ETV Bharat / city

ಕುಟುಂಬದ ಭಾಗವಾಗಿರುವ ಎಂಟಿಬಿ ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ: ಡಿಸಿಎಂ

ಎಂಟಿಬಿ ನಾಗರಾಜ್ ಕಾಂಗ್ರೆಸ್ ಕುಟುಂಬದ ಅವಿಭಾಜ್ಯ ಅಂಗ. ಅವರು ಶೀಘ್ರವೇ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂದು ಡಿಸಿಎಂ ಡಾ ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

dcm
author img

By

Published : Jul 13, 2019, 4:07 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿರುವ ಎಂಟಿಬಿ ನಾಗರಾಜ್ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂದು ಡಿಸಿಎಂ ಡಾ ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

dcm
ಪರಮೇಶ್ವರ್ ಟ್ವೀಟ್

ಇಂದು ಟ್ವೀಟ್ ಮಾಡಿರುವ ಅವರು, 'ಎಂಟಿಬಿ ನಾಗರಾಜ್ ಅವರಂತಹ ಹಿರಿಯ ನಾಯಕರು ನಮ್ಮ ಕಾಂಗ್ರೆಸ್ ಕುಟುಂಬದ ಅವಿಭಾಜ್ಯ ಅಂಗ. ಕುಟುಂಬಗಳಲ್ಲಿ ವ್ಯತ್ಯಾಸಗಳು ಮತ್ತು ಅಸಮಾಧಾನಗಳು ಸ್ವಾಭಾವಿಕವಾಗಿ ಉದ್ಭವಿಸುತ್ತವೆ. ಆದರೆ, ಅವುಗಳನ್ನು ಕುಟುಂಬದೊಳಗೆ ಪರಿಹರಿಸಲಾಗುತ್ತದೆ. ಅವರು ಮತ್ತು ಇತರ ಶಾಸಕರು ತಮ್ಮ ರಾಜೀನಾಮೆಯನ್ನು ಮರು ಪರಿಶೀಲಿಸುತ್ತಾರೆ ಮತ್ತು ನಮ್ಮ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಇಂದು ಬೆಳಗಿನ ಜಾವದಿಂದ ಎಂಟಿಬಿ ನಾಗರಾಜ್ ಮನವೊಲಿಸುವ ಕಾರ್ಯ ನಿರಂತರವಾಗಿ ಸಾಗಿದೆ. ಅವರ ನಿವಾಸದಿಂದ ಈಗ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಕರೆದುಕೊಂಡು ಬರಲಾಗಿದ್ದು, ಕಳೆದ ಎರಡು ಗಂಟೆಯಿಂದ ಇಲ್ಲಿ ಮನವೊಲಿಸುವ ಯತ್ನ ನಡೆದಿದೆ. ಮಾತುಕತೆ ಒಂದು ಹಂತಕ್ಕೆ ಸಫಲವಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು ಈ ಸಂದರ್ಭದಲ್ಲಿ ಡಿಸಿಎಂ ಮಾಡಿರುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.

Intro:newsBody:ಕುಟುಂಬದ ಭಾಗವಾಗಿರುವ ಎಂಟಿಬಿ ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ: ಡಿಸಿಎಂ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿರುವ ಎಂ ಟಿ ಬಿ ನಾಗರಾಜ್ ರಾಜೀನಾಮೆ ಹಿಂಪಡೆಯಿರಿ ದ್ದಾರೆ ಎಂಬ ವಿಶ್ವಾಸವನ್ನು ಡಿಸಿಎಂ ಡಾ ಜಿ ಪರಮೇಶ್ವರ ವ್ಯಕ್ತಪಡಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಅವರು, 'ಎಂಟಿಬಿ ನಾಗರಾಜ್ ಅವರಂತಹ ಹಿರಿಯ ನಾಯಕರು ನಮ್ಮ ಕಾಂಗ್ರೆಸ್ ಕುಟುಂಬದ ಅವಿಭಾಜ್ಯ ಅಂಗ. ಕುಟುಂಬಗಳಲ್ಲಿ ವ್ಯತ್ಯಾಸಗಳು ಮತ್ತು ಅಸಮಾಧಾನಗಳು ಸ್ವಾಭಾವಿಕವಾಗಿ ಉದ್ಭವಿಸುತ್ತವೆ ಆದರೆ ಅವುಗಳನ್ನು ಕುಟುಂಬದೊಳಗೆ ಪರಿಹರಿಸಲಾಗುತ್ತದೆ. ಅವರು ಮತ್ತು ಇತರ ಶಾಸಕರು ತಮ್ಮ ರಾಜೀನಾಮೆಯನ್ನು ಮರುಪರಿಶೀಲಿಸುತ್ತಾರೆ ಮತ್ತು ನಮ್ಮ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ಇಂದು ಬೆಳಗಿನ ಜಾವದಿಂದ ಎಂಟಿಬಿ ನಾಗರಾಜ್ ಮನವೊಲಿಸುವ ಕಾರ್ಯ ನಿರಂತರವಾಗಿ ಸಾಗಿದೆ ಅವರ ನಿವಾಸದಿಂದ ಈಗ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಕರೆದುಕೊಂಡು ಬರಲಾಗಿದ್ದು ಕಳೆದ ಎರಡು ಗಂಟೆಯಿಂದ ಇಲ್ಲಿ ಮನವೊಲಿಸುವ ಯತ್ನ ನಡೆದಿದೆ. ಮಾತುಕತೆ ಒಂದು ಹಂತಕ್ಕೆ ಸಫಲವಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು ಈ ಸಂದರ್ಭದಲ್ಲಿ ಡಿಸಿಎಂ ಮಾಡಿರುವ ಇದಕ್ಕೆ ಪುಷ್ಟಿ ನೀಡುವ ರೀತಿ ಗೋಚರಿಸುತ್ತಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.