ETV Bharat / city

ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆಯಿಲ್ಲ; ಉಮೇಶ್ ಕತ್ತಿ - Minister Umesh katti press note

ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಹೇಳುವ ಮೂಲಕ ಕಳೆದ ಒಂದೆರಡು ದಿನಗಳಿಂದ ನಡೆಯುತ್ತಿದ್ದ ಬಿಪಿಎಲ್ ಕಾರ್ಡುದಾರರ ಮಾನದಂಡ ಬದಲಾವಣೆ ಸಂಬಂಧಿತ ವಿಚಾರಕ್ಕೆ ಸಚಿವ ಉಮೇಶ್ ಕತ್ತಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

minister-umesh-katti-press-note-about-bpl-card
ಸಚಿವ ಉಮೇಶ್ ಕತ್ತಿ
author img

By

Published : Feb 15, 2021, 4:01 PM IST

ಬೆಂಗಳೂರು: ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ ಎಂದು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

minister-umesh-katti-press-note-about-bpl-card
ಸಚಿವ ಉಮೇಶ್ ಕತ್ತಿ ಪತ್ರಿಕಾ ಪ್ರಕಟಣೆ

ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಹೇಳುವ ಮೂಲಕ ಕಳೆದ ಒಂದೆರಡು ದಿನಗಳಿಂದ ನಡೆಯುತ್ತಿದ್ದ ಬಿಪಿಎಲ್ ಕಾರ್ಡುದಾರರ ಮಾನದಂಡ ಬದಲಾವಣೆ ಸಂಬಂಧಿತ ವಿಚಾರಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬಿಪಿಎಲ್ ಕಾರ್ಡ್ ಕುರಿತಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಮೀಕರಣ ನೀಡುತ್ತಿದ್ದೇನೆ. ಸರ್ಕಾರದ ಆದೇಶಗಳ ಮೂಲಕ ಬಿ.ಪಿ.ಎಲ್ ಕುಟುಂಬಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಒಳಪಡಿಸುವ ಉದ್ದೇಶದಿಂದ ಈಗಾಗಲೇ ಹಿಂದಿನ ಸರ್ಕಾರಗಳು ಆದೇಶಗಳನ್ನು ಹೊರಡಿಸಿರುತ್ತವೆ. ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾಗಲೀ ಅಥವಾ ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರವಾಗಲಿ ಈ ಆದೇಶಗಳಲ್ಲಿ ಯಾವುದೇ ತಿದ್ದುಪಡಿ ಮಾಡಿರುವುದಿಲ್ಲ ಎಂದಿದ್ದಾರೆ.
ಓದಿ: ಯಾವ ಸರ್ಕಾರವೂ ಬಡವನ ಮೇಲೆ ಬರೆ ಎಳೆಯಲ್ಲ.. ಕಡಿಮೆ ಇದ್ರೇ ಯಾರೂ ಮಾತಾಡಲ್ಲ.. ಸಚಿವ ಸುರೇಶ್‌ಕುಮಾರ್‌

ತಮ್ಮ ಹೇಳಿಕೆಗೆ ಸಮರ್ಥನೆ ನೀಡುವ ಮೂರು ಆದೇಶಗಳ ಮಾಹಿತಿ ಒದಗಿಸಿರುವ ಅವರು, ಇವುಗಳಲ್ಲಿ ಕಾಣಿಸಿರುವಂತೆ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಂತಹ ಕುಟುಂಬಗಳು ದಿನಾಂಕ: 31.03.2021 ರೊಳಗಾಗಿ ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಹಿಂದಿರುಗಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿರುತ್ತೇನೆ. ಒಂದುವೇಳೆ ಕಾಲಾವಧಿಯೊಳಗೆ ಹಿಂದಿರುಗಿಸದಿದ್ದರೆ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.