ETV Bharat / city

ಪೇಜಾವರ ಶ್ರೀಗಳ ವಿರುದ್ಧ ಅವಹೇಳಕಾರಿ ವಿಚಾರ: ವಿಚಾರಣೆಗೆ ಆಗಮಿಸಿದ ಹಂಸಲೇಖ, ಸ್ಥಳದಲ್ಲಿ ಗದ್ದಲ - ಹಂಸಲೇಖ ವಿಚಾರಣೆ ನಡೆಸಲಿರುವ ಬಸವನಗುಡಿ ಪೊಲೀಸರು

ಮೈಸೂರಿನ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖಾ ಆಕ್ಷೇಪಾರ್ಹವಾಗಿ ಮಾತನಾಡಿದ್ದರು ಎಂದು ಆರೋಪಿಸಿದ್ದ ವಿಪ್ರ ವೇದಿಕೆ, ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಂಸಲೇಖ ವಿಚಾರಣೆಗೆ ಹಾಜರಾಗಿದ್ದಾರೆ.

comments-on-pejawar-shri-issue-music-director-hamsalekha-enquiry-today
ಪೇಜಾವರ ಶ್ರೀಗಳ ವಿರುದ್ಧ ಅವಹೇಳಕಾರಿ ವಿಚಾರ: ವಿಚಾರಣೆಗೆ ಆಗಮಿಸಲಿರುವ ಹಂಸಲೇಖ
author img

By

Published : Nov 25, 2021, 1:49 PM IST

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಸಂಗೀತ ನಿರ್ದೇಶಕ ಹಂಸಲೇಖ ಆಗಮಿಸಿದ್ದು, ಇವರ ಜೊತೆಗೆ ನಟ ಚೇತನ್ ಕೂಡಾ ಸಾಥ್ ನೀಡಿದ್ದಾರೆ.

ನಟ ಚೇತನ್ ಅವರು ಹಂಸಲೇಖ ಅವರ ಜೊತೆಗೆ ಆಗಮಿಸಿರುವುದನ್ನು ಖಂಡಿಸಿರುವ ಭಜರಂಗದಳ ಕಾರ್ಯಕರ್ತರು, ಕಪ್ಪು ಬಾವುಟ ಪ್ರದರ್ಶಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಕೂಡಾ ಸ್ಥಳದಲ್ಲಿದ್ದು, ಪರ - ವಿರೋಧದ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಬ್ಯಾರಿಕೇಡ್ ಹಾಕಿ, ಬಂದೋಬಸ್ತ್ ಮಾಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖಾ ಆಕ್ಷೇಪಾರ್ಹವಾಗಿ ಮಾತನಾಡಿದ್ದರು‌. ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಪ್ರ ವೇದಿಕೆ ಈ ಹೇಳಿಕೆ ಖಂಡಿಸಿ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೊಟೀಸ್ ನೀಡಿದ್ದರು. ಅನಾರೋಗ್ಯದಿಂದ ಹಂಸಲೇಖ ಹಾಜರಾಗಿರಲಿಲ್ಲ. ಇಂದು ವಿಚಾರಣೆಗೆ ಆಗಮಿಸಿದ್ದು, ಜೊತೆಗೆ ನಟ ಚೇತನ್ ಕೂಡಾ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಫುಟ್​ಪಾತ್​ಲ್ಲಿ ಮಲಗಿದ್ದವರ ಮೇಲೆ ಹರಿದ ಕಾರು.. ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.