ETV Bharat / city

ತಕ್ಷಣ ಲಾಕ್‌ಡೌನ್ ಘೋಷಿಸಿ, ಸಂಕಷ್ಟದಲ್ಲಿರುವ ಬಡವರಿಗೆ ಪರಿಹಾರ ನೀಡಿ: ಡಿ.ಕೆ.ಸುರೇಶ್

author img

By

Published : May 7, 2021, 6:49 AM IST

ಈಗಾಗಲೇ ತಜ್ಞರು, ಸಲಹಾ ಸಮಿತಿ ಸದಸ್ಯರು ಹಾಗು ಬುದ್ಧಿಜೀವಿಗಳು ಲಾಕ್‌ಡೌನ್ ಮಾಡಲು ಸಲಹೆ ನೀಡಿದ್ದರೂ ಕೇವಲ ಸರ್ಕಾರದ ಬೊಕ್ಕಸದ ದೃಷ್ಟಿಯಿಂದ ಲಾಕ್‌ಡೌನ್ ಮಾಡಿಲ್ಲ. ಸರ್ಕಾರದ ಬೊಕ್ಕಸಕ್ಕಿಂತ ಜನಸಾಮಾನ್ಯರ ಜೀವ ಅತಿಮುಖ್ಯ. ಹಾಗಾಗಿ, ತಕ್ಷಣವೇ ಒಂದು ತಿಂಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಮುಖ್ಯಮಂತ್ರಿಗಳನ್ನು ಪತ್ರದ ಮುಖೇನ ಒತ್ತಾಯಿಸಿದ್ದಾರೆ.

Bangalore
ಸಂಸದ ಡಿ.ಕೆ.ಸುರೇಶ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು ರಾಜ್ಯದಲ್ಲಿ ತಕ್ಷಣ ಲಾಕ್‌ಡೌನ್ ಘೋಷಣೆ ಮಾಡುವುದು ಮತ್ತು ಸಂಕಷ್ಟದಲ್ಲಿರುವ ಬಡ ಹಾಗು ಮಧ್ಯಮ ವರ್ಗದವರಿಗೆ ಆರ್ಥಿಕ ನೆರವು ಒದಗಿಸುವಂತೆ ಸಂಸದ ಡಿ.ಕೆ.ಸುರೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Bangalore
ಸಿಎಂಗೆ ಡಿ.ಕೆ.ಸುರೇಶ್ ಪತ್ರ

ಪತ್ರದ ವಿವರ

ಸರ್ಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಈಗಾಗಲೇ ಸಾವಿರಾರು ಮಂದಿ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ. ಪ್ರತಿದಿನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇವರುಗಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಚಿಕಿತ್ಸೆ ನೀಡಲು ಸಹ ಆಕ್ಸಿಜನ್, ಬೆಡ್‌, ಐಸಿಯು ವೆಂಟಿಲೇಟರ್‌ಗಳ ವ್ಯವಸ್ಥೆ ಇಲ್ಲದೇ ಸಾವಿನ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ತಮಗೆ ತಿಳಿದ ವಿಷಯ.

ಸರ್ಕಾರವು ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಬಗ್ಗೆ ಮಾಹಿತಿ ನೀಡುತ್ತಿರುವುದು ಶೇ.30ರಷ್ಟು ಮಾತ್ರ. ಆದರೆ, ವಾಸ್ತವವಾಗಿ ಖಾಸಗಿ ಆಸ್ಪತ್ರೆ, ಹೋಂ ಐಸೋಲೇಷನ್‌ಗಳಲ್ಲಿರುವ ಸೋಂಕಿತರ ಸಂಖ್ಯೆ ಹಾಗು ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ಶೇ. 70ರಷ್ಟಿದೆ. ಈಗಾಗಲೇ ತಜ್ಞರು, ಸಲಹಾ ಸಮಿತಿ ಸದಸ್ಯರು ಹಾಗು ಬುದ್ಧಿಜೀವಿಗಳು ಲಾಕ್‌ಡೌನ್ ಮಾಡಲು ಸಲಹೆ ನೀಡಿದ್ದರೂ ಕೇವಲ ಸರ್ಕಾರದ ಬೊಕ್ಕಸದ ದೃಷ್ಟಿಯಿಂದ ಲಾಕ್‌ಡೌನ್ ಮಾಡಿಲ್ಲ. ಸರ್ಕಾರದ ಬೊಕ್ಕಸಕ್ಕಿಂತ ಜನಸಾಮಾನ್ಯರ ಜೀವ ಅತಿಮುಖ್ಯ. ಆದುದರಿಂದ ತಾವು ತಕ್ಷಣವೇ ಒಂದು ತಿಂಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಬೇಕು. ಜೊತೆಗೆ ಕೋವಿಡ್‌ನ ಈ ಸಂಕಷ್ಟದ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಿಪಿಎಲ್ ಕಾರ್ಡುದಾರರು ಹಾಗು ಮಧ್ಯಮ ವರ್ಗದವರಿಗೆ ಆರ್ಥಿಕ ಸಹಾಯವಾಗಿ ಪ್ರತಿ ಕುಟುಂಬಕ್ಕೆ 10,000 ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಸುಮಾರು 1.25 ಕೋಟಿ ಬಿಪಿಎಲ್ ಕುಟುಂಬದವರು ಮತ್ತು 35 ಲಕ್ಷ ಮಧ್ಯಮ ವರ್ಗದ ಕುಟುಂಬದವರಿದ್ದಾರೆ. ಪ್ರತಿ ಕುಟುಂಬಕ್ಕೆ 10,000 ರೂ.ಗಳ ನೆರವನ್ನು ನೀಡಿದರೆ ಸುಮಾರು 16,000 ಕೋಟಿ ರೂ.ಗಳ ಅನುದಾನ ಅಗತ್ಯವಿರುತ್ತದೆ. ಈ ಅನುದಾನವನ್ನು ತಾವು ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ವಿವಿಧ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವ ಎಸ್.ಸಿ.ಪಿ/ಟಿ.ಎಸ್.ಪಿಯ ವೈಯುಕ್ತಿಕ ಪ್ರಗತಿಗೆ ಮೀಸಲಿಟ್ಟ ಅನುದಾನ, ಹಿಂದುಳಿದ ವರ್ಗದವರಿಗೆ ನೀಡುವ ವೈಯುಕ್ತಿಕ ಅನುದಾನ, ಮಹಿಳೆಯರ ಅಭ್ಯುದಯಗಳಿಗೆ ಮೀಸಲಿಟ್ಟಿರುವ ಅನುದಾನ, ವಿವಿಧ ನಿಗಮಗಳಲ್ಲಿ ವೈಯುಕ್ತಿಕ ಪ್ರಗತಿಗೆ ಮೀಸಲಿಟ್ಟ ಅನುದಾನಗಳು, ವಿಪತ್ತು ಪರಿಹಾರ ನಿಧಿಗೆ ಸಂಗ್ರಹವಾಗಿರುವ ಅನುದಾನ ಹಾಗು ಇತರೆ ಮೂಲಗಳ ಅನುದಾನಗಳನ್ನು ಕ್ರೋಢೀಕರಿಸಿ ನೆರವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.

ಆದ್ದರಿಂದ ಸದರಿ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ರಾಜ್ಯದಲ್ಲಿ ಸೋಂಕಿತರ ಹಾಗು ಸಾವು-ನೋವುಗಳ ಪ್ರಮಾಣದ ಸಂಖ್ಯೆಯನ್ನು ಕಡಿಮೆ ಮಾಡಲು ತುರ್ತಾಗಿ ಲಾಕ್‌ಡೌನ್ ಘೋಷಣೆ ಮಾಡಿ ಎಂದಿದ್ದಾರೆ.

ಇದನ್ನೂ ಓದಿ: ರೋಗ ಲಕ್ಷಣಗಳಿದ್ರೆ ಕೊರೊನಾ ಟೆಸ್ಟ್ ಫಲಿತಾಂಶಕ್ಕೂ ಮುನ್ನವೇ ಚಿಕಿತ್ಸೆ ಆರಂಭಿಸಿ: ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.