ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸುಗಳ ಪ್ರದೇಶಕ್ಕಾಗಿ, NEET MDS 2021 ರಲ್ಲಿ ಕನಿಷ್ಠ ಅರ್ಹತೆಯ ಅಂಕಗಳನ್ನ ಪರಿಷ್ಕರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿರುವ ಅರ್ಹ ಅಭ್ಯರ್ಥಿಗಳು (NEET MDS 2021 Enrollment Review) ನವೆಂಬರ್ 18 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ನಡೆಯಲಿದ್ದು, ದಾಖಲಾತಿ ಪರಿಶೀಲನೆಗೆ ಹಾಜರಾಗಲು ಕೆಇಎ ಸೂಚಿಸಿದೆ.
ಈ ಮೊದಲು ನೋಂದಣಿ ಮಾಡಿ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸದಿರುವ ಅರ್ಹ ಅಭ್ಯರ್ಥಿಗಳೂ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದಾಗಿದೆ.
NEET-PG 2021 ಮಾಹಿತಿ ಪುಸ್ತಕದಲ್ಲಿ ಅರ್ಹತಾ ಮಾನದಂಡಗಳನ್ನು ಮತ್ತು ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಅಭ್ಯರ್ಥಿಗಳ ಮಾಹಿತಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ. ದಾಖಲಾತಿ ಪರಿಶೀಲನೆಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳು ಮಾತ್ರ ಪಿಜಿ ದಂತವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯಲಿದ್ದಾರೆ.