ETV Bharat / city

ಹಿಜಾಬ್-ಕೇಸರಿ ಶಾಲು ವಿವಾದ : ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಮಾಧುಸ್ವಾಮಿ! - ಹಿಜಾಬ್ ಕುರಿತು ಮಾಧುಸ್ವಾಮಿ ಹೇಳಿಕೆ

ಬಿಜೆಪಿ ಮುಖಂಡರ ಪ್ರಚೋದನಾತ್ನಕ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಮಾಧುಸ್ವಾಮಿ, ಗಲಾಟೆ ಮಾಡಿಸಿದ್ದು ನಾವಲ್ಲ. ಸರ್ಕಾರ ಶಾಂತಿ ಕಾಪಾಡಲು ಪ್ರಯತ್ನ ಮಾಡಿದೆ. ಈ ರೀತಿ ಮಾತನಾಡಬಾರದು ಎಂದು ಗರಂ ಆದರು..

minister j c madhuswamy
ಸಚಿವ ಜೆ ಸಿ ಮಾಧುಸ್ವಾಮಿ
author img

By

Published : Feb 9, 2022, 4:45 PM IST

ಬೆಂಗಳೂರು : ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಸಿಡಿಮಿಡಿಗೊಂಡ ಘಟನೆ ನಡೆದಿದೆ. ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್-ಕೇಸರಿ ಶಾಲು ವಿವಾದ ಸಂಬಂಧ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಯಾವುದೇ ನಿರ್ಣಯ ಕೈಗೊಳ್ಳುವುದು ಸೂಕ್ತ ಅಲ್ಲ ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಂತೆ ಸಚಿವ ಜೆ ಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿರುವುದು..

ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾರೂ ಈ ಬಗ್ಗೆ ಮಾತನಾಡಿಲ್ಲ. ತೀರ್ಪು ಬಂದ ಬಳಿಕ ಚರ್ಚೆ ಮಾಡೋಣ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾಯಾಲಯ ಏನು ಹೇಳುತ್ತದೆಯೋ ನೋಡೋಣ. ಹಿಜಾಬ್-ಕೇಸರಿ ಶಾಲು ವಿವಾದವಾದಾಗ ನಿಯಮಗಳಲ್ಲಿ ಇದ್ದಿದ್ದನ್ನು ಉಲ್ಲೇಖ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈಗ ಅದನ್ನು ಪ್ರಶ್ನೆ ಮಾಡಿ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದರು.

ಬಿಜೆಪಿ ಮುಖಂಡರ ಪ್ರಚೋದನಾತ್ಮಕ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಮಾಧುಸ್ವಾಮಿ, ಗಲಾಟೆ ಮಾಡಿಸಿದ್ದು ನಾವಲ್ಲ. ಸರ್ಕಾರ ಶಾಂತಿ ಕಾಪಾಡಲು ಪ್ರಯತ್ನ ಮಾಡಿದೆ. ಈ ರೀತಿ ಮಾತನಾಡಬಾರದು ಎಂದು ಗರಂ ಆದರು.

ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ : ಎರಡೂ ರಾಷ್ಟ್ರೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ-ಹೆಚ್​ಡಿಕೆ

ಸರ್ಕಾರ ಗಲಾಟೆ ಮಾಡಿಸುತ್ತದೋ? ಹಾಗಾದರೆ, ನಿಮ್ಮನ್ನು ಯಾವುದೋ ಪಕ್ಷದ ಏಜೆಂಟ್ ಅಂದು ಹೇಳಬಹುದಲ್ಲವೇ ಎಂದು ಸಿಡಿಮಿಡಿಗೊಂಡರು. ನಿಮ್ಮ ಪಕ್ಷದ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ ಎಂದಿದ್ದಕ್ಕೆ, ನೀವು ಬರೆಯುತ್ತೀರಿ ಅದು ಪ್ರಚೋದನೆ ಆಗುತ್ತೆ ಎಂದು ಹೇಳಲು ಆಗುತ್ತಾ? ಎಂದು ಪ್ರಶ್ನಿಸಿ ಆಕ್ರೋಶಗೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.