ETV Bharat / city

ನಕಲಿ ನೋಟಿನಾಸೆಗೆ ಅಸಲಿ ನೋಟನ್ನೇ ಕಳೆದುಕೊಂಡ ಅಸಾಮಿ.. ಉಂಡೆನಾಮ ತಿಕ್ಕಿದ ನೈಜೀರಿಯನ್ನರು

ನಕಲಿ ನೋಟಿನಾಸೆಗೆ ಬಿದ್ದ ವ್ಯಕ್ತಿಯೊಬ್ಬರು ಅಸಲಿ ನೋಟಗಳನ್ನೇ ಕಳೆದುಕೊಂಡಿರುವ ಘಟನೆ ಕಬ್ಬನ್​ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

money changing fraud from Foreigners
author img

By

Published : Aug 23, 2019, 7:50 PM IST

ಬೆಂಗಳೂರು: ನಕಲಿ ನೋಟಿನಾಸೆಗೆ ಬಿದ್ದ ವ್ಯಕ್ತಿಯೊಬ್ಬರು ಅಸಲಿ ನೋಟಗಳನ್ನೇ ಕಳೆದುಕೊಂಡಿದ್ದಾರೆ. ಕಬ್ಬನ್​ ಪಾರ್ಕ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೋಹಿತ್​ ಶರ್ಮಾ ವಂಚನೆಗೊಳಗಾದ ವ್ಯಕ್ತಿ.

Globals slab and banknote.com ಎಂಬ ವೆಬ್​ಸೈಟ್ ಲಿಂಕ್​ಗೆ ರೋಹಿತ್ ಲಾಗಿನ್​ ಆಗಿದ್ದರು. ಅದರಲ್ಲಿ ನೈಜೀರಿಯ ದೇಶದ ವಿಲಿಯಮ್ಸ್ ಮತ್ತು ಪ್ಯಾಟ್ರಿಕ್, ತಿನಾಕ್ ಗುಯಿಲಮಿ ಕೆಮರೋನಿಯನ್ ಎಂಬ ವ್ಯಕ್ತಿಗಳನ್ನ ಪರಿಚಯ ಮಾಡಿಕೊಂಡಿದ್ದಾರೆ.

ಬಳಿಕ ಆರೋಪಿಗಳು ಕಬ್ಬನ್​​ಪಾರ್ಕ್ ಬಳಿಯಿರುವ ಹೋಟೆಲ್​ಗೆ ಬರಲು ಹೇಳಿದ್ದರು. ಮೂರು ಬಿಳಿ ಹಾಳೆಗೆ ಕೆಮಿಕಲ್ ಬಳಸಿ ₹ 2000 ನೋಟು ಸಿದ್ದಪಡಿಸಿಕೊಂಡು ರೋಹಿತ್ಗೆ ಸ್ಯಾಂಪಲ್ ತೋರಿಸಿದ್ದಾರೆ.‌ ನಕಲಿ ನೋಟಿನ ಆಸೆಗೆ ಬಿದ್ದ ರೋಹಿತ್ 1.10 ಲಕ್ಷ ಮುಂಗಡ ಹಣ ಕೊಟ್ಟು ನನಗೆ ಇನ್ನೂ ನಕಲಿ ನೋಟುಗಳು ಬೇಕೆಂದು ಕೇಳಿಕೊಂಡಿದ್ದನು.

ಮುಂದೆಯೂ ಇದೇ ರೀತಿ ನಕಲಿ ನೋಟುಗಳನ್ನು ಮಾಡಿಕೊಡುವುದಾಗಿ ಆರೋಪಿಗಳು ನಂಬಿಸಿದ್ದರು. ಮುಂಗಡ ಹಣ ಪಡೆದ ನಂತ್ರ ಸದ್ಯ ಕೆಮಿಕಲ್ಸ್ ತಂದಿಲ್ಲ. ಕೆಮಿಕಲ್​​ ತಂದ ಬಳಿಕ ನಕಲಿ ನೋಟು ತಯಾರಿಸಿ ಕೊಡ್ತಿವಿ ಎಂದು ಎಂಜಿ ರಸ್ತೆಯ ಫ್ಯಾಬ್ ಹೋಟೆಲ್​ನಿಂದ ಎಸ್ಕೇಪ್​ ಆಗಿದ್ದಾರೆ.

ಸದ್ಯ ಮೋಸ ಹೋಗಿರುವ ರೋಹಿತ್​ ಕಬ್ಬನ್​​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಿನಾಕ್ ಗುಯಿಲಮಿ ಕೆಮರೋನಿಯನ್ ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳಿಗೆ ಅಸಲಿ ನೋಟು ನೀಡಿದ ರೋಹಿತನನ್ನೂ ವಿಚಾರಣೆ ನಡೆಸುತ್ತಿದ್ದಾರೆ.

Intro:Body:

bng fraud

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.