ETV Bharat / city

ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವುದಿಲ್ಲ, ಇದು ವದಂತಿಯಷ್ಟೇ: ಸಚಿವ ಸುನಿಲ್ ಕುಮಾರ್

ರೈತರ ಪಂಪ್‌ ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದಿಲ್ಲ. ಇದು ಕೇವಲ ವಂದತಿಷ್ಟೇ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.

Minister Sunil kumar reaction on meter for farmers pump set
ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವುದಿಲ್ಲ, ಇದು ವದಂತಿಯಷ್ಟೇ: ಸಚಿವ ಸುನಿಲ್ ಕುಮಾರ್
author img

By

Published : Aug 14, 2021, 2:55 AM IST

ಬೆಂಗಳೂರು: ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತನೆ ಇಲ್ಲ. ಈ ಸಂಬಂಧ ವದಂತಿಯನ್ನು ರೈತರು ನಂಬ ಬಾರದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸೌರ ವಿದ್ಯುತ್ ಯೋಜನೆಗಳಲ್ಲಿ ಈ ಹಿಂದಿನ ಹಗರಣ ತನಿಖೆ ನಡೆಸಬೇಕೆಂಬ ಈ‌ ಮುಂಚೆ ನಾನು ಮಾಡಿದ್ದ ಒತ್ತಾಯಕ್ಕೆ ಈಗಲೂ ಬದ್ಧನಾಗಿದ್ದೇನೆ. ಇಲಾಖೆಯಲ್ಲಿ ಈ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಸುಧಾರಣೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆಯುತ್ತೇನೆ. ಲೋಪದೋಷಗಳೇನಾದರು ಆಗಿದ್ದರೆ ತನಿಖೆ ಸಿದ್ಧನಿದ್ದೇನೆ ಎಂದರು.

ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ಯಾವುದೇ ಚಿಂತನೆ ಇಲ್ಲ. ಈ ಸಂಬಂಧ ಇರುವ ಊಹಾಪೋಹಗಳಿಗೆ ರೈತರು ಕಿವಿಗೊಡಬಾರದು ಎಂದು ಹೇಳಿದ್ದಾರೆ. ಇಲಾಖೆಯನ್ನು ಜನ ಸ್ನೇಹಿಯಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ. ರೈತರಿಗೆ ನಿರಂತರ ವಿದ್ಯುತ್ ಪೂರೈಸಲು ಎಲ್ಲಾ ಯತ್ನ ಮಾಡಲಾಗುವುದು. ಇಲಾಖೆಯಲ್ಲಿನ ಎಲ್ಲಾ ಹಂತಗಳಲ್ಲಿ ಸುಧಾರಣೆ ತಂದು, ಇಲಾಖೆಯನ್ನು ಕ್ರಿಯಾಶೀಲಗೊಳಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.