ಹೊಸಕೋಟೆ: ಸ್ವಂತ ಖರ್ಚಿನಲ್ಲಿ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ 5 ಸಾವಿರ ದಿನಸಿ ಕಿಟ್ಗಳನ್ನು ಸಚಿವ ಎಂಟಿಬಿ ನಾಗರಾಜ್ ವಿತರಿಸಿದರು.
ಓದಿ: ಕೊರೊನಾ 2ನೇ ಅಲೆ ಮೋದಿಯವರ ಪಾಪದ ಕೂಸಲ್ಲವೆ? : ದಿನೇಶ್ ಗುಂಡೂರಾವ್
ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ತಾಲೂಕಿನ ಕಡು ಬಡವರನ್ನ ಗುರುತಿಸಿ ಸುಮಾರು ಐದು ಸಾವಿರ ಜನರಿಗೆ ಪುಡ್ ಕಿಟ್ಗಳನ್ನ ಹೊಸಕೋಟೆಯಲ್ಲಿ ಪೌರಾಡಳಿತ ಸಚಿವ ನಾಗರಾಜ್ ವಿತರಣೆ ಮಾಡಿದರು.
ಮಹಿಳೆಯರು, ಮಕ್ಕಳು, ವ್ಯಾಪಾರಿಗಳಿಗಾಗಿ 10 ಸಾವಿರ ಕಿಟ್ ತಯಾರಿಸಲಾಗಿತ್ತು. ಅಕ್ಕಿ, ಬೆಳೆ, ಎಣ್ಣೆ, ಗೋದಿ ಸೇರಿದಂತೆ ಒಂದು ಕುಟುಂಬಕ್ಕೆ ಒಂದು ವಾರ ಬಳಕೆ ಮಾಡುವಷ್ಟು ಅಗತ್ಯ ವಸ್ತುಗಳನ್ನು ನೀಡಲಾಯಿತು.
ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷರು, ಸಚಿವ ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿ ನಮ್ಮ ಸಮಾಜದಲ್ಲೂ ಕಡು ಬಡವರು ಇದ್ದಾರೆ. ಅವರಿಗೆ ಸಹಾಯ ಮಾಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ನಾಗರಾಜ್, ತಕ್ಷಣ 300 ಫುಡ್ ಕಿಟ್ ನೀಡುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಕೊರೊನಾ ಮಹಾಮಾರಿಯಿಂದ ಲಾಕ್‌ಡೌನ್ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದು, ಆದರಿಂದ ಅವರ ನೆರವಿಗೆ ಬಂದಿದ್ದೇನೆ. ತಾಲೂಕಿನ ಎಲ್ಲಾ ಬಡವರಿಗೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ನೀಡಲಾಗುತ್ತಿದೆ. ಇದುವರೆಗೂ ಸುಮಾರು 10 ಸಾವಿರ ಕಿಟ್ ನೀಡಲಾಗಿದ್ದು, ಇನ್ನೂ ಕೊಡುತ್ತೇವೆ ಎಂದರು.
ಬಡವರಿಗೆ ಸಹಾಯ ಮಾಡುವುದರಲ್ಲಿ ರಾಜಕೀಯ ಮಾಡಬಾರದು, ಕಳೆದ ಚುನಾವಣೆಯಲ್ಲಿ ನನ್ನನ್ನ ಸೋಲಿಸಿರಬಹುದು. ಆದರೆ ನನ್ನನ್ನು ಈ ತಾಲೂಕಿನ ಜನ ಮೂರು ಬಾರಿ ಶಾಸಕನಾಗಿ ಮತ್ತು ಎರಡು ಬಾರಿ ಸಚಿವನನ್ನಾಗಿ ಮಾಡಿದ್ದಾರೆ, ಅವರ ಋಣ ತೀರಿಸಬೇಕು ಎಂದರು.
ಸಿಎಂ ಅವರು ನನ್ನನ್ನ ಕೋಲಾರ ಉಸ್ತುವಾರಿ ಸಚಿವರಾಗಿ ಮಾಡಿ ಮತ್ತೆ ತೆಗೆದು ಹಾಕಿದ್ದಾರೆ. ಇದರಿಂದ ನನಗೆ ಬೇಸರವಿಲ್ಲ, ನನ್ನ ತಾಲೂಕಿನಲ್ಲಿ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದೇನೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನ ಕೇಳಿದ್ದೆ, ಯಾಕೋ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ಆರ್. ಅಶೋಕ್ ಸಹ ಸಿಎಂಗೆ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಬೇಡಿಕೆ ಈಡೇರಬಹುದು ಎಂದು ನಂಬಿಕೆ ಇದೆ ಎಂದರು.