತಗಳು, 39 ಮಾರಣಾಂತಿಕವಲ್ಲದ ಅಪಘಾತಗಳು ಸೇರಿ 55 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 17 ಜನ ಮೃತಪಟ್ಟರೆ, 58 ಜನ ಗಾಯಗೊಂಡಿದ್ದಾರೆ. ಪ್ರಸಕ್ತ 2020 ರಲ್ಲಿ 12 ಮಾರಣಾಂತಿಕ ಅಪಘಾತಗಳು, 14 ಮಾರಣಾಂತಿಕವಲ್ಲದ ಅಪಘಾತಗಳಾಗಿದ್ದು, ಒಟ್ಟು 14 ಪ್ರಕರಣಗಳಲ್ಲಿ 13 ಜನ ಮೃತಪಟ್ಟಿದ್ದರೆ, 23 ಜನ ಗಾಯಗೊಂಡಿದ್ದಾರೆ.

ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷ 9 ತಿಂಗಳ ಅವಧಿಯಲ್ಲಿ ಒಟ್ಟು 40 ಮಾರಣಾಂತಿಕ ಅಪಘಾತಗಳು, 97 ಮಾರಣಾಂತಿಕವಲ್ಲದ ಅಪಘಾತಗಳಾಗಿದ್ದು, 128 ಕೇಸ್​ಗಳು ದಾಖಲಾಗಿವೆ. ಇದರಲ್ಲಿ 41 ಜನ ಪ್ರಾಣ ಕಳೆದುಕೊಂಡರೆ, 155 ಜನ ಗಾಯಗೊಂಡಿದ್ದಾರೆ. ಸಂಚಾರಿ ನಿಯಮಗಳ ಪಾಲನೆ ವಾಹನ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಟ್ಟಿನಲ್ಲಿ ಅಪಘಾತಕ್ಕೆ ಅವಸರವೇ ಕಾರಣವಾಗಿದ್ದು, ಜನರು ನಿಧಾನವಾಗಿ ವಾಹನ ಚಲಾಯಿಸುವುದರಿಂದ ತಮ್ಮ ಜೀವವನ್ನು ಕಾಪಾಡಿಕೊಳ್ಳಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.