ETV Bharat / city

ತೆಂಗು, ಅಡಿಕೆ ಗಿಡದ ರೋಗ ನಿಯಂತ್ರಣಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳಿ: ಸಚಿವ ಡಾ.ನಾರಾಯಣಗೌಡ

author img

By

Published : Jan 19, 2021, 9:38 PM IST

ಗಿಡ್ಡ ತಳಿಯ ತೆಂಗಿಗೆ ಈ ಕೀಟಗಳ ಹಾವಳಿ ಹೆಚ್ಚಿನ ಪ್ರಮಾಣದಲ್ಲಿದೆ. ಈಗ ಚಳಿ ಇರುವ ಕಾರಣದಿಂದ ರೋಗ ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿಲ್ಲ. ಫೆಬ್ರವರಿ ತಿಂಗಳ ನಂತರ ಬಿಳಿನೊಣಗಳ ಬೆಳವಣಿಗೆ ವೇಗವಾಗಲಿದ್ದು, ಎಲ್ಲೆಡೆ ಪಸರಿಸಲಿದೆ ಎಂಬ ಅಭಿಪ್ರಾಯವನ್ನು ಕೀಟ ತಜ್ಞರು ವ್ಯಕ್ತಪಡಿಸಿದ್ದಾರೆ.

Minister Narayana gowda
ಸಚಿವ ಡಾ. ನಾರಾಯಣಗೌಡ

ಬೆಂಗಳೂರು: ರಾಜ್ಯದಲ್ಲಿ ತೆಂಗಿಗೆ ಬಿಳಿ ನೊಣಗಳ ಹಾವಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ಮತ್ತು ರೈತರಿಗೆ ಸೂಕ್ತ ಮಾಹಿತಿ, ಸೌಲಭ್ಯ ಒದಗಿಸುವ ಸಂಬಂಧ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣಗೌಡ ಅವರು, ಅಧಿಕಾರಿಗಳು, ವಿಜ್ಞಾನಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಸಭೆ ನಡೆಸಿದ್ದಾರೆ.

ತಕ್ಷಣವೇ ರೋಗ ನಿಯಂತ್ರಣಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಬೇಕು, ರೈತರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಒದಗಿಬೇಕು. ಜೊತೆಗೆ ಅಗತ್ಯ ಸಲಕರಣೆಗಳನ್ನೂ ಪೂರೈಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿದೆ. ಅದರಲ್ಲಿ 74 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ರೋಗ ಬಾಧಿಸಿದೆ. 4.64 ಲಕ್ಷ ಹೆಕ್ಟೇರ್​ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 5700 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಕೀಟ ತಜ್ಞರು, ವಿಜ್ಞಾನಿಗಳ ಜೊತೆ ಸಭೆ ನಡೆಸಿ, ತೆಂಗು ಬೆಳೆಯನ್ನು ಬಾಧಿಸುತ್ತಿರುವ ಬಿಳಿ ನೊಣದ ಹಾವಳಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವರು. ಮೊದಲು ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಯಾವೆಲ್ಲ ಮುಂಜಾಗೃತಾ ಕೃಮಗಳನ್ನ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನ ರೈತರಿಗೆ ನೀಡಬೇಕು ಎಂದು ಹೇಳಿದರು.

ಪ್ರಮುಖವಾಗಿ ಗಿಡ್ಡ ತಳಿಯ ತೆಂಗಿಗೆ ಈ ಕೀಟಗಳ ಹಾವಳಿ ಹೆಚ್ಚಿನ ಪ್ರಮಾಣದಲ್ಲಿದೆ. ಈಗ ಚಳಿ ಇರುವ ಕಾರಣದಿಂದ ರೋಗ ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿಲ್ಲ. ಫ್ರೆಬ್ರವರಿ ತಿಂಗಳ ನಂತರ ಬಿಳಿನೊಣಗಳ ಬೆಳವಣಿಗೆ ವೇಗವಾಗಲಿದ್ದು, ಎಲ್ಲೆಡೆ ಪಸರಿಸಲಿದೆ ಎಂಬ ಅಭಿಪ್ರಾಯವನ್ನು ಕೀಟ ತಜ್ಞರು ವ್ಯಕ್ತಪಡಿಸಿದ್ದಾರೆ. ರೋಗಪೀಡಿತ ಪ್ರದೇಶಗಳಿಗೆ ತೆರಳಿ ಸಂಶೋಧನೆ ನಡೆಸಿದಾಗ ಒಟ್ಟು ನಾಲ್ಕು ಪ್ರಭೇದದ ಬಿಳಿ ನೊಣಗಳು ಪತ್ತೆಯಾಗಿವೆ. ಹೀಗಾಗಿ ಈಗಲೇ ಬಿಳಿನೊಣಗಳ ಹಾವಳಿ ನಿಯಂತ್ರಣ ಮಾಡಿದಲ್ಲಿ ಬೆಳೆ ಹಾನಿ ಕೂಡ ತಡೆಯಲು ಸಾಧ್ಯವಿದೆ. ಇದಕ್ಕೆ ಪರೋಪಜೀವಿ ಕೀಟಗಳಾದ ಎನ್ಕಾರ್ಸಿಯಾ ಗ್ವಾಡೆಲೋಪೆ ಹಾಗೂ ಎನ್ಕಾರ್ಸಿಯಾ ಡಿಸ್ಪರ್ಸೆ ಪ್ರಭೇದದ ಕಣಜಗಳು ಮತ್ತು ಗುಲಗಂಜಿ ಹುಳಗಳು, ಹಸಿರು ಜರಿ ಹುಳಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಅದರಿಂದ ಬಿಳಿ ನೊಣಗಳ ಹತೋಟಿ ಸಾಧ್ಯವಾಗಲಿದೆ ಎಂದರು.

ತೆಂಗಿನ ಬೆಳೆಗೆ ಹೆಚ್ಚಾಗಿ ಬಾಧಿಸುವ ಬಿಳಿನೊಣಗಳು ಮೊದಲು 2016 ರಲ್ಲಿ ಕೊಯಂಬತ್ತೂರಿನಲ್ಲಿ ಕಾಣಿಸಿಕೊಂಡಿತ್ತು. 2018 ರಲ್ಲಿ ಕೇರಳದಲ್ಲಿ ಹಾಗೂ 2019 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು. ಈಗ ಒಟ್ಟು ನಾಲ್ಕು ರೀತಿಯ ಬಿಳಿ ನೊಣಗಳು ಕಾಣಿಸಿಕೊಂಡಿದ್ದು, ಇನ್ನೂ ಬೆಳೆಯುವ ಹಂತದಲ್ಲಿವೆ. ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾದರೆ ನಿಯಂತ್ರಣ ಕಷ್ಟವಾಗಬಹುದು ಎಂಬ ಅಭಿಪ್ರಾಯವನ್ನು ಕೀಟ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ರೈತರಿಗೆ ರೋಗ ನಿಯಂತ್ರಣದ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಅಧಿಕಾರಿಗಳು ರೋಗ ನಿರ್ವಹಣೆ ತರಬೇತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತುಮಕೂರು, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಯಲ್ಲಿ ತೆಂಗಿಗೆ ಬಿಳಿ ನೊಣಗಳ ಹಾವಳಿ ಇದೆ. ಹೀಗಾಗಿ ಈ ಭಾಗದಲ್ಲಿ ರೈತರಿಗೆ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ರೈತರಿಗೆ ಅವರ ತೋಟದಲ್ಲಿಯೇ ತರಬೇತಿ ನೀಡಿ ರೋಗ ನಿಯಂತ್ರಣಕ್ಕೆ ಬೇಕಾದ ಸಾಧನ ಸಲಕರಣೆಗಳನ್ನೂ ಒದಗಿಸಬೇಕು. ಪಾಂಪ್ಲೆಟ್ ಮೂಲಕ ಹಾಗೂ ವಾಹನಗಳಲ್ಲಿ ಧ್ವನಿವರ್ಧಕ ಅಳವಡಿಸಿ ಪ್ರತಿ ಹಳ್ಳಿಯಲ್ಲೂ ರೈತರಿಗೆ ಮಾಹಿತಿ ಒದಗಿಸಬೇಕು ಎಂದು ಸಚಿವರು ಸೂಚಿಸಿದರು.

ಇದನ್ನೂ ಓದಿ: ಮದುವೆಯಾದ 5 ತಿಂಗಳಿಗೆ ಮಗುವಿಗೆ ಜನನ.. ಆದರೆ, ಆ ಹಸುಳೆಯನ್ನ ಮಾರಿ ಬಿಡೋದೆ ಮಾರಿ!

ನಿರ್ವಹಣೆ ಹೇಗೆ?

  • ಸಸಿಗಳ ಸಾಗಾಣಿಕೆ ಮೂಲಕ ನೊಣ ಹರಡುವ ಸಾಧ್ಯತೆ ಇರುವುದರಿಂದ ಸಸಿಗಳ ಸಾಗಾಣಿಕೆ ಪೂರ್ವದಲ್ಲಿ ಪ್ರೊಫೆನೋಫೋಸ್​(Profenophos) 50 EC ಯನ್ನು 2.5 ಲೀ ಸಿಂಪಡಿಸುವುದು. ಸದರಿ ಕೀಟನಾಶಕವನ್ನು ಸಸಿಗಳಿಗಲ್ಲದೇ ಮರಗಳಿಗೆ ಸಿಂಪಡಿಸಬಾರದು.
  • ಬಿಳಿ ನೊಣದ ಹತೋಟಿಗೆ ಹಳದಿ ಬಣ್ಣದ ಸ್ಟಿಕಿ ಟ್ರಾಪ್​(Sticky Trap) ಗಳನ್ನು ಪ್ರತಿ ಎಕರೆಗೆ 40 ರಂತೆ ಹಳದಿ ಬಣ್ಣದ ಪಾಲಿಥೀನ್ ಹಾಳೆಗೆ ಹರಳೆಣ್ಣೆ ಅಥವಾ ಬಿಳಿ ಬಣ್ಣದ ಗ್ರೀಸ್ ಅನ್ನು ಎರಡು ಬದಿಗೆ ಹಚ್ಚಿ ತೆಂಗಿನ ಮರಗಳಿಗೆ ಭೂಮಿಯಿಂದ 4-5 ಅಡಿ ಎತ್ತರಕ್ಕೆ ಎರಡು ಗಿಡಗಳ ಮಧ್ಯೆ ಅಥವಾ ಕಾಂಡಕ್ಕೆ ಅಳವಡಿಸುವುದು.
  • ಬಿಳಿ ನೊಣದ ಹಾವಳಿ ತೀವ್ರವಾಗಿದ್ದಲ್ಲಿ ಅಜಾಡಿರಾಕ್ಸನ್(Azadiractin-10,000 ppm) ನ್ನು 2.5ಮಿ.ಲೀ ಪ್ರತಿ ಲೀಟರ್​ಗೆ ಬೆರಸಿ 5-7 ಲೀಟರ್ ದ್ರಾವಣ ಸಿಂಪಡಿಸುವುದು.
  • ಇಸಾರಿಯಾ ಫ್ಯುಮೋಸೊರೋಸಿಯಾ (Isaria fumosorosea) ಶಿಲೀಂಧ್ರವು ಬಿಳಿ ನೊಣದ ಹತೋಟಿ ಮಾಡುವ ಪರಾವಲಂಬಿ ಶಿಲೀಂಧ್ರವಾಗಿದ್ದು, ಸದರಿ ಶಿಲೀಂಧ್ರವು ಬಿಳಿ ನೊಣದ ಪ್ರೌಢ ಹಾಗೂ ಮರಿಗಳನ್ನು ನಾಶಮಾಡುವುದರಿಂದ 5ಗ್ರಾ/ಲೀಟರ್​ನಂತೆ ಸಿಂಪಡಿಸುವುದು.
  • ತೆಂಗಿನ ಸಸಿಗಳನ್ನು ಹಾಗೂ ಬಿಳಿನೊಣ ಹರಡಿರುವ ಪ್ರದೇಶಗಳಿಂದ ಯಾವುದೇ ಅಲಂಕಾರಿಕ ಸಸ್ಯಗಳ ಸಾಗಾಣಿಕೆ ತಪ್ಪಿಸಬೇಕು.
  • ಎನ್ಕಾರ್ಸಿಯಾ ಗೂಡಲಿಫೆ ಪರತಂತ್ರ ಜೀವಿಗಳು ಹೆಚ್ಚಾಗಿ ಹರಡಿರುವ ಪ್ರದೇಶದಿಂದ ಎಲೆಗಳನ್ನ ತಂದು ಬಿಳಿನೊಣ ಬಾಧಿತ ಪ್ರದೇಶದಲ್ಲಿ ಹಾಕಬೇಕು.
  • ಪರಾವಲಂಬಿ ಜೀವಿಗಳು ನಾಶವಾಗುವ ಕಾರಣ, ಕೀಟನಾಶಕಗಳ ಬಳಕೆ ಕಡಿಮೆ ಮಾಡಬೇಕು.
  • ಶೇ. 1 ರಷ್ಟು ಬೇವಿನ ಎಣ್ಣೆಯನ್ನು ಸ್ವಲ್ಪ ಸಾಬೂನಿನ ದ್ರಾವಣದಲ್ಲಿ ಕರಗಿಸಿ 15 ದಿನಕ್ಕೊಮ್ಮೆ ಸಿಂಪಡಿಸಬೇಕು.
  • ಹೆಚ್ಚಿನ ನೀರಿನ ಲಭ್ಯತೆ ಇದ್ದಲ್ಲಿ ಸಾಬೂನಿನ ದ್ರಾವಣ ಬೆರೆಸಿ ಸಿಂಪಡಿಸಬೇಕು.

ಇದನ್ನೂ ಓದಿ: ಚೀನಾ ಕೃತ್ಯಕ್ಕೆ ಇನ್ನೆಷ್ಟು ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಲಿದೆ: ಕಾಂಗ್ರೆಸ್ ಪ್ರಶ್ನೆ

ಅಡಿಕೆ ಸಸಿಗೆ ಹಳದಿ ಎಲೆ ರೋಗ:

ಇದೇ ವೇಳೆ ಅಡಿಕೆ ಗಿಡದಲ್ಲಿ ಕಾಣಿಸಿಕೊಂಡಿರುವ ಹಳದಿ ಎಲೆ ರೋಗ ನಿಯಂತ್ರಣದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮಲೆನಾಡಿನ ಭಾಗದಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಬಾಧಿಸುತ್ತಿದೆ. ಜೊತೆಗೆ ಸ್ಟೆಮ್ ವರ್ಮ್ ಮತ್ತು ಕೊಳೆ ರೋಗವು ದೀರ್ಘಕಾಲದಿಂದ ಅಡಿಕೆಗೆ ಬಾಧಿಸುತ್ತಿದೆ. ಪ್ರಸ್ತುತ ಹಳದಿ ಎಲೆ ರೋಗ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಅಡಿಕೆ ಸಸಿಯ ಎಲೆಯ ತುದಿ ಭಾಗ ಹಳದಿಯಾಗಿ ಒಣಗಲಾರಂಭಿಸುತ್ತದೆ. ಬೇರುಗಳ ತುದಿ ಭಾಗ ಗಟ್ಟಿಯಾಗಿ ಮರದ ಬುಡವೇ ಕಿತ್ತು ಬೀಳುತ್ತದೆ. ಹೀಗಾಗಿ ರೈತರು ಅನಿವಾರ್ಯವಾಗಿ ಪರ್ಯಾಯ ಬೆಳೆಯತ್ತ ಮುಖ ಮಾಡುವ ಸ್ಥಿತಿ ಬರಲಿದೆ. ಅಡಿಕೆ ಗಿಡಗಳನ್ನ ಸಂಪೂರ್ಣವಾಗಿ ತೆಗೆಯಬೇಕಾದ ಸಂದರ್ಭ ಎದುರಾಗಲಿದೆ ಎಂಬ ಆತಂಕದ ವಿಚಾರವನ್ನ ಕೀಟ ತಜ್ಞರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇದರ ಸಂಪೂರ್ಣ ಹತೋಟಿ ಕಷ್ಟಸಾಧ್ಯವಾಗಿದೆ. ಹೀಗಾಗಿ ಪರ್ಯಾಯ ಬೆಳೆಗಳಾದ ಕೋಕೋ, ಮೆಣಸು, ತಾಳೆ, ರಬ್ಬರ್, ಇನ್ನಿತರ ಬೆಳೆಗಳನ್ನ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ ರೋಗ ನಿಯಂತ್ರಣಕ್ಕೆ ಹೆಚ್ಚಿನ ಸಂಶೋಧನೆ ನಡೆಸುವ ಬಗ್ಗೆಯೂ ಚರ್ಚೆ ನಡೆಸಿ, ಸೂಕ್ತ ಮಾರ್ಗೋಪಾಯಗಳನ್ನ ತ್ವರಿತವಾಗಿ ಸೂಚಿಸಬೇಕು ಎಂದು ಸಚಿವ ಡಾ.ನಾರಾಯಣ ಗೌಡ ಅಧಿಕಾರಿಗಳಿಗೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.