ETV Bharat / city

ಜೇಮ್ಸ್ ಚಿತ್ರದ ಪ್ರದರ್ಶನ ಯಥಾವಾತ್ತಾಗಿ ಮುಂದುವರಿಸಬೇಕು: ಕುಮಾರ ಬಂಗಾರಪ್ಪ ಒತ್ತಾಯ

ಪುನೀತ್ ಅಭಿಮಾನಿಗಳು ಜೇಮ್ಸ್ ಚಿತ್ರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟಿದ್ದಾರೆ. ಜೇಮ್ಸ್ ಚಿತ್ರವನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.

mla-kumar-bangarappa-on-james-movie
ಜೇಮ್ಸ್ ಚಿತ್ರ ಯಥವಾತ್ತಾಗಿ ಮುಂದುವರಿಯಬೇಕು: ಕುಮಾರ ಬಂಗಾರಪ್ಪ
author img

By

Published : Mar 23, 2022, 1:32 PM IST

Updated : Mar 23, 2022, 2:19 PM IST

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಥಾವತ್ತಾಗಿ ಮುಂದುವರಿಸಬೇಕು. ಪುನೀತ್ ಅಭಿಮಾನಿಗಳು ಚಿತ್ರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಮನವಿ ಮಾಡಿದ್ದಾರೆ. ಜೇಮ್ಸ್ ಚಿತ್ರ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು ಎಲ್ಲ ಚಿತ್ರಕ್ಕೂ ಪ್ರಾಶಸ್ತ್ಯ ಕೊಡ್ತೇವೆ. ಆಂಧ್ರ, ತೆಲಂಗಾಣದಲ್ಲೂ ಜೇಮ್ಸ್ ಚಿತ್ರ ಯಶಸ್ವಿಯಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ರಾಜಕಾರಣ ಬೆರೆಸುವುದು ಬೇಡ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಬೇಧ - ಭಾವ ಬೇಡ ಎಂದಿದ್ದಾರೆ.

ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ

ಚಿತ್ರ ಯಶಸ್ವಿಯಾಗಿ ನಡೆಯಲು ಅವಕಾಶ ಮಾಡಿಕೊಡಬೇಕು. ಬಿಜೆಪಿ ಶಾಸಕರ ಒತ್ತಡವಿದೆ ಅನ್ನೋದು ಸ್ಪೆಕ್ಯುಲೇಶನ್‌. ಕಾಶ್ಮೀರಿ ಫೈಲ್ಸ್ ಚಿತ್ರ ಎಲ್ಲರೂ ವೀಕ್ಷಣೆ ಮಾಡಿ. ಎರಡೂ ಚಿತ್ರಗಳನ್ನು ಎಲ್ಲರೂ ನೋಡಬೇಕು ಎಂದು ಕುಮಾರ ಬಂಗಾರಪ್ಪ ಮನವಿ ಮಾಡಿದರು.

ಇದನ್ನೂ ಓದಿ: ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸ ಆರಂಭವಾಗಿದೆ: ಹೆಚ್​ಡಿಕೆ

Last Updated : Mar 23, 2022, 2:19 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.