ಬೆಂಗಳೂರು: ನನ್ನನ್ನ ಎಂಎಲ್ಸಿ ಮಾಡಿದ್ದು ಭೈರತಿ ಬಸವರಾಜ್ ಅಲ್ಲ ಕಾಂಗ್ರೆಸ್ ಪಕ್ಷ, ಅವರು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾನು ರಾಜಕೀಯಕ್ಕೆ ಬಂದವನು ಎಂದು ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಬೈರತಿ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ನನ್ನನ್ನು ಯಾರು ಎಂಎಲ್ಸಿ ಮಾಡಿಲ್ಲ, ಕಾಂಗ್ರೆಸ್ ಪಕ್ಷ ನನಗೆ ಎಂಎಲ್ಸಿ ಮಾಡಿದೆ. ಬಸವರಾಜ್ ಅವರು ದುರಾಂಕಾರದ ಹೇಳಿಕೆ ನೀಡುತ್ತಿದ್ದಾರೆ. ಮತದಾರರು ಡಿಸೆಂಬರ್ 9ಕ್ಕೆ ಇದಕ್ಕೆ ಉತ್ತರ ಕೊಡುತ್ತಾರೆ ಎಂದರು. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಜನರೇ ಹಿಂದಿನ ಶಾಸಕರಿಗೆ ಪಾಠ ಕಲಿಸಲು ಸಿದ್ದವಾಗಿದ್ದಾರೆ. ನೂರಕ್ಕೆ ನೂರು ನಾನು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.