ETV Bharat / city

ಅಶ್ವತ್ಥ ನಾರಾಯಣ​​ ಲಸಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಮೋಹನ್ ದಾಸರಿ

ಉಪ ಮುಖ್ಯಮಂತ್ರಿಗಳು ತಾವು ಸಮಸ್ತ ಕರ್ನಾಟಕ ರಾಜ್ಯಕ್ಕೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಕಾರ್ಯಪಡೆಯ ಅಧ್ಯಕ್ಷರು ಎಂಬುದನ್ನು ಮರೆತು ಕೇವಲ ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡಿದ್ದಾರೆ ಎಂದು ಆಪ್​ ಆರೋಪಿಸಿದೆ.

ಅಶ್ವತ್ಥ ನಾರಾಯಣ​​ ಲಸಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ

author img

By

Published : Jun 11, 2021, 8:28 PM IST

Updated : Jun 11, 2021, 9:01 PM IST

ಬೆಂಗಳೂರು: ಕೊರೊನಾ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಪ್ರಾರಂಭದಿಂದಲೂ ಲಸಿಕೆ ವಿತರಣೆಯಲ್ಲಿ ದುರ್ಬಳಕೆ, ಸ್ವಜನಪಕ್ಷಪಾತ, ಗೊಂದಲಗಳು, ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.

ಉಪ ಮುಖ್ಯಮಂತ್ರಿಗಳು ತಾವು ಸಮಸ್ತ ಕರ್ನಾಟಕ ರಾಜ್ಯಕ್ಕೆ ಕೊರೊನಾ ಮಹಾಮಾರಿ ನಿಯಂತ್ರಿಸುವ ಕಾರ್ಯಪಡೆಯ ಅಧ್ಯಕ್ಷರು ಎಂಬುದನ್ನು ಮರೆತು ಕೇವಲ ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಡಾ. ಸಿ. ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಹೆಸರಿನಲ್ಲಿ ತಮ್ಮ ಬೆಂಬಲಿಗರು ಇರುವ ಪ್ರದೇಶಗಳಲ್ಲಿ ಮಾತ್ರ ಟೋಕನ್ ಗಳನ್ನು ಮೊದಲೇ ವಿತರಿಸಿ ಲಸಿಕೆಯನ್ನು ಹಾಕುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ ಎಂದು ದೂರಿದರು.

ಫ್ರಂಟ್ ಲೈನ್ ವಾರಿಯರ್ಸ್ ಗಳ ನೆಪದಲ್ಲಿ, ಆದ್ಯತೆಯ ನಿಯಮ ಹಾಗೂ ಕಂಪನಿಗಳ ಸಾಮಾಜಿಕ ಜವಾಬ್ದಾರಿಯ ನಿಧಿ ಅಡಿ ದುರ್ಬಳಕೆ ಮಾಡಿಕೊಂಡು ಈ ರೀತಿಯ ಲಸಿಕೆ ವಿತರಣೆಯನ್ನು ಬಿಜೆಪಿ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ಅನೈತಿಕ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಉಪ ಮುಖ್ಯಮಂತ್ರಿಗಳು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಇಂಬು ನೀಡುತ್ತಿದ್ದಾರೆ. ಜನತೆ ಬೆಳ್ಳಂ ಬೆಳಗ್ಗೆ 8 ಗಂಟೆಗೆ ಲಸಿಕಾ ಕೇಂದ್ರಗಳಿಗೆ ಹೋದರೂ ಯಾರಿಗೂ ಲಸಿಕೆ ಸಿಗುವುದಿಲ್ಲ. ಕೇವಲ ಟೋಕನ್ ಹೊಂದಿರುವವರಿಗೆ ಮಾತ್ರ ಲಸಿಕೆ ನೀಡುತ್ತಿರುವುದು ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಕಾಣಸಿಗುತ್ತದೆ ಎಂದರು.

ಈ ಗೊಂದಲಗಳಿಗೆ ನೇರವಾಗಿ ಕಾರಣಕರ್ತರಾಗಿರುವ ಕಾರ್ಯಪಡೆ ಅಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಬೇಕು ಎಂದು ರಾಜ್ಯಪಾಲರಲ್ಲಿ ದೂರನ್ನು ಸಹ ನೀಡಲಾಗುವುದೆಂದು ಎಂದು ಮೋಹನ್ ದಾಸರಿ ತಿಳಿಸಿದರು.

Last Updated : Jun 11, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.