ETV Bharat / city

ಪಿಂಚಣಿ, ಧನಸಹಾಯ ಹೆಚ್ಚಿಸಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಸಚಿವ ಶಿವರಾಮ್ ಹೆಬ್ಬಾರ್​ - ಕಾರ್ಮಿಕ ಕಲ್ಯಾಣ ಇಲಾಖೆ

ಕಾರ್ಮಿಕ ಕಲ್ಯಾಣ ಭವನದಲ್ಲಿ ನಡೆದ ಸಭೆಯಲ್ಲಿ ಹಲವು ಕ್ಷೇತ್ರಗಳ ಕಾರ್ಮಿಕರಿಗೆ ಸಚಿವ ಶಿವರಾಮ್ ಹೆಬ್ಬಾರ್ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದರು.

minister-shivaram-hebbar-announcing-increase-in-payouts-for-construction-workers-in-board-meeting
ಪಿಂಚಣಿ, ಧನಸಹಾಯ ಹೆಚ್ಚಿಸಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್: ಮಂಡಳಿ ಸಭೆಯಲ್ಲಿ ಹಲವು ಕೊಡುಗೆ ಪ್ರಕಟ
author img

By

Published : Jul 2, 2021, 1:24 AM IST

ಬೆಂಗಳೂರು: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಗುರುವಾರ ಕಾರ್ಮಿಕ ಕಲ್ಯಾಣ ಭವನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಮಂಡಳಿಯ ನಿರ್ದೇಶಕರೊಂದಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಭೆ ನಡೆಸಿದರು.

ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ನೀಡಲಾಗುತ್ತಿರುವ ಧನ ಸಹಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದರ ಮೂಲಕವಾಗಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕರಿಗೆ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದರು.

ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚದಲ್ಲಿ ಮಂಡಳಿ ಭರಿಸಲಿದೆ. ಪ್ಯಾರಾ ಮೆಡಿಕಲ್, ಬಿಎಡ್ ಕೋರ್ಸ್ ಗಳನ್ನು ಹೊಸದಾಗಿ ಸೇರಿಸಲಾಗಿದೆ, ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 30 ಸಾವಿರ ರೂಪಾಯಿ ಹಾಗೂ ಇತರೆ ವೃತ್ತಿಪರ ಕೋರ್ಸಗಗಳಿಗೆ ಸಹಾಯಧನವನ್ನು ನೀಡಲಾಗುವುದು ಎಂದು ಸಚಿವ ಹೆಬ್ಬಾರ್ ಹೇಳಿದರು.

ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗಳಿಗೆ, ವಿವಾಹ ಸಹಾಯಧನವನ್ನು 50 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲಾ ನೂತನ ಪರಿಷ್ಕೃತ ಸಹಾಯ ಧನವನ್ನು ಗುರುವಾರದಿಂದಲೆ ಜಾರಿಗೊಳಿಸುವಂತೆ ಸಚಿವ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಮಿಕ ಈ ಸೌಲಭ್ಯ ಸಹಾಯವನ್ನು ಪಡೆಯಲ್ಲಿದ್ದಾರೆ. ಮಂಡಳಿಯು ವಾರ್ಷಿಕವಾಗಿ ಸುಮಾರು 100 ಕೋಟಿ ರೂಪಾಯಿಗಳನ್ನು ಈ ಎಲ್ಲಾ ಯೋಜನೆಗಳಿಗೆ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ವತಿಯಿಂದ ಆಗಸ್ಟ್​ ತಿಂಗಳ ಅಂತ್ಯದೊಳಗಾಗಿ ವಿಶೇಷ ಅದಾಲತ್ ಮೂಲಕವಾಗಿ ಸಹಾಯಧನವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲರ ಅರ್ಜಿಯನ್ನು ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದರು.

ಇದನ್ನೂ ಓದಿ: ವಾಟ್ಸಪ್ ಹ್ಯಾಕ್ ಮಾಡಿ, ಒಂದು ಲಕ್ಷ ದೋಚಿದ ಸೈಬರ್ ಕಳ್ಳರು.!

ಈ ಸಭೆಯಲ್ಲಿ ಈ ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಜಿ.ಕಲ್ಪನಾ ಹಾಗೂ ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾದ ನಾಗನಾಥ, ಪ್ರಕಾಶ ಎಮ್ ನಾಡಗೇರ್ ಹಾಗೂ ಶ್ರೀಮತಿ ಶಿವಾನಿ ಭಟ್ಕಳ , ಆರ್ಥಿಕ ಇಲಾಖೆ ಅಧಿಕಾರಿಗಳು, ಕೇಂದ್ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಪ್ರತಿನಿಧಿಗಳು ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.