ETV Bharat / city

ಹಿಜಾಬ್, ಕೇಸರಿ ಶಾಲು ಎರಡೂ ಕೂಡ‌ ಕಾಲೇಜು ಕ್ಯಾಂಪಸ್​​ನಲ್ಲಿ ಬರಬಾರದು: ಆರ್.ಅಶೋಕ್

author img

By

Published : Feb 9, 2022, 1:21 PM IST

ಕಾಂಗ್ರೆಸ್‌ನವರು ಏನು ಬೇಕೋ ಅದನ್ನು ಹೇಳುತ್ತಾರೆ. ಧ್ವಜವನ್ನು ಯಾರೂ ಇಳಿಸಿಲ್ಲ. ಆದರೆ ಧ್ವಜಸ್ತಂಭದಲ್ಲಿ ಕೇಸರಿ ಭಾವುಟ ಹಾರಿಸಿದ್ದು ತಪ್ಪು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Minister R Ashok
ಸಚಿವ ಆರ್. ಅಶೋಕ್

ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಎರಡು ಕೂಡಾ ಕಾಲೇಜು ಕ್ಯಾಂಪಸ್​​ಗೆ ಬರಬಾರದು ಎಂದು ಕಂದಾಯ ಸಚಿವ ಆರ್​​.ಅಶೋಕ್​​ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ 'ಸಮವಸ್ತ್ರ ನೀತಿ ಸಂಹಿತೆ' ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಕೋರ್ಟ್ ತೀರ್ಪು ಬರಬೇಕಿದೆ ಎಂದರು.

ಕಾಂಗ್ರೆಸ್​​ನಲ್ಲಿ ಎರಡು ವರ್ಗವಿದೆ. ಒಂದು ವರ್ಗ ಪ್ರಚೋದನೆ ಮಾಡುತ್ತದೆ. ಮತ್ತೊಂದು ವರ್ಗ ರಾಜಕೀಯವಾಗುತ್ತದೆ ಬೇಡ ಎನ್ನುತ್ತದೆ. ಅವರೇ ದ್ವಂದ್ವ ನಿಲುವು ಹೊಂದಿದ್ದಾರೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ಗೆ ಏನು ಬೇಕೋ ಆ ಸ್ಟೇಟ್ಮೆಂಟ್ ನೀಡಿದ್ದಾರೆ. ಅಲ್ಲಿನ ಎಸ್​ಪಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಧ್ವಜ ಇಳಿಸಿಲ್ಲ ಎಂದು ಹೇಳಿದ್ದಾರೆ. ಎಸ್​ಪಿ ಹೇಳೋದು ನಿಖರ ಮಾಹಿತಿ. ಡಿಕೆಶಿ ಹೇಳಿದ್ದು ಅಲ್ಲ. ಆದ್ರೆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಹಿಜಾಬ್​-ಕೇಸರಿ ಗಲಾಟೆ: ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಹಿಜಾಬ್ ವಿವಾದದ ಬಗ್ಗೆ ನ್ಯಾಯಾಲಯಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಬೇರೆ ಬೇರೆ ರಾಜ್ಯದ ನ್ಯಾಯಾಲಯದ ನಿರ್ದೇಶನಗಳನ್ನು ಮುಂದಿಟ್ಟುಕೊಂಡು ಅಡ್ವೊಕೇಟ್ ಜನರಲ್ ವಾದ ಮಾಡ್ತಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಘಟನೆಗಳನ್ನು ನಿಭಾಯಿಸುವಲ್ಲಿ ವಿಫಲವಾಗಿಲ್ಲ. ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಿಎಂ ಕೂಡಾ ವಿನಂತಿ ಮಾಡಿದ್ದಾರೆ ಎಂದರು.

ಇನ್ನು ವಿವಾದದ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ. ಒಂದು ವರ್ಗ ಪ್ರೇರಣೆ ಮಾಡುತ್ತಿದೆ, ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ. ಅವರು ಹಿಜಾಬ್ ಹಾಕಿದ್ದಾರೆ ಎಂದು ಇವರು ಕೇಸರಿ ಶಾಲು ಹಾಕಿದ್ದಾರೆ ಎಂದು ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.