ETV Bharat / city

ಬಾರ್​ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಯುವಕನ ಬರ್ಬರ ಕೊಲೆ..!

author img

By

Published : Sep 12, 2019, 10:18 AM IST

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟುಮಡುವಿನ ಮಂಜುನಾಥ್ ಬಾರ್ ಬಳಿ ನಡೆದಿದೆ. ಬಾರ್​ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಯುವಕನ ಕೊಲೆ ನಡೆದಿದೆ.

ಯುವಕನನ್ನು ಹತ್ಯೆಗೈದ ಕಿಡಿಗೇಡಿಗಳು

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟುಮಡುವಿನ ಬಾರ್ ಬಳಿ ನಡೆದಿದೆ.

ವೆಂಕಟೇಶ್ ಎಂಬಾತ ಕೊಲೆಗೀಡಾಗಿರುವ ಯುವಕ. ಈತ ಬಾರ್​ ನಡೆಸುತ್ತಿದ್ದ ಎನ್ನಲಾಗ್ತಿದೆ. ನಿನ್ನೆ ರಾತ್ರಿ ಮೂವರು ದುಷ್ಕರ್ಮಿಗಳು ಈ ಹೋಟೆಲ್​ಗೆ ಊಟಕ್ಕೆ ಬಂದಿದ್ದು, ಊಟ ಮುಗಿದ ಬಳಿಕ ಅಲ್ಲೇ ಇದ್ದ ಬಿಡಾ ಅಂಗಡಿಯವನ ಹತ್ತಿರ ಚಿಲ್ಲರೆ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ.

ಈ ವೇಳೆ‌ ವೆಂಕಟೇಶ್ ಗಲಾಟೆ ಮಾಡಬೇಡಿ ಹೋಗಿ ಎಂದು ಮಧ್ಯೆ ಪ್ರವೇಶಿಸಿದ್ದ. ಇದರಿಂದ ಕುಪಿತರಾದ ಆರೋಪಿಗಳು ವೆಂಕಟೇಶ್ ಜೊತೆ ಗಲಾಟೆಗೆ ಇಳಿದು ನಂತರ ವೆಂಕಟೇಶ್​ನನ್ನು ಅಟ್ಟಾಡಿಕೊಂಡು ರೋಡ್​ನಲ್ಲಿ ಚೇರ್​ನಿಂದ ಹಲ್ಲೆ ಮಾಡಿದ್ದಾರೆ. ನಂತರ ನೆಲಕ್ಕೆಬಿದ್ದ ವೆಂಕಟೇಶ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣ ವೆಂಕಟೇಶ್​ನನ್ನು​ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಇನ್ನು ಸಾವಿಗೀಡಾದ‌ ವೆಂಕಟೇಶ್ ಮೂಲತಃ ಕುಣಿಗಲ್ ಬಳಿಯ ಮನವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಬಾರ್​ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ತನ್ನ ಸ್ನೇಹಿತ ರವಿ ಜೊತೆ ಸೇರಿ ರಂಗನಾಥ್ ಹೆಸರಿನಲ್ಲಿ ಬಾರ್​ ಆ್ಯಂಡ್​ ರೆಸ್ಟೊರೆಂಟ್​ ಆರಂಭಿಸಿದ್ದ.

ಇನ್ನು ಈ ಕುರಿತಂತೆ ಸ್ಥಳಕ್ಕೆ ಸಿಕೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Intro:ಕ್ಷುಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ.
ಪೊಲೀಸರಿಂದ ಆರೋಪಿಗಳಿಗೆ ಹುಡುಕಾಟ

ಬೆಂಗಳೂರಿನಲ್ಲಿ ಕ್ಷುಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ
ಇಟ್ಟುಮಡುವಿನ ಮಂಜುನಾಥ್ ಬಾರ್ ಬಳಿ ನಡೆದಿದೆ.

ವೆಂಕಟೇಶ್ ರಂಗನಾಥ್ ಎಂಬ ಹೆಸರಿನಲ್ಲಿ ಹೋಟೆಲ್ ಬಾರ್ ನಡೆಸುತ್ತಿದ್ಧ. ಹೀಗಾಗಿ ನಿನ್ನೆ ರಾತ್ರಿ ಮೂವರು ದುಷ್ಕರ್ಮಿಗಳುಬ ಊಟಕ್ಕೆ ಬಂದಿದ್ರು.ಊಟ ಮುಗಿದ ಬಳಿ ಅಲ್ಲೇ ಇದ್ದ ಬಿಡಾ ಅಂಗಡಿಯವನ ಹತ್ತಿರ ಚಿಲ್ಲರೆ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ..

ಈ ವೇಳೆ‌ ವೆಂಕಟೇಶ್ ಗಲಾಟೆ ಮಾಡಬೇಡಿ ಹೋಗಿ ಎಂದು ಮಧ್ಯೆಪ್ರವೇಶಿಸಿದ್ದ .ಇದರಿಂದ ಕುಪಿತರಾಗಿದ್ದ ಆರೋಪಿಗಳು ವೆಂಕಟೇಶ್ ಜೊತೆ ಗಲಾಟೆಗೆ ಇಳಿದು ನಂತರ ವೆಂಕಟೇಶ್ ನನ್ನು ಅಟ್ಟಡಾಸಿ ರೋಡ್ ನಲ್ಲಿ ಚೇರ್ ನಿಂದ ಹಲ್ಲೆ ಮಾಡಿದಾಗ ನೆಲಕ್ಕೆ ಬಿದ್ದ ವೆಂಕಟೇಶ್ ಗೆ ಚಾಕುವಿನಿಂದ ಇರಿದು ಕಿಡಿಗೇಡಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.. ತಕ್ಷಣ ಆಸ್ಪತ್ರೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದ್ದಾರೆ ಇನ್ನು ಸ್ಥಳಕ್ಕೆ ಬಂದ ಸಿಕೆ.ಅಚ್ಚು ಕಟ್ಟು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ಸಾವಿಗೀಡಾದ‌ವೆಂಕಟೇಶ್ ಮೂಲತಃ ಕುಣಿಗಲ್ ಬಳಿಯ ಮನವಳ್ಳಿ ಗ್ರಾಮದ ನಿವಾಸಿ..ಹಲವು ವರ್ಷದಿಂದ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡ್ತಿದ್ದು ಇತ್ತೀಚೆಗೆ ಕೆಲಸ ಬಿಟ್ಟು ಊರಿಗೆ ತೆರಳಿ ಅಲ್ಲಿಯೇ ತೋಟ ನೋಡಿಕೊಳ್ಳಲು ನಿರ್ಧರಿಸಿದ್ದ.

ಆದ್ರೆ ಎರಡು ತಿಂಗಳು‌ಮಾತ್ರ ಊರಿನಲ್ಲಿ ಇದ್ದ ವೆಂಕಟೇಶ್ ಮತ್ತೆ ವ ಬೆಂಗಳೂರಿಗೆ ವಾಪಸ್ ಬಂದು ತನ್ನ ಸ್ನೇಹಿತ ರವಿ ಜೊತೆ ಸೇರಿ ರಂಗನಾಥ್ ಹೆಸರಿನಲ್ಲಿ ಹೊಟೇಲ್ ಬಾರ್ ಆರಂಭಿಸಿದ್ದ .
ಸದ್ಯ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ
Body:KN_BNG_01_MURDER_7204498Conclusion:KN_BNG_01_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.