ETV Bharat / city

ರಾಮ-ಕೃಷ್ಣ ಅಂದ್ರೇ ಕಾಂಗ್ರೆಸ್‌ನವರು ಉರ್ಕೋಳ್ತಾರೆ, ಬೆಂಕಿ ಇಟ್ಕೊಳ್ತಾರೆ.. ಸಚಿವ ಆರ್ ಅಶೋಕ್ - ಪಾದಯಾತ್ರೆ ಬಗ್ಗೆ ಆರ್ ಅಶೋಕ್ ಪ್ರತಿಕ್ರಿಯೆ

ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಸಂಬಂಧ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಈ ನಿರ್ಧಾರದಿಂದ ಬಿಜೆಪಿ ಭಸ್ಮ ಆಗುತ್ತದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಬುದ್ಧಿಗೆ ಮೆಚ್ಚಲೇಬೇಕು. ಹಾಗಾದರೆ, ಮುಸ್ಲಿಮರಿಗೆ ಏನು ಆಗಲ್ವಾ?. ಚರ್ಚ್​​ಗಳು ಸರ್ಕಾರದ ನಿಯಂತ್ರಣದಲ್ಲಿಲ್ಲ, ಅವರಿಗೆ ಏನು ಆಗಲ್ವಾ?. ಬರೇ ದೇವಸ್ಥಾನಗಳನ್ನು ಸ್ವತಂತ್ರ ಮಾಡಿದರೆ ಅವರಿಗೆ ಹೊಟ್ಟೆ ಉರಿ..

minister r ashok
ಸಚಿವ ಆರ್ ಅಶೋಕ್
author img

By

Published : Jan 1, 2022, 5:51 PM IST

ಬೆಂಗಳೂರು : ಹೊಸ ವರ್ಷಕ್ಕೆ ನಿವೇಶನ, ಮನೆ‌ ಖರೀದಿದಾರರಿಗೆ ಕಂದಾಯ ಇಲಾಖೆ ಸಿಹಿ ಸುದ್ದಿ ನೀಡಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಂದಾಯ ನಿವೇಶನ, ನಿವೇಶನ ಹಾಗೂ ಫ್ಲ್ಯಾಟ್​ ಮೇಲಿನ‌ ಮಾರ್ಗಸೂಚಿ ದರದ ಮೇಲೆ ಶೇ.10ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ನಿವೇಶನ ಖರೀದಿದಾರರಿಗೆ ಅನುಕೂಲವಾಗಲಿದೆ. ಕಳೆದ ಎರಡು ವರ್ಷದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ,ರೆವಿನ್ಯೂ, ಸೈಟ್, ಫ್ಲ್ಯಾಟ್​ ಗೈಡ್​ಲೈನ್ಸ್ ಮೌಲ್ಯದಲ್ಲಿ ಶೇ.10ರಷ್ಟು ಕಡಿಮೆ‌ ಮಾಡಲಾಗಿದೆ. ಮೂರು ತಿಂಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ ಎಂದರು.

ಮೇಕೆದಾಟು ಪಾದಯಾತ್ರೆ ಕುರಿತು ಸಚಿವ ಆರ್ ಅಶೋಕ್ ಮಾತನಾಡಿರುವುದು..

ಆಯಾಯ ಪ್ರದೇಶದ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯ ಆಗಲಿದೆ. ಎಲ್ಲ ರೀತಿಯ ನಿವೇಶನಗಳ ನೋಂದಣಿಗೆ ಇದು ಅನ್ವಯವಾಗಲಿದೆ. ಜನವರಿ 1 ರಿಂದ ಮಾರ್ಚ್ 31ರವರೆಗೆ ಈ ರಿಯಾಯಿತಿ ಇರಲಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಸಂಬಂಧ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಈ ನಿರ್ಧಾರದಿಂದ ಬಿಜೆಪಿ ಭಸ್ಮ ಆಗುತ್ತದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಬುದ್ಧಿಗೆ ಮೆಚ್ಚಲೇಬೇಕು. ಹಾಗಾದರೆ, ಮುಸ್ಲಿಮರಿಗೆ ಏನು ಆಗಲ್ವಾ?.

ಚರ್ಚ್​​ಗಳು ಸರ್ಕಾರದ ನಿಯಂತ್ರಣದಲ್ಲಿಲ್ಲ, ಅವರಿಗೆ ಏನು ಆಗಲ್ವಾ?. ಬರೇ ದೇವಸ್ಥಾನಗಳನ್ನು ಸ್ವತಂತ್ರ ಮಾಡಿದರೆ ಅವರಿಗೆ ಹೊಟ್ಟೆ ಉರಿ. ರಾಮ, ಕೃಷ್ಣಾ ಅಂದ್ರೆ ಉರ್ಕೋತಾರೆ, ಬೆಂಕಿ ಇಟ್ಟುಕೊಳ್ಳುತ್ತಾರೆ ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ನದ್ದು ಗಿಮಿಕ್ ಪಾದಯಾತ್ರೆ : ಸಿದ್ದರಾಮಯ್ಯ ಸಿಎಂ ಆಗಿದ್ರು. ನಯಾ ಪೈಸೆಯನ್ನು ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಏನೂ ಮಾಡದಿದ್ದಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕಟ್ಟಡ ಕಾಮಗಾರಿ ವೇಳೆ ದುರಂತ.. ಹಿಟಾಚಿ ಹರಿದು 3 ವರ್ಷದ ಮಗು ದುರ್ಮರಣ..

ಐದು ವರ್ಷ ಅವಧಿಯಲ್ಲಿ ಒಂದು ವರ್ಷ ಸಿದ್ದರಾಮಯ್ಯ-ಕುಮಾರಸ್ವಾಮಿ ಜಗಳಕ್ಕೆ ಮೀಸಲಾಗಿತ್ತು. ಇನ್ನೂ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೀರಾವರಿಗೆ ಎಷ್ಟು ಮೀಸಲು ಇಟ್ಟಿದ್ದರು ಎಂದು ಪ್ರಶ್ನಿಸಿದರು. ಡಿಕೆಶಿ ಅಧಿಕಾರದ ಮದದಿಂದ ಕೂತಿದ್ದರು. ಜನರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ.

ಮೇಕೆದಾಟು ಬಗ್ಗೆ ಈಗ ಮೈ ಪರಚಿಕೊಳ್ಳುತ್ತಿದ್ದಾರೆ. ಅವರಿಗೆ ನಿಜವಾಗಿ ಕಾಳಜಿ ಇದ್ದಿದ್ರೆ, ಅಧಿಕಾರದಲ್ಲಿ ಇದ್ದಾಗಲೇ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡ್ತಿದ್ರು. ಡಿಪಿಆರ್​ ರೆಡಿ ಮಾಡಲು ಆರು ವರ್ಷ ಬೇಕಿತ್ತಾ? ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತಾ ಮಾಡಿದ್ರು, ಅಲ್ಲಿ ನೀರೇ ಬತ್ತಿ ಹೋಯ್ತು. ಈಗ ಮೇಕೆದಾಟು ವಿಚಾರ ನಡೆಯುತ್ತಿದೆ ಎಂದು ಡಿಕೆಶಿ ಹೇಳಿಕೆಗೆ ಸಚಿವ ಆರ್.ಅಶೋಕ್ ತಿರುಗೇಟು‌ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.