ಬೆಂಗಳೂರು: ರೇಡಿಯೇಷನ್ ಅಥವಾ ನ್ಯೂಕ್ಲಿಯರ್ ವಿಪತ್ತು ಕಣ್ಣಿಗೆ ಕಾಣದೆ ಜನರ ಜೀವಕ್ಕೆ ಕುತ್ತು ತರುತ್ತವೆ. ಇಂತಹ ಅಪಾಯದ ಸಂದರ್ಭದಲ್ಲಿ ಜನರ ಜೀವ ರಕ್ಷಣೆ ಹೇಗೆ ಸಾಧ್ಯ?, ಜಿಲ್ಲಾಡಳಿತದ ಗಮನಕ್ಕೆ ಹೇಗೆ ತರಬೇಕು ಎಂಬುದರ ಬಗ್ಗೆ ಅಣಕು ಪ್ರದರ್ಶನ ನಿನ್ನೆ (ಮಂಗಳವಾರ) ಫ್ರೀಡಂ ಪಾರ್ಕ್ನಲ್ಲಿ ನಡೆಯಿತು.
ವಿಷಕಾರಿ ಕೆಮಿಕಲ್ಗಳು ದೇಹದೊಳಗೆ ಸೇರದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ ಮಾಸ್ಕ್ ಹಾಗೂ ವಿಶೇಷವಾಗಿ ದೇಹ ಪೂರ್ತಿ ಮುಚ್ಚುವ ಸುರಕ್ಷಾ ಕವಚ, ಬಟ್ಟೆ ಹಾಗೂ ಆಯುಧಗಳಿಂದ ಈ ಯಂತ್ರ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿ, ಪ್ರಕರಣದಲ್ಲಿ ಪ್ರಜ್ಞೆ ತಪ್ಪಿ ಬಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಪ್ರದರ್ಶಿಸಲಾಯಿತು.
ಅಣಕು ಪ್ರದರ್ಶನದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮಂಜುನಾಥ್, ವಿಪತ್ತುಗಳು ಯಾವ ಸಂದರ್ಭದಲ್ಲಿ ಬೇಕಾದರೂ ಸಂಭವಿಸಬಹುದು. ಹೀಗಾಗಿ ಬೆಂಗಳೂರಲ್ಲಿ ಯಾವುದೇ ವಿಪತ್ತು ಎದುರಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನವನ್ನು ಕಾಲಕಾಲಕ್ಕೆ ನಡೆಸಲಾಗುತ್ತಿದೆ. ಈ ಹಿಂದೆಯೂ ಗೈಲ್ ಗ್ಯಾಸ್ , ಒರಾಯನ್ ಮಾಲ್ನಲ್ಲಿ ನಡೆಸಲಾಗಿತ್ತು ಎಂದರು.
ರೇಡಿಯೇಷನ್ ಅಥವಾ ನ್ಯೂಕ್ಲಿಯರ್ ವಿಪತ್ತು ನಿರ್ವಹಣೆಯ, ಈ ಕೆಮಿಕಲ್ನಿಂದ ಆಗುವ ಅನಾಹುತವನ್ನು ತಕ್ಷಣ ಪತ್ತೆಹಚ್ಚಿ, ನಿಷ್ಕ್ರಿಯಗೊಳಿಸಿ, ಪರಿಸ್ಥಿತಿಯನ್ನು ಸರಿಪಡಿಸುವ ಕುರಿತು ಪ್ರದರ್ಶನ ನಡೆಸಲಾಯಿತು. ಎನ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ನಾಗರ ಬಾವಿಯಲ್ಲಿರುವ ಆಟೋಮಿಕ್ ಎಕ್ಸ್ ಫ್ಲೋರೇಷನ್ ಯೂನಿಟ್ ನ ಸಮನ್ವಯದಿಂದ ಹೇಗೆ ವಿಪತ್ತನ್ನು ಎದುರಿಸುವುದು ಎಂಬ ಬಗ್ಗೆ ಈ ಅಣಕು ಪ್ರದರ್ಶನಲ್ಲಿ ವಿವರಿಸಲಾಯಿತು.
ನಗರ ವೇಗವಾಗಿ ಬೆಳೆಯುತ್ತಿರುವುದರಿಂದ 50 ಮಹಡಿಗಳ ಕಟ್ಟಡ ತಲೆ ಎತ್ತುತ್ತಿವೆ. ಜನಸಂಖ್ಯೆ ಕೋಟಿ ಮೀರಿ ಬೆಳೆಯುತ್ತಿದೆ. ಪ್ರವಾಹ ಪರಿಸ್ಥಿತಿ ಮೊದಲಾದ ವಿಪತ್ತು ಬಂದಾಗ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ: Karnataka Earthquake: ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪನ