ETV Bharat / city

ಪಕ್ಷದ ಆಂತರಿಕ ಗೊಂದಲಕ್ಕೆ ತಲೆಕೆಡಿಸಿಕೊಳ್ಳದ ಸಿಎಂ: ರಾಜಕೀಯ ಚಟುವಟಿಕೆ ನಡುವೆ BSY ಕೂಲ್

ರಾಜ್ಯದಲ್ಲಿ ಬಣ ರಾಜಕೀಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದರೂ ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕೂಲ್ ಆಗಿದ್ದಾರೆ. ಯಾವ ಗೊಂದಲವೂ ಇಲ್ಲದೆ ಅವರು ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೈಕಮಾಂಡ್ ಅಭಯ ನೀಡಿರುವುದರಿಂದಲೇ ನೆಮ್ಮದಿಯಿಂದ ಇದ್ದಾರೆ ಎನ್ನಲಾಗುತ್ತಿದೆ.

Chief Minister BS Yediyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
author img

By

Published : Jun 16, 2021, 11:37 AM IST

ಬೆಂಗಳೂರು: ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರಾಳರಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದರೂ ಸಿಎಂ ಮಾತ್ರ ಕೂಲ್ ಆಗಿದ್ದಾರೆ. ಯಾವುದೇ ಗೊಂದಲವಿಲ್ಲದೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ.

ಇಂದು ಸಂಜೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಬೆಂಬಲಿಗರ ದಂಡು ಆಗಮಿಸುತ್ತಿದೆ. ಸಿ.ಸಿ.ಪಾಟೀಲ್, ಪ್ರಭು ಚವಾಣ್, ರಾಜುಗೌಡ, ಮಹೇಶ್ ಕುಮಟಳ್ಳಿ, ರವಿ ಸುಬ್ರಮಣ್ಯ, ಅಮೃತ ದೇಸಾಯಿ, ಬೆಳ್ಳಿ ಪ್ರಕಾಶ್​, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ 15ಕ್ಕೂ ಹೆಚ್ಚಿನ ನಾಯಕರು ತಂಡೋಪತಂಡವಾಗಿ ಕಾವೇರಿಗೆ ಆಗಮಿಸಿ ಯಡಿಯೂರಪ್ಪ ಪರ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾಯಕತ್ವ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎನ್ನುವ ಅಭಯ ನೀಡುತ್ತಿದ್ದಾರೆ. ಅರುಣ್ ಸಿಂಗ್ ಅವರನ್ನೂ ಭೇಟಿಯಾಗಿ ಇದೇ ಮಾತನ್ನು ಹೇಳುತ್ತೇವೆ ಎಂದು ತಿಳಿಸಿದ್ದಾರೆ.

ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೀಶ್ವರ್ ವಿರುದ್ಧ ಕಿಡಿಕಾರುತ್ತಿರುವ ಬಿಎಸ್​​​​​​​​​​​​​ವೈ ಬೆಂಬಲಿಗರು, ಅಸಮಧಾನ ವ್ಯಕ್ತಪಡಿಸುತ್ತಾ ನಾಯಕತ್ವ ಬದಲಾವಣೆಗೆ ಮುಂದಾದರೆ ನಾವು ಸುಮ್ಮನಿರುವುದಿಲ್ಲ ಎನ್ನುತ್ತಿದ್ದಾರೆ. ಬೆಂಬಗರ ಆಕ್ರೋಶದ ನುಡಿಗಳನ್ನು ಸಮಚಿತ್ತದಿಂದಲೇ ಆಲಿಸುತ್ತಿರುವ ಸಿಎಂ, ಎಲ್ಲರನ್ನೂ ಸಮಾಧಾನಪಡಿಸುತ್ತಿದ್ದಾರೆ. ಏನೂ ಆಗಲ್ಲ ಚಿಂತಿಸಬೇಡಿ, ನಾನೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ. ಎಲ್ಲವೂ ಸರಿಯಾಗಲಿದೆ ಸುಮ್ಮನಿರಿ ಎಂದು ಹೇಳಿ ಕಳುಹಿಸುತ್ತಿದ್ದಾರೆ.

ರಾಜ್ಯದಲ್ಲಿ ಬಣ ರಾಜಕೀಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದರೂ ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕೂಲ್ ಆಗಿದ್ದಾರೆ. ಯಾವ ಗೊಂದಲೂ ಇಲ್ಲದೆ ಎಂದಿನಂತೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗೃಹ ಕಚೇರಿಯಲ್ಲಿ ಅಧಿಕೃತ ಸಭೆಗಳಲ್ಲಿ ಭಾಗಿಯಾಗಲು ಸಿದ್ದರಾಗಿದ್ದಾರೆ. ಈ ನಡುವೆ ಆಗಮಿಸುತ್ತಿರುವ ಸಚಿವರು, ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಹೈಕಮಾಂಡ್ ಅಭಯ ನೀಡಿರುವುದರಿಂದಲೇ ಸಿಎಂ ಕೂಲ್ ಆಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಖಡಕ್​ ಸೂಚನೆ: ಬಣಗಳ ಶಕ್ತಿ ಪ್ರದರ್ಶನಕ್ಕೆ ಅರುಣ್ ಸಿಂಗ್ ಕಡಿವಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.