ಬೆಂಗಳೂರು: ನಾವೆಲ್ಲ ಬಿಜೆಪಿ ಪಕ್ಷದಲ್ಲಿ ನೆಮ್ಮದಿಯಾಗಿ, ಸಂತೋಷವಾಗಿ ಇದ್ದೇವೆ. ಪಕ್ಷ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದೆ. ಪಕ್ಷ ಬಿಡುವ ಪ್ರಮೇಯವೇ ಇಲ್ಲ ಎಂದು ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಬಂದಿರುವ ನಾವೆಲ್ಲರೂ ಸಂತೋಷವಾಗಿದ್ದೇವೆ. ಬಿಜೆಪಿ ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ವಿಧಾನಸೌಧವೆಂಬ ಪವಿತ್ರ ದೇಗುಲದಲ್ಲಿ, ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸಿದ್ದರಾಮಯ್ಯರ ಮೇಲೆ ನಮಗೆ ನಂಬಿಕೆ ಇದೆ. ರಮೇಶ್ ಕುಮಾರ್ ಅವರಿಗೂ ಇದನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ವೇಳೆ ನಾವು ಅಲ್ಲಿಗೆ ಹೋದರೆ ಸಿದ್ದರಾಮಯ್ಯ ಕಾಂಗ್ರೆಸ್ ಬಿಡ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆಯನ್ನಾದರೂ ಮಾಡಲಿ, ಪುನರ್ರಚನೆಯಾದರೂ ಮಾಡಲಿ ಒಟ್ಟಿನಲ್ಲಿ ನನಗೆ ಸಚಿವ ಸ್ಥಾನ ಬೇಕು: ಮಾಮನಿ
ಕಾಂಗ್ರೆಸ್ನಿಂದ ಬರುವವರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಹೈಕಮಾಂಡ್ ಅನುಮತಿ ಕೊಟ್ಟರೆ ಮುಂದೆ ಆಪರೇಷನ್ ಬಗ್ಗೆ ನೋಡೋಣ. ಶಾಸಕ ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಕೇಳುತ್ತೇನೆ. ನಾವು ಯಾರನ್ನೂ ವಾಪಸ್ ಬಿಟ್ಟುಕೊಡಲ್ಲ. ಹಾಗಾಗಿ ನಾವ್ಯಾರು ಅಲ್ಲಿಗೆ ಹೋಗಲ್ಲ. ಸಿದ್ದರಾಮಯ್ಯ ಸಂಪರ್ಕದಲ್ಲಿ ಯಾರಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ