ಬೆಂಗಳೂರು: ಶಾಲೆ-ಕಾಲೇಜುಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರವು ತಜ್ಞರ ಸಲಹೆ ತೆಗೆದುಕೊಳ್ಳಬೇಕೇ ಹೊರತು ಇದು ರಾಜಕೀಯ ನಿರ್ಧಾರ ಆಗಬಾರದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ತಿಳಿಸಿದ್ದಾರೆ.
-
ತಜ್ಞರ ಸಲಹೆಯಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು, ಇದು ರಾಜಕೀಯ ನಿರ್ಣಯ ಆಗಬಾರದು. 2/2 #schoolsreopening #schoolsreopen #Karnataka
— S R Patil (@srpatilbagalkot) December 19, 2020 " class="align-text-top noRightClick twitterSection" data="
">ತಜ್ಞರ ಸಲಹೆಯಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು, ಇದು ರಾಜಕೀಯ ನಿರ್ಣಯ ಆಗಬಾರದು. 2/2 #schoolsreopening #schoolsreopen #Karnataka
— S R Patil (@srpatilbagalkot) December 19, 2020ತಜ್ಞರ ಸಲಹೆಯಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು, ಇದು ರಾಜಕೀಯ ನಿರ್ಣಯ ಆಗಬಾರದು. 2/2 #schoolsreopening #schoolsreopen #Karnataka
— S R Patil (@srpatilbagalkot) December 19, 2020
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನವರಿ 1ರಿಂದ ರಾಜ್ಯದಲ್ಲಿ 10 ಮತ್ತು 12 ನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದರ ಜೊತೆಗೆ 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಶಾಲಾ-ಕಾಲೇಜುಗಳ ಆರಂಭಕ್ಕೆ ಮುಂದಾಗಿರುವ ಸರ್ಕಾರ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ತಜ್ಞರ ಸಲಹೆಯಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು, ಇದು ರಾಜಕೀಯ ನಿರ್ಣಯ ಆಗಬಾರದು ಎಂದಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶಾಲೆ ಆರಂಭಿಸುವ ಕುರಿತು ಮಾಹಿತಿ ಒದಗಿಸಿದ್ದು, ಜನವರಿ 1ರಿಂದಲೇ ಶಾಲೆ ಆರಂಭಿಸುವ ಸೂಚನೆಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ. ಇದನ್ನ ಪ್ರತಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದು, ಎಸ್ ಆರ್ ಪಾಟೀಲ್ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.