ETV Bharat / city

ರಾಸಲೀಲೆ ವಿಡಿಯೋ ಫೇಕ್, ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಸಚಿವ ರಮೇಶ್ ಜಾರಕಿಹೊಳಿ - ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ

ರಾಸಲೀಲೆ ವಿಡಿಯೋ ಸಂಪೂರ್ಣ ಫೇಕ್, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆ ಯುವತಿ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ramesh jarakiholi
ಸಚಿವ ರಮೇಶ್ ಜಾರಕಿಹೊಳಿ
author img

By

Published : Mar 3, 2021, 1:11 AM IST

Updated : Mar 3, 2021, 1:27 AM IST

ಬೆಂಗಳೂರು: ರಾಸಲೀಲೆ ವಿಡಿಯೋ ಸಂಪೂರ್ಣ ಫೇಕ್, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆ ಯುವತಿ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಸದಾಶಿವನಗರ ತಮ್ಮ ನಿವಾಸದಲ್ಲಿ ವಿಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು ನನ್ನ ಬಗ್ಗೆ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ಎಂಬಾತನ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಇದರಿಂದ ನನಗೆ ಆಘಾತವಾಗಿದೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಇದನ್ನು ಫೇಸ್ ಮಾಡುತ್ತೇನೆ, ನಾನು ಯಾಕೆ ಈ ವಿಚಾರಕ್ಕೆ ರಾಜೀನಾಮೆ ಕೊಡಲಿ. ನಾಡಿದ್ದು ಅಧಿವೇಶನ ಇದೆ. ಅಲ್ಲೂ ನಾನು ಎದುರಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇದು ರಾಜಕೀಯ ಗಿಮಿಕ್. 2019ರ ಉಪಚುನಾವಣೆ ವೇಳೆ ನನ್ನ ವಿರುದ್ಧ ಷಡ್ಯಂತರ ಮಾಡಿದ್ದರು. ಆಗ ಜನರು ಉತ್ತರ ಕೊಟ್ಟರು. ಈಗ ಬೆಳಗಾವಿ ಲೋಕಸಭೆ ಉಪಚುನಾವಣೆ ವೇಳೆ ಅದೇ ರೀತಿ ಮಾಡಿದ್ದಾರೆ. ನಾನು ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ನಾನು ಈ ವಿಡಿಯೋವನ್ನು ನೋಡೇ ಇಲ್ಲ. ಮಾಧ್ಯಮದಲ್ಲಿ ಬರುತ್ತಿರುವುದನ್ನು ಗಮನಿಸಿ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ನಮ್ಮದು ಶಿಸ್ತಿನ ಪಕ್ಷ ಇವೆಲ್ಲಾ ಸಹಿಸಲ್ಲ: ರಮೇಶ್​ ಜಾರಕಿಹೊಳಿ ಪ್ರಕರಣಕ್ಕೆ ಜೋಶಿ ಪ್ರತಿಕ್ರಿಯೆ

ದೇವರಾಣೆಗೂ ನನಗೆ ಆ ಯುವತಿ ಯಾರೂ ಅನ್ನೋದು ಗೊತ್ತಿಲ್ಲ. ಆಕೆಯನ್ನು ನೋಡಲೂ ಇಲ್ಲ. ಈ ಬಗ್ಗೆ ತನಿಖೆಯಾಗಲಿ.‌ ನನಗೆ ಯಾವುದೇ ಟೆನ್ಷನ್‌ ಇಲ್ಲ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದೆ. ನಮ್ಮ ಕುಟುಂಬ ದೊಡ್ಡ ಮನೆತನವಾಗಿದೆ. ರಾಜಕೀಯ, ನಾನು ಮಂತ್ರಿ ಎಂಬುದನ್ನು ಬಿಟ್ಟು ಬಿಡಿ, ಕುಟುಂಬಕ್ಕೆ ಧಕ್ಕೆಯಾದರೆ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ. ಆ ವಿಡಿಯೋ ಸಿಡಿ ನಕಲಿಯಾಗಿದೆ ಎಂದು ತಿಳಿಸಿದರು.

ನಾನು ಕೂಡಲೇ ದೆಹಲಿಗೆ ಹೊರಡುತ್ತೇನೆ. ಸಿಎಂ ಬಳಿ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Last Updated : Mar 3, 2021, 1:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.