ಬೆಂಗಳೂರು: ನಾಡಪ್ರಭು ಕೆಂಪೇಗೌಡರನ್ನು ಅವಹೇಳನ ಮಾಡಿರುವ ಆರ್‌ಎಸ್‌ಎಸ್ ಮುಖಂಡನ ವಿರುದ್ಧ ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನ ಮಾಡಿರುವ ಆರ್‌ಎಸ್‌ಎಸ್ ಮುಖಂಡನ ಹೇಳಿಕೆ ತೀವ್ರವಾಗಿ ಖಂಡಿಸುತ್ತೇನೆ. ಈ ಸಂಬಂಧ ಒಕ್ಕಲಿಕ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತಪ್ಪಿತಸ್ಥನನ್ನು ಈ ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
-
ಇವತ್ತು ಬೆಂಗಳೂರು ಜಾತಿ ಮತಗಳನ್ನು ಮೀರಿ ಕೋಟ್ಯಾಂತರ ಜನಕ್ಕೆ ಬದುಕು ನೀಡಿದೆ. ಇಲ್ಲಿ ದುಡಿದು ದೂರದ ಹಳ್ಳಿಗಳ ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವವರು ಮುನ್ನೋಟದಿಂದ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಕೃತಜ್ಞತೆಯಿಂದ ನೆನೆಯಬೇಕು. ಕೆಂಪೇಗೌಡರಂತಹ ನಿಸ್ವಾರ್ಥ ಸೇವಕರನ್ನು ನಿಂದಿಸುವುದು ಅನ್ನ ತಿಂದ ಮನೆಗೆ ಬಗೆಯುವ ದ್ರೋಹ.
— B Z Zameer Ahmed Khan (@BZZameerAhmedK) June 2, 2020 " class="align-text-top noRightClick twitterSection" data="
">ಇವತ್ತು ಬೆಂಗಳೂರು ಜಾತಿ ಮತಗಳನ್ನು ಮೀರಿ ಕೋಟ್ಯಾಂತರ ಜನಕ್ಕೆ ಬದುಕು ನೀಡಿದೆ. ಇಲ್ಲಿ ದುಡಿದು ದೂರದ ಹಳ್ಳಿಗಳ ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವವರು ಮುನ್ನೋಟದಿಂದ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಕೃತಜ್ಞತೆಯಿಂದ ನೆನೆಯಬೇಕು. ಕೆಂಪೇಗೌಡರಂತಹ ನಿಸ್ವಾರ್ಥ ಸೇವಕರನ್ನು ನಿಂದಿಸುವುದು ಅನ್ನ ತಿಂದ ಮನೆಗೆ ಬಗೆಯುವ ದ್ರೋಹ.
— B Z Zameer Ahmed Khan (@BZZameerAhmedK) June 2, 2020ಇವತ್ತು ಬೆಂಗಳೂರು ಜಾತಿ ಮತಗಳನ್ನು ಮೀರಿ ಕೋಟ್ಯಾಂತರ ಜನಕ್ಕೆ ಬದುಕು ನೀಡಿದೆ. ಇಲ್ಲಿ ದುಡಿದು ದೂರದ ಹಳ್ಳಿಗಳ ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವವರು ಮುನ್ನೋಟದಿಂದ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಕೃತಜ್ಞತೆಯಿಂದ ನೆನೆಯಬೇಕು. ಕೆಂಪೇಗೌಡರಂತಹ ನಿಸ್ವಾರ್ಥ ಸೇವಕರನ್ನು ನಿಂದಿಸುವುದು ಅನ್ನ ತಿಂದ ಮನೆಗೆ ಬಗೆಯುವ ದ್ರೋಹ.
— B Z Zameer Ahmed Khan (@BZZameerAhmedK) June 2, 2020
ಇಂದು ಬೆಂಗಳೂರು ಜಾತಿ ಮತಗಳನ್ನು ಮೀರಿ ಕೋಟ್ಯಂತರ ಜನಕ್ಕೆ ಬದುಕು ನೀಡಿದೆ. ಇಲ್ಲಿ ದುಡಿದು ದೂರದ ಹಳ್ಳಿಗಳ ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವವರು ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಕೃತಜ್ಞತೆಯಿಂದ ನೆನೆಯಬೇಕು. ಕೆಂಪೇಗೌಡರಂತಹ ನಿಸ್ವಾರ್ಥ ಸೇವಕರನ್ನು ನಿಂದಿಸುವುದು ಅನ್ನ ತಿಂದ ಮನೆಗೆ ಬಗೆಯುವ ದ್ರೋಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡಬೇಕು ಎಂದು ಪುನೀತ್ ಕೆರೆಹಳ್ಳಿ ಹಾಗೂ ಇತರ ಆರ್‌ಎಸ್‌ಎಸ್ ಮುಖಂಡರು ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ ಸಂದರ್ಭ ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಒಕ್ಕಲಿಗರ ಸಂಘ ಹಾಗೂ ಕನ್ನಡಪರ ಕಾರ್ಯಕರ್ತರು ಎರಡು ದಿನಗಳ ಹಿಂದೆ ಕೆಲವರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಕನ್ನಡಪರ ಸಂಘಟನೆಯ ಹೋರಾಟಗಾರರಿಗೆ ಜಮೀರ್ ಅಹಮದ್ ನಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.